ಬೆಂಗಳೂರಿನಲ್ಲಿ ಕಮ್ಯುನಿಸ್ಟ್ ಕಚೇರಿಗೆ ಬೆಂಕಿ: ವಿಡಿಯೋ ಪತ್ತೆ

ಬೆಂಗಳೂರಿನಲ್ಲಿ ಕಮ್ಯುನಿಸ್ಟ್ ಕಚೇರಿಗೆ ಬೆಂಕಿ: ವಿಡಿಯೋ ಪತ್ತೆ

ಬೆಂಗಳೂರು: ಕಮ್ಯುನಿಸ್ಟ್ ಪಕ್ಷದ ಕಚೇರಿಗೆ ಹೆಲ್ಮೆಟ್ ಹಾಕಿರುವ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ವಿಡಿಯೋ ಲಭಿಸಿದೆ. ನಿನ್ನೆ ರಾತ್ರಿ ಇಬ್ಬರು ದುಷ್ಕರ್ಮಿಗಳು ವೈಯಾಲಿಕಾವಲ್​ನಲ್ಲಿರುವ ಸಿಪಿಐ ಕಚೇರಿಯ ಬಾಗಿಲು ಹಾಗೂ ಮುಂದೆ ನಿಲ್ಲಿಸಿದ್ದ ಬೈಕ್​ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಓಡಿಹೋಗಿದ್ದಾರೆ. ಕೇರಳದಲ್ಲಿ ಬಿಎಸ್ ಯಡಿಯೂರಪ್ಪನವರ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾಗಿತ್ತು.  ಕೇರಳದಲ್ಲಿ ನಡೆದ ಘಟನೆಗೆ ಪ್ರತಿಕಾರವಾಗಿ ದುಷ್ಕರ್ಮಿಗಳು ಈ ರೀತಿಯ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಕೇಂದ್ರ ವಿಭಾಗ ಡಿಸಿಪಿ ಚೇತನ್ […]

sadhu srinath

|

Dec 25, 2019 | 3:42 PM

ಬೆಂಗಳೂರು: ಕಮ್ಯುನಿಸ್ಟ್ ಪಕ್ಷದ ಕಚೇರಿಗೆ ಹೆಲ್ಮೆಟ್ ಹಾಕಿರುವ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ವಿಡಿಯೋ ಲಭಿಸಿದೆ. ನಿನ್ನೆ ರಾತ್ರಿ ಇಬ್ಬರು ದುಷ್ಕರ್ಮಿಗಳು ವೈಯಾಲಿಕಾವಲ್​ನಲ್ಲಿರುವ ಸಿಪಿಐ ಕಚೇರಿಯ ಬಾಗಿಲು ಹಾಗೂ ಮುಂದೆ ನಿಲ್ಲಿಸಿದ್ದ ಬೈಕ್​ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಓಡಿಹೋಗಿದ್ದಾರೆ. ಕೇರಳದಲ್ಲಿ ಬಿಎಸ್ ಯಡಿಯೂರಪ್ಪನವರ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾಗಿತ್ತು.  ಕೇರಳದಲ್ಲಿ ನಡೆದ ಘಟನೆಗೆ ಪ್ರತಿಕಾರವಾಗಿ ದುಷ್ಕರ್ಮಿಗಳು ಈ ರೀತಿಯ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಬೆಳಗ್ಗೆ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸ್ಥಳಕ್ಕೆ ಆಗಮಿಸಿ ಸುಟ್ಟ ಬೈಕ್​ಗಳ ಪರಿಶೀಲನೆ ನಡೆಸಿದ್ದರು. ಘಟನೆಯಲ್ಲಿ 6 ಬೈಕ್​ಗಳು ಸುಟ್ಟಿದ್ದವು. ಈಗ ಕಚೇರಿ ಸುಡಲು ಯತ್ನಿಸಿದ ವಿಡಿಯೋ ಲಭ್ಯವಾಗಿದೆ. ವೈಯಾಲಿಕಾವಲ್ ಠಾಣೆ ಪೊಲೀಸರಿಂದ ಕೇಸ್​ನ ತನಿಖೆ ನಡೆಯುತ್ತಿದೆ. ನೂರಕ್ಕೂ ಹೆಚ್ಚು ಸಿಪಿಐ ಕಾರ್ಯಕರ್ತರಿಂದ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಯುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada