ನಾಳೆ ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ: ಕೆ.ಆರ್​.ಮಾರ್ಕೆಟ್​ನಲ್ಲಿ ಹೂವು, ಹಣ್ಣು ಖರೀದಿ ಜೋರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 04, 2022 | 10:07 AM

ವರಮಹಾಲಕ್ಷ್ಮೀ ಹಬ್ಬ ಹಿನ್ನಲೆ ಕೆ.ಆರ್ ಮಾರ್ಕೆಟ್​ನಲ್ಲಿ ಹಬ್ಬದ ಖರೀದಿ ಜೋರಾಗಿದ್ದು, ಕೆ.ಆರ್ ಮಾರುಕಟ್ಟೆಯಲ್ಲಿ ಜನಜಾತ್ರೆ ನಡೆದಿದೆ. ನಗರದ ಮಾರುಕಟ್ಟೆಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಖರೀದಿ ಅಬ್ಬರ ಶುರುವಾಗಿದೆ.

ನಾಳೆ ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ: ಕೆ.ಆರ್​.ಮಾರ್ಕೆಟ್​ನಲ್ಲಿ ಹೂವು, ಹಣ್ಣು ಖರೀದಿ ಜೋರು
ಕೆ.ಆರ್​.ಮಾರ್ಕೆಟ್​ನಲ್ಲಿ ಹಬ್ಬದ ಖರೀದಿ ಭರಾಟೆ ಜೋರು
Follow us on

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬ ಹೆಸರೇ ಹೇಳುವಂತೆ ಬೇಡಿದ ವರ ಕರುಣಿಸುವ ಮಹಾಲಕ್ಷ್ಮೀ. (Varamahalakshmi) ಈ ಹಬ್ಬ ಅಥವಾ ವ್ರತ ಆಚರಿಸುವುದರಿಂದ ತಾಯಿ ಲಕ್ಷ್ಮಿಯ ಸಂಪೂರ್ಣ ಅನುಗ್ರಹಕ್ಕೆ ಪಾತ್ರವಾಗಬಹುದು. ಇನ್ನೂ ವರಮಹಾಲಕ್ಷ್ಮೀ ಹಬ್ಬ ಹೆಣ್ಮಕ್ಕಳಿಗೆ ಮೆಚ್ಚಿನ ಹಬ್ಬವೆಂದು ಹೇಳಬಹುದು. ಈ ಹಬ್ಬಕಾಗಿಯೇ ಅವರು ಅಂದವಾಗಿ ರೆಡಿಯಾಗಿ ಮನೆ ತುಂಬಾ ಓಡಾಡುತ್ತಿರುತ್ತಾರೆ. ಈ ಹಬ್ಬಕ್ಕಾಗಿ ಮನೆ ಎರಡು ವಾರಗಳ ಮುಂಚೆಯೇ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ನಾಳೆ ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬವಿದ್ದು, ಸಡಗರದ ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಸಿಟಿ ಜನರು ಮುಂದಾಗಿದ್ದಾರೆ.

ಇದನ್ನೂ ಓದಿ; National Mango Day 2022: ಇಂದು ರಾಷ್ಟ್ರೀಯ ಮಾವು ದಿನ, ಹಣ್ಣುಗಳ ರಾಜನ ಬಗ್ಗೆ ಒಂದಿಷ್ಟು ಅರಿಯೋಣ ಬನ್ನಿ

ವರಮಹಾಲಕ್ಷ್ಮೀ ಹಬ್ಬ ಹಿನ್ನಲೆ ಕೆ.ಆರ್ ಮಾರ್ಕೆಟ್​ನಲ್ಲಿ ಹಬ್ಬದ ಖರೀದಿ ಜೋರಾಗಿದ್ದು, ಕೆ.ಆರ್ ಮಾರುಕಟ್ಟೆಯಲ್ಲಿ ಜನಜಾತ್ರೆ ನಡೆದಿದೆ. ನಗರದ ಮಾರುಕಟ್ಟೆಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಖರೀದಿ ಅಬ್ಬರ ಶುರುವಾಗಿದ್ದು, ಕೆ.ಆರ್ ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಹಬ್ಬದ ವಸ್ತುಗಳನ್ನ ಕೊಳ್ಳಲು ಜನ ಬ್ಯುಸಿಯಾಗಿದ್ದಾರೆ. ಈ ಬಾರಿ ವರಮಹಾಲಕ್ಷ್ಮೀ ಹಬ್ಬವನ್ನು ಜನತೆ ಸಡಗರದಿಂದ ಆಚರಿಸುತ್ತಿದ್ದಾರೆ.

ಇದನ್ನೂ ಓದಿ; 5G Service: ಆಗಸ್ಟ್​ನಿಂದ ಭಾರತದಲ್ಲಿ ಏರ್​ಟೆಲ್ 5G ಸೇವೆ: ಮೊದಲ ಗುತ್ತಿಗೆ ಎರಿಕ್​ಸನ್ ಪಾಲು

ದರದಲ್ಲಿ ಕೊಂಚ ಏರಿಕೆ:

ಕಳೆದ ಮೂರು ದಿನಕ್ಕೆ ಹೋಲಿಸಿದರೆ ಹೂವು, ಹಣ್ಣು ಬೆಲೆಗಳ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ. ಹಣ್ಣುಗಳಲ್ಲಿ 30-40 ಏರಿಕೆಯಾದರೆ, ಹೂವುಗಳಲ್ಲಿ 40- 50 ರೂ ಏರಿಕೆಯಾಗಿದೆ. ದರ ಕೊಂಚ ಏರಿಕೆಯಾಗಿದ್ರು ಹಬ್ಬದ ಪರ್ಚೆಸಲ್ಲಿ ಸಿಲಿಕಾನ್ ಸಿಟಿ ಮಂದಿ ಬ್ಯುಸಿಯಾಗಿದ್ದಾರೆ. ಕೋವಿಡ್ ಹಿನ್ನಲೆ ಕಳೆದೆರಡು ಮೂರು ವರ್ಷದಿಂದ ಹಬ್ಬ ಆಚರಿಸದ ಜನರಿಗೆ ಈ ಬಾರಿ ಹಬ್ಬ ಜೋರು ಮಾಡುವ ಉತ್ಸಾಹದಲ್ಲಿದ್ದಾರೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆಯ ಶಾಕ್

ಮಲ್ಲಿಗೆ ಒಂದು ಮಾರು 200
ಕನಕಾಂಬರ ಒಂದು ಮಾರು 300 kg
ಸೇವಂತಿಗೆ 400 kg
ಗುಲಾಬಿ – 410 kg
ಸುಗಂಧರಾಜ 110 kg
ಚೆಂಡು ಹೂವು 80 kg

ಇಂದಿನ ಹಣ್ಣುಗಳ ಬೆಲೆ

– ಸೇಬು 180 kg
– ದಾಳಿಂಬೆ 150 kg
– ಮೂಸಂಬಿ 100 kg
– ಆರೆಂಜ್ 220 kg
– ಸಪೋಟ 200 kg
– ಸೀಬೆಹಣ್ಣು 100 kg
– ಏಲಕ್ಕಿ ಬಾಳೆಹಣ್ಣು 80 kg
– ದ್ರಾಕ್ಷಿ 200-220 kg

ಅಗತ್ಯ ವಸ್ತುಗಳ ಬೆಲೆ

– ಮಾವಿನ ಎಲೆ 20 – ಕಟ್ಟು
– ಬಾಳೆ ಕಂಬ – 50
– ಬೇವಿನ ಸೊಪ್ಪು – 20 – ಕಟ್ಟು
– ತುಳಸಿ ತೋರಣ – 50 – ಮಾರು
– ಬೆಲ್ಲ (ಅಚ್ಚು / ಉಂಡೆ) – 70 – 80 kg

Published On - 8:48 am, Thu, 4 August 22