ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ: ಮಾರ್ಗ ಬದಲಾವಣೆ ಇಲ್ಲಿದೆ

|

Updated on: Aug 10, 2024 | 9:19 AM

ಬೆಂಗಳೂರಿನ ಆರ್.ಟಿ ನಗರ ಮುಖ್ಯರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಕೆಲವು ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಆದರೆ, ದ್ವಿಚಕ್ರ ವಾಹನ ಸಂಚಾರಕ್ಕೆ ಅಡಚಣೆ ಇಲ್ಲ ಎಂದು ಆರ್​ಟಿ ನಗರ ಸಂಚಾರ ಪೊಲೀಸ್​ ಠಾಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ: ಮಾರ್ಗ ಬದಲಾವಣೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್​ 10: ಆರ್.ಟಿ ನಗರ ಮುಖ್ಯರಸ್ತೆಯಲ್ಲಿ (RT Nagar) ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರವೀಂದ್ರನಾಥ್ ಕಾಗೂರ್ ವೃತ್ತದಿಂದ (ಗುಂಡುರಾವ್ ಜಂಕ್ಷನ್) ಆರ್.ಟಿ ನಗರ ಮುಖ್ಯರಸ್ತೆಗೆ ಸಂಚಾರವನ್ನು ನಿರ್ಭಂದಿಸಲಾಗಿದೆ. ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿದೆ.

ಮಾರ್ಗ ಬದಲಾವಣೆ ಇಲ್ಲಿದೆ

ಜಯಮಹಲ್ ಮುಖ್ಯ ರಸ್ತೆಯಿಂದ ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯ ರಸ್ತೆಗೆ ಚಲಿಸುವ ಬಿಎಂಟಿಸಿ ಬಸ್ ಗಳು ಸಿ.ಕ್ಯೂ.ಎ.ಎಲ್ ಕ್ರಾಸ್‌ ನಿಂದ ಮೇಟ್ರಿ ಸರ್ಕಲ್‌ನಿಂದ ಬಲ ತಿರುವು ಪಡೆದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಸಿಬಿಐ ಅಂಡರ್‌ಪಾಸ್ ಬಳಿ ಬಲ ತಿರುವು ಪಡೆದುಕೊಂಡು ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಸಂಚರಿಸಬಹುದಾಗಿರುತ್ತದೆ.

ಜಯಮಹಲ್ ಮುಖ್ಯರಸ್ತೆಯಿಂದ ಕಾವಲ್ ಬೈರಸಂದ್ರ ಹಾಗೂ ಸುಲ್ತಾನ್ ಪಾಳ್ಯ ಕಡೆಗೆ ಚರಿಸುವ ಬಿಎಂಟಿಸಿ ಬಸ್ ಗಳು ಹಾಗೂ ಇತರೆ ವಾಹನಗಳು ಸಿಕ್ಯೂಎಎಲ್ ಕ್ರಾಸ್ ಬಳಿ ಬಲ ತಿರುವು ಪಡೆದುಕೊಂಡು ವಾಟರ್‌ಬ್ಯಾಂಕ್ ಜಂಕ್ಷನ್ ಕಡೆಯಿಂದ ದೇವೆಗೌಡ ರಸ್ತೆಯ (ಪಿ.ಆರ್.ಟಿ.ಸಿ) ಮುಖಾಂತರ ದಿಣ್ಣೂರು ಜಂಕ್ಷನ್ ಬಳಿ ಬಲ ತಿರುವು ಪಡೆದುಕೊಂಡು ಸುಲ್ತಾನ್ ಪಾಳ್ಯ ಹಾಗೂ ಕಾವಲ್ ಬೈರಸಂದ್ರದ ಕಡೆಗೆ ಚಲಿಸಬಹುದಾಗಿರುತ್ತದೆ.

ವಾಟರ್ ಬ್ಯಾಂಕ್ ಜಂಕ್ಷನ್, ರಾಧಾಕೃಷ್ಣ ಥಿಯೇಟರ್ ಹಾಗೂ ಮಠದಹಳ್ಳಿ ಕಡೆಯಿಂದ ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಚಲಿಸುವ ಇತರೆ ವಾಹನಗಳು ರವೀಂದ್ರನಾಥ್ ಠಾಗೂರ್ ವೃತ್ತದಿಂದ (ಗುಂಡುರಾವ್ ಅಂಕ್ಷನ್) ಬಳಿ ಎಡ ತಿರುವು ಪಡೆದು ತರಳಬಾಳು ರಸ್ತೆ ಮೂಲಕ ಬಳ್ಳಾರಿ ಮುಖ್ಯರಸ್ತೆಗೆ ಬಂದು ಎಡ ತಿರುವು ಪಡೆದುಕೊಂಡು ನಂತರ ಮೇಘ್ರ ಸರ್ಕಲ್ ಬಳಿ ಯು ಟರ್ನ್ ಪಡೆದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಸಿಬಿಐ ಅಂಡರ್‌ಪಾಸ್ ಬಳಿ ಬಲ ತಿರುವು ಪಡೆದುಕೊಂಡು ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಸಂಚರಿಸಬಹುದಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ 1 ವಾರ ವಾಹನ ಸಂಚಾರ ಬಂದ್​!

ಸಂಚಾರಿ ನಿಯಮ ಉಲ್ಲಂಘನೆ ಒಂದೇ ದಿನ 355 ಕೇಸ್​ ದಾಖಲು

ಬೆಂಗಳೂರು ನಗರದಲ್ಲಿ ಉಂಟಾಗುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹಾಗೂ ಹೆಚ್ಚಾಗಿ ಕಂಡುಬರುತ್ತಿರುವ ಸಂಚಾರ ನಿಯಮಗಳ ಉಲ್ಲಂಘನೆಗಳಿಗೆ ಕಡಿವಾಣ ದೃಷ್ಟಿಯಿಂದ ಸಂಚಾರ ದಕ್ಷಿಣ ವಿಭಾಗ ಪೊಲೀಸರು ಶುಕ್ರವಾರ ವಿಶೇಷ ಕಾರ್ಯಾಚರಣೆಯನ್ನು ನಡೆಸಿದರು.

ಈ ವೇಳೆ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆ-1988 ರ ಅಡಿಯಲ್ಲಿ 355 ಪ್ರಕರಣಗಳು ದಾಖಲಾಗಿವೆ.

ಸಂಚಾರದ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ (one way) 215, ವಾಹನಗಳಿಗೆ ದೋಷಪೂರಿತ ನಂಬರ್ ಪ್ಲೇಟ್ ಆಳವಡಿಸಿಕೊಂಡು ವಾಹನ ಚಲಾಯಿಸುತ್ತಿದ್ದವರ ವಿರುದ್ಧ (Defective number plate) 103 ಪ್ರಕರಣಗಳು ದಾಖಲಾಗಿವೆ.

ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ (Footpath riding) 30, ನಿಗದಿಗಿಂತ ಹೆಚ್ಚಿನ ದರ ಪಡೆಯುತ್ತಿದ್ದ ಆಟೋ ಚಾಲಕರ ವಿರುದ್ಧ (Demanding excess fare) 5 ಪ್ರಕರಣಗಳು ಮತ್ತು ಬಾಡಿಗೆ ಹೋಗಲು ನಿರಾಕರಿಸುತ್ತಿದ್ದ ಆಟೋ ಚಾಲಕರ ವಿರುದ್ಧ (Refuse to go for hire) 2 ಪ್ರಕರಣಗಳು ದಾಖಲಾಗಿವೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮಾಧ್ಯಮ ಪ್ರಕ ಣೆ ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ