ಸಾಲು ಸಾಲು ಸಂಕಷ್ಟದ ನಡುವೆ ಕುಟುಂಬ ಸಮೇತರಾಗಿ ಸಚಿವ ಕೆ ಎಸ್ ಈಶ್ವರಪ್ಪ ಅವಧೂತ ವಿನಯ್ ಗುರೂಜಿ ಭೇಟಿ

K S Eshwarappa - Vinay Guruji: ಸಚಿವ ಸ್ಥಾನಕ್ಕೆ ಕುತ್ತು, ಕಾಂಗ್ರೆಸ್ ನಿಂದ ರಾಜೀನಾಮೆಗಾಗಿ ನಿರಂತರ ಹೋರಾಟಗಳ ಹೊಯ್ದಾಟದ ಮಧ್ಯೆ ದಿಢೀರ್ ಆಗಿ ವಿನಯ್ ಗುರೂಜಿ ಅವರನ್ನು ಸಚಿವ ಕೆ ಎಸ್​ ಈಶ್ವರಪ್ಪ ಭೇಟಿ ಮಾಡಿದರು.

ಸಾಲು ಸಾಲು ಸಂಕಷ್ಟದ ನಡುವೆ ಕುಟುಂಬ ಸಮೇತರಾಗಿ ಸಚಿವ ಕೆ ಎಸ್ ಈಶ್ವರಪ್ಪ ಅವಧೂತ ವಿನಯ್ ಗುರೂಜಿ ಭೇಟಿ
ಸಾಲು ಸಾಲು ಸಂಕಷ್ಟದ ನಡುವೆ ಕುಟುಂಬ ಸಮೇತರಾಗಿ ಸಚಿವ ಈಶ್ವರಪ್ಪ ವಿನಯ್ ಗುರೂಜಿ ಭೇಟಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 24, 2022 | 1:34 PM

ಚಿಕ್ಕಮಗಳೂರು: ಸಾಲು-ಸಾಲು ಸಂಕಷ್ಟದ ನಡುವೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್​ ಈಶ್ವರಪ್ಪ ಅವರು ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ. ಕುಟುಂಬ ಸಮೇತರಾಗಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ತೆರಳಿ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಸಂಕಟ ಬಂದಾಗ ಅವಧೂತರ ಮೊರೆ ಹೋದ ಸಚಿವ: ಸಚಿವ ಸ್ಥಾನಕ್ಕೆ ಕುತ್ತು, ಕಾಂಗ್ರೆಸ್ ನಿಂದ ರಾಜೀನಾಮೆಗಾಗಿ ನಿರಂತರ ಹೋರಾಟಗಳ ಹೊಯ್ದಾಟದ ಮಧ್ಯೆ ದಿಢೀರ್ ಆಗಿ ವಿನಯ್ ಗುರೂಜಿ ಅವರನ್ನು ಸಚಿವ ಕೆ ಎಸ್​ ಈಶ್ವರಪ್ಪ ಭೇಟಿ ಮಾಡಿದರು. ಪರಿಸ್ಥಿತಿ ತಿಳಿಯಾಗುತ್ತದೆ, ಧೃತಿಗೆಡದಂತೆ ಕೆಲಸ ನಿರ್ವಹಿಸುವಂತೆ ಸಚಿವ ಈಶ್ವರಪ್ಪಗೆ ವಿನಯ್ ಗುರೂಜಿ ಧೈರ್ಯ ತುಂಬಿದರು. ಅವಧೂತ ವಿನಯ್ ಗುರೂಜಿಯಿಂದ ಮಾರ್ಗದರ್ಶನ, ಆಶೀರ್ವಾದ ದೊರೆತ ಬಳಿಕ ಸಚಿವ ಈಶ್ವರಪ್ಪ ದಂಪತಿ ವಾಪಸಾದರು.

ನಕ್ಸಲ್ ನಾಯಕ ಕೃಷ್ಣಮೂರ್ತಿ ನ್ಯಾಯಾಲಯಕ್ಕೆ ಹಾಜರು: ಚಿಕ್ಕಮಗಳೂರು: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಎನ್.ಆರ್. ಪುರದ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಚಿಕ್ಕಮಗಳೂರು ಪೊಲೀಸರು ಹಾಜರುಪಡಿಸಿದ್ದಾರೆ. ಇತ್ತೀಚಿಗೆ ಬಿ.ಜಿ. ಕೃಷ್ಣಮೂರ್ತಿಯನ್ನ ಕೇರಳ ಪೊಲೀಸರು ಬಂಧಿಸಿದ್ದರು. ಕೇರಳದಿಂದ ತಡರಾತ್ರಿ ಶೃಂಗೇರಿಗೆ ಪೊಲೀಸರು ಕರೆತಂದಿದ್ದರು. ಶೃಂಗೇರಿ ಸೇರಿದಂತೆ ಉಡುಪಿ, ಶಿವಮೊಗ್ಗದಲ್ಲಿ ಕೆಲವು ಪ್ರಕರಣಗಳಲ್ಲಿ ಬಿ.ಜಿ. ಕೃಷ್ಣಮೂರ್ತಿ ಭಾಗಿಯಾಗಿದ್ದ. ನಕ್ಸಲ್ ನಾಯಕ ಮಲೆನಾಡಿನಲ್ಲಿ ಹಲವು ವಿಧ್ವಂಸಕ ಕೃತ್ಯಗಳನ್ನು ಎಸಗಿದ್ದ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಹಿಮಪಾತದಲ್ಲಿ ದುರ್ಮರಣಕ್ಕೀಡಾದ ಕೊಡಗಿನ ಯೋಧ ಅಲ್ತಾಫ್ ಪ್ರೇಮಿಗಳ ದಿನ‌, ಹಿಜಾಬ್​ ಬಗ್ಗೆ ಏನು ಹೇಳಿದ್ದರು? Viral Audio

ಇದನ್ನೂ ಓದಿ: Basavaraj Bommai: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಕನಿಷ್ಠ 20 ಕೋಮು ಉದ್ವಿಘ್ನ ಪ್ರಕರಣಗಳು ಘಟಿಸಿವೆ

Published On - 1:22 pm, Thu, 24 February 22