ತುಂಗಭದ್ರಾ ಡ್ಯಾಂನಲ್ಲಿ 50 ಟಿಎಂಸಿ ನೀರು ಉಳಿಸಿಕೊಳ್ಳಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೂಚನೆ

| Updated By: ಆಯೇಷಾ ಬಾನು

Updated on: Aug 12, 2024 | 11:57 AM

105 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇರುವ ಡ್ಯಾಂನಲ್ಲಿ 50 ಟಿಎಂಸಿ ನೀರು ಉಳಿಸಿಕೊಳ್ಳಲು ಕ್ರಮಕ್ಕೆ ಸೂಚಿಸಲಾಗಿದೆ. ಟಿಬಿ ಡ್ಯಾಂ​ ರೀತಿ ಬೇರೆ ಡ್ಯಾಂ​ಗಳಲ್ಲೂ ಈ ರೀತಿ ಕ್ರಮಕ್ಕೆ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ನಾಳೆ ಸಿಎಂ ಸಹ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ನಾನು ಟೆಕ್ನಿಕಲ್ ಟೀಂ ಜೊತೆಗೆ ಚರ್ಚೆ ಮಾಡಿದ್ದೇನೆ ಎಂದು ಡಿಕೆಶಿ ತಿಳಿಸಿದರು.

ತುಂಗಭದ್ರಾ ಡ್ಯಾಂನಲ್ಲಿ 50 ಟಿಎಂಸಿ ನೀರು ಉಳಿಸಿಕೊಳ್ಳಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೂಚನೆ
ಡಿಕೆ ಶಿವಕುಮಾರ್
Follow us on

ಕೊಪ್ಪಳ, ಆಗಸ್ಟ್​.12: ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್​ ಗೇಟ್ ಕಟ್ ಆಗಿದ್ದು ನೀರು ಪೋಲಾಗುತ್ತಿದೆ. ಗೇಟ್ ಕೊಚ್ಚಿ ಹೋಗಿರೋ ವಿಷ್ಯ ಗೊತ್ತಾಗ್ತಿದ್ದಂತೆ ನಿನ್ನೆ ಡ್ಯಾಂಗೆ ಆಗಮಿಸಿದ ನೀರಾವರಿ ಸಚಿವ ಡಿಕೆ ಶಿವಕುಮಾರ್‌ (DK Shivakumar) ಡ್ಯಾಮ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸದ್ಯ ಇದೀಗ ಡ್ಯಾಮ್​ನಲ್ಲಿ 50 ಟಿಎಂಸಿ ನೀರು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಟಿಬಿ ಡ್ಯಾಂ ಸಂಬಂಧ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಇಲಾಖೆ ಸಚಿವ ಡಿಕೆ ಶಿವಕುಮಾರ್, ಟಿಬಿ ಡ್ಯಾಮ್​ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು, ಜನರ ಹಿತದೃಷ್ಟಿಯಿಂದ ಡ್ಯಾಂ ತುರ್ತಾಗಿ ಕೆಲಸ ಮಾಡಬೇಕಿದೆ. ಸದ್ಯ 105 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇರುವ ಡ್ಯಾಂನಲ್ಲಿ 50 ಟಿಎಂಸಿ ನೀರು ಉಳಿಸಿಕೊಳ್ಳಲು ಕ್ರಮಕ್ಕೆ ಸೂಚಿಸಲಾಗಿದೆ. ಟಿಬಿ ಡ್ಯಾಂ​ ರೀತಿ ಬೇರೆ ಡ್ಯಾಂ​ಗಳಲ್ಲೂ ಈ ರೀತಿ ಕ್ರಮಕ್ಕೆ ತಿಳಿಸಲಾಗಿದೆ. ರಾಜ್ಯದ ವಿವಿಧ ಡ್ಯಾಂ​ಗಳ ಸುರಕ್ಷತೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಡ್ಯಾಂಗಳಲ್ಲಿ ಸಮಸ್ಯೆ ಆಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಟಿಬಿ ಡ್ಯಾಂಗೆ ಹೋಗಿದ್ದೆ, ಕೂಡಲೇ ಕ್ರಮ ತೆಗೆದುಕೊಂಡಿದ್ದೇವೆ. ಎಲ್ಲಾ ಗುತ್ತಿಗೆದಾರರ ಜೊತೆಗೂ ಮಾತನಾಡಿದ್ದೇನೆ. ಇನ್ನೊಂದು ನಾಲ್ಕೈದು ದಿನಗಳಲ್ಲಿ ಜಲಾಶಯ ದುರಸ್ತಿ ಆಗಲಿದೆ. ರೈತರ ಬೆಳೆ ಉಳಿಸುವ ವ್ಯವಸ್ಥೆ ಮಾಡಿದ್ದೇವೆ. ನಾಳೆ ಸಿಎಂ ಸಹ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ನಾನು ಟೆಕ್ನಿಕಲ್ ಟೀಂ ಜೊತೆಗೆ ಚರ್ಚೆ ಮಾಡಿದ್ದೇನೆ. ಯಾರೂ ಗಾಬರಿ ಪಡಬೇಕಿಲ್ಲ, ಬಹಳ ಡೇಂಜರ್ ಅಂತೂ ಇತ್ತು. ಒಂದು ಟೀಂ ಮಾಡಿ ಎಲ್ಲಾ ಡ್ಯಾಂಗಳಿಗೂ ಕಳಿಸಿಕೊಡುತ್ತಿದ್ದೇವೆ. ನಾಳೆ, ನಾಡಿದ್ದು ತಜ್ಞರ ಸಮಿತಿ ರಚನೆ ಮಾಡ್ತೇವೆ. ತಜ್ಞರ ಸಮಿತಿ ರಾಜ್ಯದ ಎಲ್ಲಾ ಜಲಾಶಯಗಳಿಗೂ ಭೇಟಿ ನೀಡುತ್ತೆ. ಬೇರೆ ಕಡೆ ಡ್ಯಾಂಗಳಲ್ಲಿ ಒಂದು ಗೇಟ್​ಗೆ ಎರಡು ಲಿಂಕ್ ಇವೆ. ಇಲ್ಲಿ ಒಂದೇ ಒಂದು ಚೈನ್ ಇತ್ತು, ಕಟ್ ಆಗಿದೆ. ಡ್ಯಾಂನಲ್ಲಿ 55-60 ಟಿಎಂಸಿ ನೀರು ಉಳಿಸುವ ವ್ಯವಸ್ಥೆ ಆಗುತ್ತಿದೆ. ನಾಲ್ಕೈದು ದಿನದಲ್ಲಿ ದುರಸ್ತಿ ಆಗಲಿದೆ ಎಂದು ನಮಗೆ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Bangalore Power Cut: ಬೆಂಗಳೂರಿನಲ್ಲಿ ಆಗಸ್ಟ್​ 13ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? ನಿಮ್ಮ ಏರಿಯಾನೂ ಇದೆಯಾ ನೋಡಿ

ಬೆಂಗಳೂರಿನಲ್ಲಿರುವ ಯಾವ ಕೆರೆಗಳು ತುಂಬಿಲ್ಲ ಮಳೆ ಬರಬೇಕು ಎಂದ ಡಿಕೆಶಿ

ಇನ್ನು ಇದೇ ವೇಳೆ ಬೆಂಗಳೂರು ನಗರದಲ್ಲಿ ಸುರಿದ ಭಾರಿ ಮಳೆಯಿಂದ ಆದ ಅವಾಂತರಗಳ ಬಗ್ಗೆ ಮಾತನಾಡಿದ ಡಿಕೆಶಿ, ಬೆಂಗಳೂರಿನಲ್ಲಿರುವ ಯಾವ ಕೆರೆಗಳು ತುಂಬಿಲ್ಲ ಮಳೆ ಬರಬೇಕು. ಅಪಾರ್ಟ್‌ಮೆಂಟ್​​ಗಳಿಗೆ ನೀರು ನುಗ್ಗಿದ್ದರೆ ಅದನ್ನು ಸರಿ ಮಾಡೋಣ. ಕನಕಪುರ, ಮಾಗಡಿ, ಚನ್ನಪಟ್ಟಣ, ತುಮಕೂರು, ಕುಣಿಗಲ್, ಕೋಲಾರ ಸುತ್ತಮುತ್ತಲೂ ಮಳೆ ಬಂದಿಲ್ಲ. ಇನ್ನೂ ಮಳೆ ಬೇಕು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಯತ್ನಾಳ್​ಗೆ ಡಿಕೆಶಿ ಟಾಂಗ್

ವಾಲ್ಮೀಕಿ ನಿಗಮ ಹಗರಣ ಸಂಬಂಧ ಬಿಜೆಪಿ ಪಾದಯಾತ್ರೆ ವಿಚಾರ ಸಂಬಂಧ ಯತ್ನಾಳ್ ಟೀಂನಿಂದ ಕೂಡಲ ಸಂಗಮ ಟು ಬಳ್ಳಾರಿ ಪಾದಯಾತ್ರೆ ನಡೆಸುತ್ತಿದ್ದು ಈ ಬಗ್ಗೆ ಡಿಕೆ ಶಿವಕುಮಾರ್ ವ್ಯಂಗ್ಯ ವಾಡಿದ್ದಾರೆ. ಅವರ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ