ಟ್ರೋಲ್ ಪೇಜ್, ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ದೂರು ನೀಡಿದ ಅವಧೂತ ವಿನಯ್ ಗುರೂಜಿ!

| Updated By: sandhya thejappa

Updated on: Jul 26, 2022 | 10:45 AM

ಕೆಪಿಸಿಸಿ ಆನೇಕಲ್ ವಿಭಾಗ ಸೋಷಿಯಲ್ ಮೀಡಿಯಾ ವಿಂಗ್ ಸೇರಿ ಸುಮಾರು 22 ಟ್ರೋಲ್ ಪೇಜ್​ಗಳ ಮೇಲೆ ಪ್ರಕರಣ ದಾಖಲಾಗಿದೆ.

ಟ್ರೋಲ್ ಪೇಜ್, ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ದೂರು ನೀಡಿದ ಅವಧೂತ ವಿನಯ್ ಗುರೂಜಿ!
ವಿನಯ್ ಗುರೂಜಿ
Follow us on

ಬೆಂಗಳೂರು: ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿಗೆ (Vinay Guruji) ತೇಜೋವಧೆ ಆಗಿದೆ ಎಂದು ಟ್ರೋಲ್ ಪೇಜ್​ಗಳು (Troll Pages) ಮತ್ತು ಯೂಟ್ಯೂಬ್ ಚಾನೆಲ್​ಗಳ (YouTube Channels) ವಿರುದ್ಧ ದೂರು ದಾಖಲಾಗಿದೆ. ತಮ್ಮ ಪಿಆರ್​ಓ ಮೂಲಕ ವಿನಯ್ ಗುರೂಜಿ ದೂರು ನೀಡಿದ್ದು, ಕೆಪಿಸಿಸಿ ಆನೇಕಲ್ ವಿಭಾಗ ಸೋಷಿಯಲ್ ಮೀಡಿಯಾ ವಿಂಗ್ ಸೇರಿ ಸುಮಾರು 22 ಟ್ರೋಲ್ ಪೇಜ್​ಗಳ ಮೇಲೆ ಪ್ರಕರಣ ದಾಖಲಾಗಿದೆ. ತಲೆಯ ಮೇಲೆ ಕಾಲಿಡುವ ದೃಶ್ಯವನ್ನು ಪೋಸ್ಟ್ ಮಾಡಿ ಅದರಲ್ಲಿ ಕೆಟ್ಟದಾಗಿ ಕಾಮೆಂಟ್ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖವಾಗಿದೆ.

ಪೋಸ್ಟ್​ನಲ್ಲಿ ಏನಿದೆ?:
ರಾತ್ರಿ ಕುಡಿದ ಹೆಂಡದ ಅಮಲಿನಲ್ಲಿ ತಲೆಯ ಮೇಲೆ ಕಾಲಿಡುತ್ತಿರುವ ಗುರೂಜಿ, ನಶೆಯಲ್ಲಿ ನಿಲ್ಲೋಕೆ ಆಗುತ್ತಿಲ್ಲ. ಸಾಮಾನ್ಯ ಮನುಷ್ಯನಾಗಿ ಮೋಜು- ಮಸ್ತಿ ಮಾಡಿದರೂ ಯಾರೂ ಪ್ರಶ್ನಿಸಲ್ಲ. ಆದರೆ ತಾನು ದೇವರ ಅವತಾರ ಅಂತ ಬೊಗಳೆ ಬಿಟ್ಟು ಜನರ ಭಾವನೆ- ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡು ದೇವರುಗಳ ಮಾನ ಮರ್ಯಾದೆ ಹರಾಜು ಹಾಕುತ್ತಿರುವುದನ್ನು ಸಹಿಸುವುದು ಹೇಗೆ? ಇವನನ್ನು ದೇವನ ಅವತಾರ ಪುರುಷ ಅಂತ ಒಪ್ಪಿದರೆ, ದೇವರು ಹೆಂಡ ಕುಡಿತಾನೆ, ಹುಡುಗಿಯರ ಸಂಗ ಮಾಡುತ್ತಾನೆ, ಸಿಗರೇಟ್ ಹೊಡೆಯುತ್ತಾನೆ ಅಂತನೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ವಿನಯ್ ಗುರೂಜಿ ವಿರುದ್ಧ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Kargil Vijay Diwas 2022: ಕಾರ್ಗಿಲ್​ ಯುದ್ಧದಲ್ಲಿ ಹೋರಾಡಿದ ವೀರ ಯೋಧರ ಭಾವಚಿತ್ರಗಳು ಇಲ್ಲಿವೆ

ಇದನ್ನೂ ಓದಿ
India Covid Updates: ಭಾರತದಲ್ಲಿ 14,830 ಮಂದಿ ಕೊರೊನಾ ಸೋಂಕಿತರು ಪತ್ತೆ, 36 ಸಾವು
Gujarat Hooch Tragedy: ಗುಜರಾತ್​​ನಲ್ಲಿ ಕಳ್ಳಭಟ್ಟಿ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆ; 45 ಜನ ಆಸ್ಪತ್ರೆಗೆ ದಾಖಲು
5G Auctions: ಇಂದಿನಿಂದ 5G ಸ್ಪೆಕ್ಟ್ರಮ್ ಹರಾಜು: ಅಖಾಡದಲ್ಲಿದೆ 4 ಕಂಪನಿಗಳು, ಇಲ್ಲಿದೆ ಎಲ್ಲ ಮಾಹಿತಿ
Mangaluru: ಮಂಗಳೂರು ಪಬ್​ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರ ಅಡ್ಡಿ

ಇಂತಹ ಪೋಸ್ಟ್​ಗಳಿಂದ ಸ್ವಾಮಿಜಿಯವರ ತೇಜೋವಧೆ ಆಗಿದೆ. ಅವರ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಸಮಾಜದಲ್ಲಿ ಅಶಾಂತಿಯನ್ನ ಸೃಷ್ಟಿಸಿ, ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿರುವ ಟ್ರೋಲಿಗರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಬನಶಂಕರಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Tiranga Rally 2022: ಶ್ರೀನಗರದಿಂದ ಲೇಹ್​ಗೆ ತಿರಂಗಾ ಯಾತ್ರೆ; ಇಂದು ಕಾರ್ಗಿಲ್​ನಲ್ಲಿ ತೇಜಸ್ವಿ ಸೂರ್ಯ  ಧ್ವಜಾರೋಹಣ

Published On - 9:43 am, Tue, 26 July 22