ನೀರಾವರಿ ಅಂದ್ರೆ ಕೃಷ್ಣಾ ಮೇಲ್ದಂಡೆ ಯೋಜನೆ ಮಾತ್ರವಾ? ಅಸೆಂಬ್ಲಿಯಲ್ಲಿ ಉತ್ತರ ಕರ್ನಾಟಕ, ಹಳೆ ಮೈಸೂರು ಶಾಸಕರ ಮಧ್ಯೆ ವಾಗ್ವಾದ

| Updated By: ಆಯೇಷಾ ಬಾನು

Updated on: Mar 28, 2022 | 6:46 PM

ಗೌಡರೇ ರಾಜ್ಯದ ಒಟ್ಟು ನೀರಾವರಿ ಯೋಜನೆಯ ಶೇಕಡಾ 57ರಷ್ಟು ಕೃಷ್ಣಾ ಭಾಗ್ಯ ಜಲ ನಿಗಮ ವ್ಯಾಪ್ತಿಗೆ ಬರುತ್ತದೆ. ಮೈಸೂರು ಮಹಾರಾಜರು KRS ಕನ್ನಂಬಾಡಿ ಕಟ್ಟಿ ಹೋಗಿದ್ದಕ್ಕೆ ನೀವು ಬದುಕಿದ್ದೀರಿ ಎಂದು ಕೆ.ಎಂ.ಶಿವಲಿಂಗೇಗೌಡಗೆ ಶಿವಾನಂದ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.

ನೀರಾವರಿ ಅಂದ್ರೆ ಕೃಷ್ಣಾ ಮೇಲ್ದಂಡೆ ಯೋಜನೆ ಮಾತ್ರವಾ? ಅಸೆಂಬ್ಲಿಯಲ್ಲಿ ಉತ್ತರ ಕರ್ನಾಟಕ, ಹಳೆ ಮೈಸೂರು ಶಾಸಕರ ಮಧ್ಯೆ ವಾಗ್ವಾದ
ವಿಧಾನಸಭೆ
Follow us on

ಬೆಂಗಳೂರು: ನೀರಾವರಿ ಯೋಜನೆ ಅಂದ್ರೆ ಕೃಷ್ಣಾ ಮೇಲ್ದಂಡೆ ಯೋಜನೆ ಮಾತ್ರವಾ? ಎಂದು ವಿಧಾನಸಭೆಯಲ್ಲಿ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಪ್ರಶ್ನೆ ಮಾಡಿದ್ದಾರೆ. ಹಾಗೂ ಶಿವಲಿಂಗೇಗೌಡ ಪ್ರಶ್ನೆಗೆ ಉತ್ತರ ಕರ್ನಾಟಕ ಭಾಗದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದ ಶಾಸಕರ ನಡುವೆ ವಾಗ್ವಾದ ನಡೆದಿದೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ನಡುವೆ ಏರಿದ ಧ್ವನಿಯಲ್ಲಿ ಚರ್ಚೆ ನಡೆದಿದೆ. ಗೌಡರೇ ರಾಜ್ಯದ ಒಟ್ಟು ನೀರಾವರಿ ಯೋಜನೆಯ ಶೇಕಡಾ 57ರಷ್ಟು ಕೃಷ್ಣಾ ಭಾಗ್ಯ ಜಲ ನಿಗಮ ವ್ಯಾಪ್ತಿಗೆ ಬರುತ್ತದೆ. ಮೈಸೂರು ಮಹಾರಾಜರು KRS ಕನ್ನಂಬಾಡಿ ಕಟ್ಟಿ ಹೋಗಿದ್ದಕ್ಕೆ ನೀವು ಬದುಕಿದ್ದೀರಿ ಎಂದು ಕೆ.ಎಂ.ಶಿವಲಿಂಗೇಗೌಡಗೆ ಶಿವಾನಂದ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಜಲಸಂಪನ್ಮೂಲ ಸಚಿವ ಕಾರಜೋಳ, ನಮ್ಮ ಸರ್ಕಾರ ರಾಜ್ಯದ ಎಲ್ಲಾ ಭಾಗವನ್ನು ಸಮಾನವಾಗಿ ನೋಡುತ್ತೆ.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಈ ಬಾರಿ 5,000 ಕೋಟಿ ಮೀಸಲಿಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 3000, ಎತ್ತಿನಹೊಳೆಗೆ 3,000, ಮೇಕೆದಾಟು, ಮಹದಾಯಿ ಯೋಜನೆಗೆ ತಲಾ 1 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದು ಕೃಷ್ಣೆಯ ಕಣ್ಣೀರಿಗೆ ಕೊನೆ ಎಂದರು. ಈ ಯೋಜನೆ ಪೂರ್ಣಗೊಳಿಸುವುದಕ್ಕೆ ಎಷ್ಟು ಶತಮಾನ ಬೇಕು? ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ನಲ್ಲಿ ಮಾಡಿದಂತೆ UKP ಅಭಿವೃದ್ಧಿ ಮಾಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂದರು.

ಇದನ್ನೂ ಓದಿ: ‘ಮೊದಲ ಮೆಸೇಜ್​ನಲ್ಲೇ ಮದ್ವೆ ಆಗ್ತೀನಿ ಎಂದಿದ್ದೆ’; ಬೆಸ್ಟ್​​ ಫ್ರೆಂಡ್​ನೇ ಮದುವೆ ಆದ ಕಥೆ ಹೇಳಿದ ನಟ ರಕ್ಷ್

Imran Khan ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ; ಮಾರ್ಚ್ 31ರಂದು ನಡೆಯಲಿದೆ ಚರ್ಚೆ

Published On - 6:45 pm, Mon, 28 March 22