ಕಾಂಗ್ರೆಸ್ ಮಾಡಿದ ತಪ್ಪಿನಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ: ಆರ್ ಅಶೋಕ ವಾಗ್ದಾಳಿ

| Updated By: Rakesh Nayak Manchi

Updated on: Mar 09, 2024 | 2:52 PM

ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕಾಣಸಿಕೊಂಡಿದ್ದು, ಹವಲು ಪ್ರದೇಶಗಳ ಬೋರ್​ವೆಲ್​ಗಳಲ್ಲಿ ನೀರು ಬತ್ತಿ ಹೋಗಿದೆ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಆರ್.ಅಶೋಕ, ಕಾಂಗ್ರೆಸ್ ಮಾಡಿದ ತಪ್ಪಿನಿಂದ ಬೆಂಗಳೂರಲ್ಲಿ ನೀರಿನ ಸಮಸ್ಯೆ ಆಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮಾಡಿದ ತಪ್ಪಿನಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ: ಆರ್ ಅಶೋಕ ವಾಗ್ದಾಳಿ
ಕಾಂಗ್ರೆಸ್ ಮಾಡಿದ ತಪ್ಪಿನಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ: ಆರ್ ಅಶೋಕ ವಾಗ್ದಾಳಿ
Follow us on

ಬೆಂಗಳೂರು, ಮಾ.9: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (Bengaluru Water Problem) ಕಾಣಸಿಕೊಂಡಿದ್ದು, ಹವಲು ಪ್ರದೇಶಗಳ ಬೋರ್​ವೆಲ್​ಗಳಲ್ಲಿ ನೀರು ಬತ್ತಿ ಹೋಗಿದೆ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಆರ್.ಅಶೋಕ (R Ashoka), ಕಾಂಗ್ರೆಸ್ (Congress) ಮಾಡಿದ ತಪ್ಪಿನಿಂದ ಬೆಂಗಳೂರಲ್ಲಿ ನೀರಿನ ಸಮಸ್ಯೆ ಆಗಿದೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೋಡಿಯಿಂದ ನೀರಿನ ಸಮಸ್ಯೆ ಆಗಿದೆ. ಇಂತಹ ಕೆಟ್ಟ ಸರ್ಕಾರವನ್ನು ತೊಲಗಿಸಬೇಕಿದೆ. ದೇಶದಲ್ಲಿ ಮೋದಿ ಗ್ಯಾರಂಟಿ ಒಂದೇ. ಕಾಂಗ್ರೆಸ್​ನ ಗ್ಯಾರಂಟಿಗಳು ನೀರಿನ ಮೇಲಿನ ಗುಳ್ಳೆಗಳಿದ್ದಂತೆ. ಸರ್ಕಾರದ ಬಳಿ ಬೋರ್ ವೆಲ್ ಕೊರಿಸುವುದಕ್ಕೂ ಹಣವಿಲ್ಲ. ನಿಮ್ಮ 2000 ರೂಪಾಯಿಯಿಂದ ಏನು ಆಗುತ್ತದೆ ಎಂದು ಗ್ಯಾರಂಟಿ ಯೋಜನೆಯನ್ನು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ವಿದೇಶ ಚಾನಲ್​ನಲ್ಲಿ ಬೆಂಗಳೂರಿನ ಮರ್ಯಾದೆ ಹೋಗುತ್ತಿದೆ. ನೀರಿನ ಸಮಸ್ಯೆ ಇದೆ, ಅಲ್ಲಿ ಯಾರು ಹೋಗಬೇಡಿ ಅಂತಿದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರಲ್ಲಿ ನೀರಿನ ಬರ ಎಷ್ಟಿದೆ ಅಂದ್ರೆ ಜನ ಶೌಚ ಮಾಡಲು ಮಾಲ್‌ಗೆ ಹೋಗ್ತಿದ್ದಾರೆ

ವಿರೋಧ ಪಕ್ಷಕ್ಕೆ ಟೀಕಿಸುವುದು ಬಿಟ್ಟು ಬೇರೇನು ಇಲ್ಲ: ಡಿಕೆ ಶಿವಕುಮಾರ್

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕುರಿತು ಬಿಜೆಪಿ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿರೋಧ ಪಕ್ಷಕ್ಕೆ ಟೀಕಿಸೋದು ಬಿಟ್ಟು ಬೇರೇನು ಇಲ್ಲ. ರಚನಾತ್ಮಕ ಸಲಹೆ ಕೊಟ್ಟರೆ ಸ್ವೀಕಾರ ಮಾಡಲು ರೆಡಿ. ಮೊದಲ ಬಾರಿಗೆ ಟ್ಯಾಂಕರ್ ನಿಯಂತ್ರಣಕ್ಕೆ ತೆಗೆದುಕೊಂಡು ಟ್ಯಾಂಕರ್ ಮಾಫಿಯಾ ತಡೆಗಟ್ಟಲಾಗಿದೆ. ದರ ನಿಗದಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೇರೆ ಕಡೆ ಟ್ಯಾಂಕರ್ ತರಿಸಲು ಕೂಡ ಸೂಚಿಸಿದ್ದೇನೆ ಎಂದರು.

ಕಾವೇರಿ ನೀರು ಜಾಸ್ತಿ ಬರುತ್ತಾ ಇದೆ. ಕಾವೇರಿ ನೀರು 25 ml ನೀರು ಹೆಚ್ಚು ಬರುತ್ತಿದೆ. ಕಾವೇರಿ ನೀರು ಹೆಚ್ಚು ಡ್ರಾ ಮಾಡುತ್ತಿದ್ದೇವೆ. 110 ಹಳ್ಳಿಗಳಿಗೆ ಮೇ ಅಂತ್ಯಕ್ಕೆ 5ನೇ ಹಂತ ಮುಕ್ತಾಯ ಆಗುತ್ತದೆ. ಅಲ್ಲಿಯವರೆಗೆ ನಾವು ಜಾಗೃತರಾಗಿರಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ