AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸಿಎಂ ಇದೇನಾ ಬ್ರ್ಯಾಂಡ್ ಬೆಂಗಳೂರು? ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಿಡಿ

ಬೆಂಗಳೂರಿನಲ್ಲಿ ತಡ ರಾತ್ರಿ ಸುರಿದ ಮಳೆಗೆ ಭಾರೀ ಅವಾಂತರಗಳು ಸಂಭವಿಸಿದ್ದು ಈ ಬಗ್ಗೆ ಜೆಡಿಎಸ್, ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರೇ ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು? ಎಂದು ಪ್ರಶ್ನೆ ಮಾಡಿದ್ದಾರೆ.

ಡಿಸಿಎಂ ಇದೇನಾ ಬ್ರ್ಯಾಂಡ್  ಬೆಂಗಳೂರು? ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಿಡಿ
ಡಿಕೆ ಶಿವಕುಮಾರ್
Sunil MH
| Updated By: ಆಯೇಷಾ ಬಾನು|

Updated on: Aug 12, 2024 | 12:50 PM

Share

ಬೆಂಗಳೂರು, ಆಗಸ್ಟ್​.12: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ (Bengaluru Rain). ರಸ್ತೆಗಳು ಕರೆಯಂತಾಗಿದ್ದು ಅಂಡರ್​ ಪಾಸ್​ಗಳಲ್ಲಿ ನೀರು ನಿಂತಿದೆ. ಹಲವು ಬಡಾವಣೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ. ಇದರಿಂದ ಪರದಾಡುತ್ತಿರುವ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದು ಇದೀಗ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ದ ಜೆಡಿಎಸ್ (JDS) ಕಿಡಿಕಾರಿದೆ. ಎಕ್ಸ್​​ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದೆ.

ಡಿಸಿಎಂ ಇದೇನಾ ಬ್ರ್ಯಾಂಡ್ ಬೆಂಗಳೂರು? ನೀರಿನಲ್ಲಿ ಮುಳುಗಿದ ಸಿಲಿಕಾನ್ ಸಿಟಿ! ಎಂದು ಎಕ್ಸ್​ (ಟ್ವಿಟರ್)ನಲ್ಲಿ ಬರೆದು ಡಿಸಿಎಂ ಡಿಕೆ ಶಿವಕುಮಾರ್​ ಅವರನ್ನು ಟ್ಯಾಗ್ ಮಾಡಿ ಕೆಂಡಕಾರಿದೆ.​ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು? ಉತ್ತರಿಸಿ ಬೆಂಗಳೂರು ನಗರಾಭಿವೃದ್ಧಿ ಸಚಿವರೇ. ಕೇವಲ 3-4 ಗಂಟೆ ಸುರಿದ ಮಳೆಗೆ ಬೆಂಗಳೂರು ಬಹುತೇಕ ಜಲಾವೃತವಾಗಿದೆ. ರಾಜಧಾನಿಯ ಹಲವೆಡೆ ಮನೆಗಳಿಗೆ, ಅಪಾರ್ಟ್ ಮೆಂಟ್​ಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡುತಿದ್ದಾರೆ. ಇನ್ನು ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳು, ಅಂಡರ್ ಪಾಸ್​ಗಳು ಸ್ವಿಮ್ಮಿಂಗ್ ಪೂಲ್ ಆಗಿದೆ, ರಸ್ತೆಗಳು ಕರೆಯಂತಾಗಿದ್ದು, ಹಳ್ಳ, ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಚಲಿಸುವುದು ವಾಹನ ಸವಾರರಿಗೆ ನರಕ ಸದೃಶ್ಯವಾಗಿದೆ.

ಇದನ್ನೂ ಓದಿ: ರಾತ್ರಿ ಧೋ ಅಂತ ಸುರಿದ ಮಳೆಗೆ ಆನೇಕಲ್​ನ ಕಮ್ಮಸಂದ್ರ ಏರಿಯಾ ಜಲಾವೃತ, ನಿವಾಸಿಗಳಿಗೆ ಗೃಹಬಂಧನ!

ಜೆಡಿಎಸ್ ಟ್ವೀಟ್​ ಇಲ್ಲಿದೆ

ಬೆಂಗಳೂರು ನಗರಾಭಿವೃದ್ಧಿ ಸಚಿವರೇ ಆಸ್ತಿ ತೆರಿಗೆ ಏರಿಸಿ, ಸಾವಿರ ಕೋಟಿಗೂ ಹೆಚ್ಚು ಸಂಗ್ರಹಿಸಿರುವ ಹಣ ಏನಾಗಿದೆ? ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಮಾಡಲು ನೀವು ತೋರಿದ ಉತ್ಸಾಹ, ಈಗ ” ಬ್ರ್ಯಾಂಡ್ ಬೆಂಗಳೂರು” ಮಾಡ್ತೀವಿ ಎಂದು ಬರೀ ಸುಳ್ಳುಗಳನ್ನು ಹೇಳುತ್ತಲೇ ಬೆಂಗಳೂರಿನ ಜನರಿಗೆ ಮಂಕುಬೂದಿ ಎರಚುತ್ತಿದ್ದೀರಿ ಅಷ್ಟೇ. ನಿಮ್ಮ ಭ್ರಷ್ಟ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲೇ ಮುಳುಗಿರುವಾಗ ಜನಸಮಾನ್ಯರ ಬಗ್ಗೆ ಯೋಚಿಸಲು ಸಮಯ ಎಲ್ಲಿದೆ? ಎಂದು ಜೆಡಿಎಸ್ ಟ್ವೀಟ್ ಮಾಡಿ ಕಿಡಿಕಾರಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ