ಬೆಂಗಳೂರಿನ ಜೆಸಿ ನಗರ, ಆರ್​ಟಿ ನಗರದಲ್ಲಿ ವಿಜಯದಶಮಿ ಉತ್ಸವ: ದಸರಾ ಮೆರವಣಿಗೆಯಲ್ಲಿ ಪುಂಡರ ಅಟ್ಟಹಾಸ

ಬೆಂಗಳೂರು ಮತ್ತು ಕೋಲಾರದಲ್ಲಿ ದಸರಾ ಮೆರವಣಿಗೆ ವೇಳೆ ಗುಂಪು ಘರ್ಷಣೆ, ಗಲಾಟೆ ನಡೆದಿದೆ.

ಬೆಂಗಳೂರಿನ ಜೆಸಿ ನಗರ, ಆರ್​ಟಿ ನಗರದಲ್ಲಿ ವಿಜಯದಶಮಿ ಉತ್ಸವ: ದಸರಾ ಮೆರವಣಿಗೆಯಲ್ಲಿ ಪುಂಡರ ಅಟ್ಟಹಾಸ
ಕೋಲಾರದ ದಾನವಹಳ್ಳಿ ಗ್ರಾಮದಲ್ಲಿ ದಸರಾ ಮೆರವಣಿಗೆ ವಿಚಾರವಾಗಿ ಗ್ರಾಮಸ್ಥರು ಇಟ್ಟಿಗೆಗಳಿಂದ ಹೊಡೆದಾಡಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 06, 2022 | 7:38 AM

ಬೆಂಗಳೂರು: ವಿಜಯದಶಮಿ ಪ್ರಯುಕ್ತ ನಗರದ ಜೆ.ಸಿ.ನಗರ, ಆರ್‌.ಟಿ.ನಗರದಲ್ಲಿ ಬುಧವಾರ (ಅ 5) ಮಧ್ಯರಾತ್ರಿಯಿಂದ ಗುರುವಾರ ನಸುಕಿನವರೆಗೂ ಮೆರವಣಿಗೆ ನಡೆಯಿತು. ಸಾವಿರಾರು ಜನರು ಉತ್ಸಾಹದಿಂದ ಭಾಗಿಯಾಗಿದ್ದರು. ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. 3 ಡಿಸಿಪಿ, 6 ಎಸಿಪಿ, 26 ಇನ್​ಸ್ಪೆಕ್ಟರ್​ಗಳು, 111 ಸಬ್​ ಇನ್​ಸ್ಪೆಕ್ಟರ್​ಗಳು, 139 ಎಎಸ್​ಐಗಳು, 1200 ಪೊಲೀಸರು, 300 ಹೋಮ್‌ಗಾರ್ಡ್ಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಬೆಂಗಳೂರಿನ ಪಶ್ಚಿಮ ವಿಭಾಗದ ವಿಜಯನಗರ ಮತ್ತು ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಗುಂಪು ಘರ್ಷಣೆ, ಗಲಾಟೆ ನಡೆದಿದೆ. ಪುಂಡರ ಎರಡು ಗುಂಪುಗಳು ಮೆರವಣಿಗೆಯಲ್ಲಿ ನವ್ಯ ಬಾರ್ ಎದುರು ಗಲಾಟೆ ಮಾಡಿಕೊಂಡವು. ಈ ವೇಳೆ ದೀಪು ಎಂಬಾತನ ಮೇಲೆ ಹಲ್ಲೆ ನಡೆಸಿದ ಗುಂಪು, ಸ್ಥಳದಿಂದ ಪರಾರಿಯಾಗಿಯಿತು. ವಿಜಯನಗರದ ಎಂ.ಆರ್.ಗಾರ್ಡನ್ ಬಾರ್ ಮುಂದೆಯೂ ಗಲಾಟೆ ನಡೆಯಿತು. ಚೇತನ್ ಶೆಟ್ಟಿ, ಚೇತನ್ ಸೋಮಶೇಖರ್ ಎಂಬುವವರ ಮೇಲೆ ದಾಳಿ ನಡೆಯಿತು. ಗಾಯಗೊಂಡವರಿಗೆ ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಘಟನೆ ಸಂಬಂಧ ಮಾಗಡಿ ರಸ್ತೆ, ವಿಜಯನಗರ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಪುಂಡರ ಗುಂಪುಗಳು ದೊಣ್ಣೆಗಳಿಂದ ಪರಸ್ಪರ ಬಡಿದಾಡಿವು. ಈ ವೇಳೆ ಒಟ್ಟು ಮೂವರಿಗೆ ಗಂಭೀರ ಗಾಯಗಳಾದವು.

ದೇವರ ಉತ್ಸವದಲ್ಲಿ ಮಾರಾಮರಿ

ಕೋಲಾರ: ತಾಲ್ಲೂಕಿನ ದಾನವಹಳ್ಳಿ ಗ್ರಾಮದಲ್ಲಿ ದೇವರ ಉತ್ಸವ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಮಾರಾಮರಿ ನಡೆದಿದೆ. ದಲಿತರ ಮನೆಗಳಿಗೂ ಉತ್ಸವ ಮೂರ್ತಿ ಮೆರವಣೆಗೆ ಬರಬೇಕು ಎಂದು ಕೆಲವರು ಒತ್ತಾಯಿಸಿದ ನಂತರ ಗಲಾಟೆ ನಡೆಯಿತು. ಗ್ರಾಮದ ಹಿರಿಯರು ಪಂಚಾಯಿತಿ ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಆದರೆ ಅಷ್ಟುಹೊತ್ತಿಗೆ ಪರಿಸ್ಥಿತಿ ಕೈಮೀರಿತ್ತು. ಪೊಲೀಸರ ಎದುರೇ ಎರಡೂ ಗುಂಪುಗಳು ಇಟ್ಟಿಗೆಯಿಂದ ಹೊಡೆದಾಡಿದರು. ಎರಡು ಗುಂಪಿನ ಆರು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ವೇಮಗಲ್ ಠಾಣೆಯಲ್ಲಿ ಎರಡೂ ಗುಂಪುಗಳು ದೂರು-ಪ್ರತಿದೂರು ದಾಖಲಿಸಿವೆ. ಒಂದು ಗುಂಪಿನ ಮೇಲೆ ಜಾತಿ ನಿಂದನೆ ಪ್ರಕರಣ ಹಾಗೂ ಮತ್ತೊಂದು ಗುಂಪಿನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

Published On - 7:38 am, Thu, 6 October 22