ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ: ಇಲ್ಲಿದೆ ಮಾಹಿತಿ

ನಾಗಸಮುದ್ರಂ ರೈಲ್ವೆ ನಿಲ್ದಾಣದ ಲೂಪ್ ಲೈನ್ ನವೀಕರಣ ಕಾರ್ಯದಿಂದ ಜುಲೈ 2 ರಿಂದ 28 ರವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಮತ್ತೊಂದೆಡೆ ಬೀರೂರು ಮತ್ತು ರಾಮಗಿರಿ ನಿಲ್ದಾಣಗಳಲ್ಲಿ ಕೆಲವು ರೈಲುಗಳ ತಾತ್ಕಾಲಿಕ ನಿಲುಗಡೆ ವಿಸ್ತರಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ: ಇಲ್ಲಿದೆ ಮಾಹಿತಿ
ವಂದೇ ಭಾರತ್ ಎಕ್ಸ್‌ಪ್ರೆಸ್

Updated on: Jun 26, 2025 | 7:49 AM

ಬೆಂಗಳೂರು, ಜೂನ್​ 26: ನಾಗಸಮುದ್ರಂ ರೈಲ್ವೆ ನಿಲ್ದಾಣದಲ್ಲಿ ಸದ್ಯ ಇರುವ ಲೂಪ್​ ಲೈನ್ (ರೋಡ್-3) ಅನ್ನು ಮುಖ್ಯ ಲೈನ್ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವುದು ಮತ್ತು ಓಹೆಚ್​​​ಇ (OHE) ಪೋರ್ಟಲ್​ಗಳನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜುಲೈ 2 ರಿಂದ 28 ರವರೆಗೆ ಅಂದರೆ 27 ದಿನಗಳ ಕಾಲ ಲೂಪ್ ಲೈನ್ ಅನ್ನು ಸ್ಥಗಿತಗೊಳಿಸಲಾಗಿದೆ. ಆ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಯಾವೆಲ್ಲಾ ರೈಲುಗಳ ಮಾರ್ಗ ಬದಲಾವಣೆ?

  • ರೈಲು ಸಂಖ್ಯೆ 22231 ಕಲಬುರಗಿ ಟು ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ಶುಕ್ರವಾರ ಹೊರತುಪಡಿಸಿ) ಅನಂತಪುರ, ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದೆ.

ನೈರುತ್ಯ ರೈಲ್ವೆ ಟ್ವೀಟ್​

  • ರೈಲು ಸಂಖ್ಯೆ 20703 ಕಾಚೇಗುಡ್​​ ಟು ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (ಬುಧವಾರ ಹೊರತುಪಡಿಸಿ) ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.
  • ರೈಲು ಸಂಖ್ಯೆ 22232 ಎಸ್‌ಎಂವಿಟಿ ಬೆಂಗಳೂರು ಟು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ (ಗುರುವಾರ ಹೊರತುಪಡಿಸಿ) ಯಲಹಂಕ, ಪೆನುಕೊಂಡ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮಾವರಂ ಮತ್ತು ಅನಂತಪುರ ಮಾರ್ಗವಾಗಿ ಸಂಚರಿಸಲಿದೆ.

ಇದನ್ನೂ ಓದಿ: ಮುಕ್ತಾಯ ಹಂತಕ್ಕೆ ಸಿಗಂದೂರು ಸೇತುವೆ ಕಾಮಗಾರಿ: ಡ್ರೋನ್​​ ಕಣ್ಣಲ್ಲಿ ಸೆರೆಯಾಯ್ತು ಲೋಡ್​ ಟೆಸ್ಟಿಂಗ್ ದೃಶ್ಯ

ಮಾರ್ಗ ಬದಲಾವಣೆಯ ಅವಧಿಯಲ್ಲಿ, ಮೇಲೆ ತಿಳಿಸಿದ ಯಾವುದೇ ರೈಲುಗಳ ನಿಲುಗಡೆಗಳನ್ನು ತಪ್ಪಿಸುವುದಿಲ್ಲ. ಎಲ್ಲಾ ನಿಗದಿತ ನಿಲುಗಡೆಗಳನ್ನು ನಿರ್ವಹಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಬೀರೂರು ಮತ್ತು ರಾಮಗಿರಿ ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ವಿಸ್ತರಣೆ

ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ಬೀರೂರು ಮತ್ತು ರಾಮಗಿರಿ ನಿಲ್ದಾಣಗಳಲ್ಲಿ ಈ ಕೆಳಗಿನ ರೈಲು ಸೇವೆಗಳ ತಾತ್ಕಾಲಿಕ ನಿಲುಗಡೆಯನ್ನು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಅಂದರೆ ಆರು ತಿಂಗಳ ಅವಧಿಗೆ ವಿಸ್ತರಿಸಿದೆ.

ಬೀರೂರು ನಿಲ್ದಾಣ

ರೈಲು ಸಂಖ್ಯೆ 16587, 16588 ಯಶವಂತಪುರ-ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆಯು ವಿಸ್ತರಿಸಿದ ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಸಮಯದ ಪ್ರಕಾರ ಮುಂದುವರಿಯಲಿದೆ.

ರಾಮಗಿರಿ ನಿಲ್ದಾಣ

ಕೆಳಗಿನ ರೈಲುಗಳು ಪ್ರಾಯೋಗಿಕ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ಸಮಯದ ಪ್ರಕಾರ ರಾಮಗಿರಿ ನಿಲ್ದಾಣದಲ್ಲಿ ನಿಲುಗಡೆಯನ್ನು ಮುಂದುವರೆಯಲಿವೆ.

ಇದನ್ನೂ ಓದಿ: ಇನ್ಮುಂದೆ ಐದು ಖಾಸಗಿ ಆ್ಯಪ್​ಗಳ ಮೂಲಕವೂ ಖರೀದಿಸಬಹುದು ನಮ್ಮ ಮೆಟ್ರೋ ಟಿಕೆಟ್!

  • ರೈಲು ಸಂಖ್ಯೆ 17325/17326 ಬೆಳಗಾವಿ – ಮೈಸೂರು – ಬೆಳಗಾವಿ ವಿಶ್ವಮಾನವ ದೈನಂದಿನ ಎಕ್ಸ್‌ಪ್ರೆಸ್.
  • ರೈಲು ಸಂಖ್ಯೆ 17391/17392 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.