ಕರ್ನಾಟಕದಲ್ಲಿ ಯಾವ ಭಾಗದಲ್ಲಿ ಎಷ್ಟೆಷ್ಟು ಮಳೆ, ಎಷ್ಟು ಸಾವು-ನೋವು, ನಷ್ಟ: ಮಾಹಿತಿ ಬಿಚ್ಚಿಟ್ಟ ಕೃಷ್ಣಬೈರೇಗೌಡ
ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೆಗೌಡ ಮಾತನಾಡಿ, ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 29ರಷ್ಟು ಮಳೆ ಹೆಚ್ಚಾಗಿದೆ. ಈ ವರ್ಷ ಮಳೆಗೆ 58 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಯಾವ ಭಾಗದಲ್ಲಿ ಹೆಚ್ಚು ಮಳೆ, ಎಷ್ಟು ಸಾವು-ನೋವು ಮತ್ತು ನಷ್ಟ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಆಗಸ್ಟ್ 12: ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 29ರಷ್ಟು ಮಳೆ (rain) ಹೆಚ್ಚಾಗಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮಳೆ ಹೆಚ್ಚಾಗಲಿದ್ದು, ಈ ತಿಂಗಳಿನಲ್ಲಿ ಮುಂಗಾರು ಮಳೆ ಹೆಚ್ಚಾಗಲಿದೆ. ಹಾಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗುಷ್ಟಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮಳೆಗೆ 58 ಜನ ಮೃತಪಟ್ಟಿದ್ದಾರೆ. 86 ಸಾವಿರ ಹೆಕ್ಟೇರ್ನಷ್ಟು ಮಳೆಗೆ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.
ಆಗಸ್ಟ್ 14ರ ನಂತರ ಎಚ್ಚರಿಕೆ ಅನಿವಾರ್ಯ. 2019ರಲ್ಲಿ ಭಾರಿ ಮಳೆಗೆ ರಾಜ್ಯದಲ್ಲಿ 67 ಜನರು ಮೃತಪಟ್ಟಿದ್ದರು. 2022ರಲ್ಲಿ ರಾಜ್ಯದಲ್ಲಿ ಮಳೆಯಿಂದ 75 ಜನರು ಮೃತಪಟ್ಟಿದ್ದಾರೆ. ವಿಪತ್ತು ನಿರ್ವಹಣೆ ಬಗ್ಗೆ ನಾಡಿದ್ದು ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ.
ಕೋಲಾರ, ಕೊಪ್ಪಳ, ಚಿಕ್ಕಬಳ್ಳಾಪುರ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆ ಇದೆ. ದಕ್ಷಿಣ ಒಳನಾಡಿನಲ್ಲಿ 220 ಮಿಲಿ ಮೀಟರ್, ಉತ್ತರ ಒಳನಾಡಿನಲ್ಲಿ 320 ಮಿ.ಮೀ, ಮಲೆನಾಡು ಭಾಗದಲ್ಲಿ 1362 ಮಿ.ಮೀ, ಕರಾವಳಿ ಭಾಗದಲ್ಲಿ 2749 ಮಿ.ಮೀ ಮಳೆಯಾಗಿದೆ. 2294 ಹೆಕ್ಟೇರ್ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಅಡಕೆ, ಕಬ್ಬು ಬೆಳೆ ಕೂಡ ಹಾನಿಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಭರದಿಂದ ಸಾಗಿದ ತುಂಗಭದ್ರಾ ಡ್ಯಾಂ ಗೇಟ್ ನಿರ್ಮಾಣದ ಕಾರ್ಯ: ಗೇಟಿನ ಅಗಲ-ಉದ್ದ ಎಷ್ಟು? ಇಲ್ಲಿದೆ ವಿವರ
ಒಂದು ವಾರದಲ್ಲಿ ಮತ್ತೆ ಸರ್ವೆ ಮಾಡಲು ಸೂಚನೆ ನೀಡಿದ್ದೇನೆ. ಮುಂದಿನ ವಾರ ಹಾನಿಯ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ. ನೆರೆ ನಿರ್ವಹಣೆಗೆ ಡಿಸಿಗಳಿಗೆ 760 ಕೋಟಿ ರೂ. ನೀಡಲಾಗಿದೆ. ಸದ್ಯಕ್ಕೆ ಪರಿಹಾರಕ್ಕೆ ಸಮಸ್ಯೆ ಏನಿಲ್ಲ. ಹೆಚ್ಚಿನ ಪ್ರಮಾಣದ ಹಾನಿಯಾದರೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿದೆ ಹೇಳಿದ್ದಾರೆ.
ತಮಿಳುನಾಡಿಗೆ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, 40 ಟಿಎಂಸಿ ನೀರು ಬಿಡಬೇಕಿತ್ತು ಆದರೆ ನಾವು ಬಿಟ್ಟಿದ್ದು 98 ಟಿಎಂಸಿ ನೀರು ಬಿಡುವುದಿಲ್ಲ ಅಂದಿದ್ದೆವು. 20 ದಿನದಲ್ಲಿ ಏನೆಲ್ಲಾ ಬದಲಾವಣೆಯಾಯ್ತು ಅತಿವೃಷ್ಠಿಯಿಂದ ಹೆಚ್ಚು ನೀರು ಬಿಡುಗಡೆಯಾಗಿದೆ. ನಾವು ಬಿಟ್ಟ ನೀರು ಅವರು ಇಟ್ಕೊಳ್ಳೋಕೆ ಆಗಲ್ಲ. ಸಮುದ್ರಕ್ಕೆ ಅವರು ಕೂಡ ಬಿಟ್ಟಿದ್ದಾರೆ. ಅದಕ್ಕೆ ಬ್ಯಾಲೆನ್ಸಿಂಗ್ ರಿಸರ್ವ್ ಇರಬೇಕೆಂದು ನಾವು ಆಗ್ರಹ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ತುಂಗಭದ್ರಾ ಜಲಾಶಯ ಖಾಲಿಯಾದ್ರೆ ನಾಲ್ಕು ಜಿಲ್ಲೆ ಜನರಿಗೆ ಸಂಕಷ್ಟ, ಆಂಧ್ರಕ್ಕೂ ಇದೇ ಪಾಲು
768 ಮನೆಗಳಿಗೆ ಪರಿಹಾರ ಕೊಟ್ಟಿದ್ದೇವೆ. ಕಳೆದ 9 ದಿನಗಳಲ್ಲಿ 9.20 ಕೋಟಿ ರೂ. ಕೊಟ್ಟಿದ್ದೇವೆ. ಜೀವಹಾನಿಗೆ 3 ಕೋಟಿ ರೂ. ನೀಡಲಾಗಿದೆ. 151 ಎಮ್ಮೆ, ಹಸು, ದೊಡ್ಡ ಪ್ರಾಣಿ ಮೃತಪಟ್ಟಿವೆ. ಚಿಕ್ಕಜಾನುವಾರುಗಳು ಸಾವನ್ನಪ್ಪಿವೆ. 2800 ಮನೆಗಳಿಗೆ 70 ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. ಎಸ್ಡಿಆರ್ಎಫ್ನಲ್ಲಿ ಅನಧಿಕೃತ ಮನೆಗೆ ಪರಿಹಾರ ಇರಲಿಲ್ಲ. 1 ಲಕ್ಷ ಪರಿಹಾರ ಕೊಡುವ ಕೆಲಸ ನಡೆದಿದೆ. ಭಾಗಶಃ ಹಾನಿಗೆ 6500 ರೂ. ಕೊಡಲಾಗುತ್ತಿತ್ತು. ಈಗ 50 ಸಾವಿರ ರೂ. ಪರಿಹಾರವನ್ನ ನೀಡಲಾಗುತ್ತಿದೆ. ಸಂಪೂರ್ಣ ಮನೆ ಹಾನಿಯಾದರೆ ಹೊಸ ಮನೆ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.