ಶಿವಕುಮಾರ ಜೊತೆ ಹಸ್ತಲಾಘವ ಮಾಡಲು ಮುಂದಾಗದ ಸಿದ್ದರಾಮಯ್ಯ; ಈಗಲೂ ನಾನೊಂದು ತೀರ ನೀನೊಂದು ತೀರ…

ಡಿಕೆ ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಮುನಿಸು ಆಥವಾ ಶೀತಲ ಸಮರ ಮುಗಿಯು ಲಕ್ಷಣಗಳು ಕಾಣುತ್ತಿಲ್ಲ. ಶಿವಕುಮಾರ ಜೊತೆ ಹಸ್ತಲಾಘವ ಮಾಡಲು ಕೂಡ ಸಿದ್ದರಾಮಯ್ಯ ಮುಂದಾಗದಿರುವುದು ವಿಡಿಯೋನಲ್ಲಿ ಕಾಣುತ್ತದೆ.

TV9kannada Web Team

| Edited By: Arun Belly

Jul 04, 2022 | 11:43 AM

Bengaluru:  ರಾಹುಲ್ ಗಾಂಧಿ (Rahul Gandhi) ಮಧ್ಯಸ್ಥಿಕೆ ಹೊರತಾಗಿಯೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಡುವಿನ ಮುನಿಸು ಅಥವಾ ಶೀತಲ ಸಮರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ ಮಾರಾಯ್ರೇ. ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್ ಆರ್ ಶ್ರೀನಾಥ್ ಹಾಗೂ ಇತರ ಕೆಲ ನಾಯಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ನಿರ್ಧಾರ ಪ್ರಕಟಿಸಿದ್ದು ನಿಮಗೆ ಗೊತ್ತಿದೆ. ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಶಿವಕುಮಾರ ಮತ್ತು ಸಿದ್ದರಾಮಯ್ಯ ನಡುವಿನ ಮುನಿಸು ಮತ್ತೊಮ್ಮೆ ಸಾರ್ವಜನಿಕವಾಗಿ ಬಹಿರಂಗಗೊಂಡಿತ್ತು. ಶಿವಕುಮಾರ ಜೊತೆ ಹಸ್ತಲಾಘವ ಮಾಡಲು ಕೂಡ ಸಿದ್ದರಾಮಯ್ಯ ಮುಂದಾಗದಿರುವುದು ವಿಡಿಯೋನಲ್ಲಿ ಕಾಣುತ್ತದೆ.

ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್​ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದ ವ್ಯಕ್ತಿ ವಿರುದ್ಧ ನಿರ್ದೇಶಕ ನಂದ ಕಿಶೋರ್​ ಆಕ್ರೋಶ

Follow us on

Click on your DTH Provider to Add TV9 Kannada