Bangalore News: ವಾಹನ ದಟ್ಟಣೆಗೆ ಪರಿಹಾರ ಕಂಡುಕೊಂಡ ಬೆಂಗಳೂರು ಪೊಲೀಸರು; ಟ್ರಾಫಿಕ್ ಜಂಜಾಟಕ್ಕೆ ಬೀಳಲಿದೆ ಬ್ರೇಕ್
Bangalore Traffic: ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಗೂಗಲ್ ಅಧ್ಯಯನ ನಡೆಸಿದ್ದಾರೆ. ಅಧ್ಯಯನದಂತೆ ಟ್ರಾಫಿಕ್ ಸಿಗ್ನಲ್ ಟೈಮಿಂಗ್ ಅನ್ನು ಕತ್ರಿಗುಪ್ಪೆ ಸಿಗ್ನಲ್ನಲ್ಲಿ ಅಳವಿಡಿಸಿ ಯಶಸ್ವಿಕಂಡಿದೆ. ಇತರೆ ಕಡೆಗಳಲ್ಲೂ ಟೈಮಿಂಗ್ ಅಳವಡಿಕೆಗೆ ಚಿಂತನೆ ನಡೆಸಲಾಗುತ್ತಿದೆ.
ಬೆಂಗಳೂರು: ನಗರದಲ್ಲಿ ವಾಹನ ಸಂಚಾರಗಳ ಓಡಾಡ ಹೆಚ್ಚಾಗತ್ತಿದ್ದು, ದಿನನಿತ್ಯ ಜನರು ಟ್ರಾಫಿಕ್ ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಈ ಟ್ರಾಫಿಕ್ ಜಂಜಾಟವನ್ನು ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸ್ ಇಲಾಖೆ ಗೂಗಲ್ ಮೊರೆಹೋಗಿದ್ದು, ಇಲ್ಲಿ ನಡೆಸಿದ ಅಧ್ಯಯನವನ್ನು ಪ್ರಯೋಗಿಸಲು ಮುಂದಾಗಿದೆ. ಈಗಾಗಲೇ ಗೂಗಲ್ ಅಧ್ಯಯನದಂತೆ ಟ್ರಾಫಿಕ್ ಸಿಗ್ನಲ್ ಟೈಮಿಂಗ್ ಅನ್ನು ಕತ್ತರಿಗುಪ್ಪೆ ಸಿಗ್ನಲ್ ಬಳಿ ಪ್ರಾಯೋಗಿಕವಾಗಿ ಅಳವಡಿಸಿತು. ಈ ಪ್ರಯೋಗದಲ್ಲಿ ಯಶಸ್ವಿ ಕಂಡ ಹಿನ್ನೆಲೆ ಇತರೆ ಕಡೆಗಳಲ್ಲೂ ಟೈಮಿಂಗ್ ಸೆಟ್ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿರುವ ಹಿನ್ನೆಲೆ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ ನಗರ ಟ್ರಾಫಿಕ್ ಪೊಲೀಸರು, ಗೂಗಲ್ ಅಧ್ಯಯ ನಡೆಸಿದ್ದಾರೆ. ಈ ಅಧ್ಯಯನದ ಮೂಲಕ ಕಂಡುಕೊಂಡ ಟ್ರಾಫಿಕ್ ಸಿಗ್ನಲ್ ಟೈಮಿಂಗ್ ಅನ್ನು ಮೊದಲ ಬಾರಿಗೆ ಕತ್ತರಿಗುಪ್ಪೆಯಲ್ಲಿ ಪ್ರಯೋಗಿಸಲಾಗಿದೆ.
ಕತ್ರಿಗುಪ್ಪೆಯ ಜಂಕ್ಷನ್ ಸಂಪರ್ಕಿಸುವ ನಾಲ್ಕು ರಸ್ತೆಗಳ ಸಿಗ್ನಲ್ ಬಗ್ಗೆ ಉಪಗ್ರಹದ ನೆರವಿನಿಂದ ವೈಜ್ಞಾನಿಕವಾಗಿ ಗೂಗಲ್ ಅಧ್ಯಯನ ನಡೆಸಿದೆ. ನಾಲ್ಕು ರಸ್ತೆಯಲ್ಲಿ ಯಾವ ಸಮಯದಲ್ಲಿ ಎಷ್ಟು ವಾಹನ ದಟ್ಟಣೆ ಇರುತ್ತದೆ, ಯಾವ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಇರುತ್ತದೆ, ಬೆಳಗಿನ ಅವದಿಯಲ್ಲಿ ಎಷ್ಟು, ಮಧ್ಯಾಹ್ನ ಎಷ್ಟು, ಸಂಜೆ ಎಷ್ಟು ಹಾಗೂ ರಾತ್ರಿ ವೇಳೆ ಎಷ್ಟು ದಟ್ಟಣೆ ಇರುತ್ತದೆ, ಯಾವ ರಸ್ತೆಗೆ ಯಾವ ಸಮಯದಲ್ಲಿ ಎಷ್ಟು ಸೆಕೆಂಡ್ ಕಾಲಾವಧಿ ನೀಡಬೇಕು ಎಂಬಿತ್ಯಾದಿಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಸಲಾಗಿದೆ.
ಈ ಅಧ್ಯಯನದ ಮೂಲಕ ಕತ್ತರಿಗುಪ್ಪೆ ಸಿಗ್ನಲ್ನಲ್ಲಿ ಟೈಮರ್ ಸೆಕೆಂಡ್ ಅನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಟ್ರಾಫಿಕ್ ಪೊಲೀಸರ ಪ್ರಾಯೋಗಿಕ ಯೋಜನೆಯು ಯಶಸ್ವಿಯಾಗಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಂಡ ಟ್ರಾಫಿಕ್ ಪೊಲೀಸರ ಮುಖದಲ್ಲಿ ಮಂದಹಾಸ ಮೂಡಿದೆ.
ಕತ್ತರಿಗುಪ್ಪೆ ಸಿಗ್ನಲ್ಗೆ ಅಳವಡಿಸಿದ ಹೊಸ ಟೈಮಿಂಗ್ನಿಂದಾಗಿ ಸಿಗ್ನಲ್ನಲ್ಲಿ ವಾಹನ ದಟ್ಟಣೆ ಇಳಿಕೆಯಾಗಿದೆ. ಯಶಸ್ವಿ ಪ್ರಯೋಗದ ನಂತರ ನಗರದ ಇತರೆ ಕಡೆಗಳಲ್ಲಿ ವ್ಯವಸ್ಥೆಯನ್ನು ಜಾರಿಗೊಳಿಸಲು ಪೊಲೀಸರು ಒಲವು ತೋರಿಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.
Published On - 11:44 am, Thu, 4 August 22