AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಬಿಜೆಪಿ ಪಕ್ಷದಲ್ಲಿ ಆಂತರಿಕ ಕಚ್ಚಾಟ; ಪರ್ಯಾಯ ನಾಯಕರ ಸಭೆಯಲ್ಲಿ ಬಿಎಸ್​ವೈ, ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ

ಬಿಜೆಪಿ ಪರ್ಯಾಯ ನಾಯಕರ ಸಭೆಯಲ್ಲಿ ಹೆಚ್ಚು ಯಡಿಯೂರಪ್ಪ ಹಾಗೂ ವಿಜಯೇಂದ್ರ ನಾಯಕತ್ವದ ಬಗ್ಗೆಯೇ ಚರ್ಚೆ ನಡೆದಿದೆ. ಯಡಿಯೂರಪ್ಪ, ವಿಜಯೇಂದ್ರ ನಾಯಕತ್ವದಲ್ಲಿ ಲಿಂಗಾಯತ ಪ್ರದೇಶಗಳಲ್ಲಿ ಸೋಲಾಗಿದೆ. ಪರಿಸ್ಥಿತಿ ಹೀಗಾದ್ರೆ ಮುಂದೆ ಪಕ್ಷ ಸಂಘಟನೆ ಮುರಿದು ಬೀಳುತ್ತೆ. ಹೈಕಮಾಂಡ್ ಗಮನಕ್ಕೆ ತರಲು ಪರ್ಯಾನ ನಾಯಕರು ಚಿಂತಿಸಿದ್ದಾರೆ.

ರಾಜ್ಯ ಬಿಜೆಪಿ ಪಕ್ಷದಲ್ಲಿ ಆಂತರಿಕ ಕಚ್ಚಾಟ; ಪರ್ಯಾಯ ನಾಯಕರ ಸಭೆಯಲ್ಲಿ ಬಿಎಸ್​ವೈ, ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ
ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ
TV9 Web
| Edited By: |

Updated on:Aug 12, 2024 | 3:33 PM

Share

ಬೆಂಗಳೂರು, ಆಗಸ್ಟ್​.12: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಬೆಳವಣಿಗೆ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ನಿನ್ನೆಯಷ್ಟೇ ಬೆಳಗಾವಿಯ ರೆಸಾರ್ಟ್​ವೊಂದರಲ್ಲಿ ನಡೆದ ಬಿಜೆಪಿ ಪರ್ಯಾಯ ನಾಯಕರ ಸಭೆ ತೀವ್ರ ಚರ್ಚೆ ಹುಟ್ಟು ಹಾಕಿದೆ. ಪರ್ಯಾಯ ನಾಯಕರ ಸಭೆಯಲ್ಲಿ ಬಿ.ಎಸ್. ಯಡಿಯೂರಪ್ಪ (BS Yediyurappa) ಹಾಗೂ ಬಿ.ವೈ. ವಿಜಯೇಂದ್ರ (BY Vijayendra) ಪರ್ಯಾಯ ನಾಯಕತ್ವದ ಬಗ್ಗೆಯೇ ಚರ್ಚೆ ನಡೆದಿದೆ. ಲೋಕಸಭೆ ಚುನಾವಣೆ ಫಲಿತಾಂಶ ಆಧರಿಸಿ, ಯಡಿಯೂರಪ್ಪ ಕುಟುಂಬದ ನಾಯಕತ್ವದ ಬಗ್ಗೆ ಪ್ರಶ್ನೆಗಳು ಶುರುವಾಗಿವೆ. ಹೀಗಾಗಿ ಇದೇ ಪರ್ಯಾಯ ನಾಯಕರ ತಂಡ, ಜಾತಿ ಸಮೀಕರಣದ ಮೂಲಕ ಹೊಸದೊಂದು ಟೀಮ್​ ಕಟ್ಟಿಕೊಂಡಿದ್ದಾರೆ.

ಲಿಂಗಾಯತ ಸಮುದಾಯದ ಅಣ್ಣಾ ಸಾಹೇಬ್​ ಜೊಲ್ಲೆ, ಜಿ.ಎಂ ಸಿದ್ದೇಶ್ವರ್​, ಎಸ್​ಟಿ ಸಮುದಾಯದ ರಮೇಶ್​ ಜಾರಕಿಹೊಳಿ, ಭೋವಿ ಸಮುದಾಯದ ಅರವಿಂದ ಲಿಂಬಾವಳಿ, ಈಡಿಗ ಸಮುದಾಯದ ಕುಮಾರ್ ಬಂಗಾರಪ್ಪ, ಒಕ್ಕಲಿಗ ಸಮುದಾಯದ ಪ್ರತಾಪ್​ ಸಿಂಹ ಜತೆಗೂಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ತಂಡ ರಚನೆ ಮಾಡಿದ್ದಾರೆ.

ಪರ್ಯಾಯ ನಾಯಕರ ಸಭೆಯಲ್ಲಿ ಚರ್ಚೆ ಆಗಿದ್ದೇನು?

ಬಿಜೆಪಿ ಪರ್ಯಾಯ ನಾಯಕರ ಸಭೆಯಲ್ಲಿ ಹೆಚ್ಚು ಯಡಿಯೂರಪ್ಪ ಹಾಗೂ ವಿಜಯೇಂದ್ರ ನಾಯಕತ್ವದ ಬಗ್ಗೆಯೇ ಚರ್ಚೆ ನಡೆದಿದೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ಲೋಕಸಭೆ ಫಲಿತಾಂಶವನ್ನ ಮುಂದಿಟ್ಟು ಚರ್ಚೆ ಮಾಡಲಾಗಿದೆ. ದಕ್ಷಿಣ ಕರ್ನಾಟಕದ ಒಟ್ಟು 14 ಸ್ಥಾನಗಳ ಪೈಕಿ 12 ಸ್ಥಾನ ಗೆದ್ದಿದೆ. ಉತ್ತರ ಕರ್ನಾಟಕದ 14 ಸ್ಥಾನದ ಪೈಕಿ ಕೇವಲ 7 ಸ್ಥಾನ ಗೆದ್ದಿದೆ. ಲಿಂಗಾಯತ ಪ್ರಾಬಲ್ಯವಿರುವ ದಾವಣಗೆರೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಚಿಕ್ಕೋಡಿ ಭಾಗದಲ್ಲೇ ಬಿಜೆಪಿ ಸೋಲಾಗಿದೆ. ಯಡಿಯೂರಪ್ಪ, ವಿಜಯೇಂದ್ರ ನಾಯಕತ್ವದಲ್ಲಿ ಲಿಂಗಾಯತ ಪ್ರದೇಶಗಳಲ್ಲಿ ಸೋಲಾಗಿದೆ. ಪರಿಸ್ಥಿತಿ ಹೀಗಾದ್ರೆ ಮುಂದೆ ಪಕ್ಷ ಸಂಘಟನೆ ಮುರಿದು ಬೀಳುತ್ತೆ. ಪಕ್ಷದ ಹಿತ ದೃಷ್ಟಿಯಿಂದ ಉತ್ತರ ಕರ್ನಾಟಕದ ನಾಯಕತ್ವಕ್ಕೆ ಮನ್ನಣೆ ಅಗತ್ಯ. ಇದನ್ನೇ ಹೈಕಮಾಂಡ್ ಗಮನಕ್ಕೆ ತರಲು ಪರ್ಯಾನ ನಾಯಕರು ಚಿಂತಿಸಿದ್ದಾರೆ. ಇಷ್ಟೇ ಅಲ್ಲ ವಿಶ್ವಾಸರ್ಹ ನಾಯಕತ್ವಕ್ಕೆ ಮನ್ನಣೆ, ಮಾನ್ಯತೆ ನೀಡುವಂತೆ ಹೇಳುವ ಸಾಧ್ಯತೆ ಇದೆ.

ವಾಲ್ಮೀಕಿ ನಿಗಮದಲ್ಲಿ ಅಕ್ರಮ.. ಧರಣಿಗೆ ಪರ್ಯಾಯ ನಾಯಕರ ನಿರ್ಧಾರ

ಪರ್ಯಾಯ ನಾಯಕರ ಸಭೆಯಲ್ಲಿ ಕೇವಲ ಬಿಎಸ್​ವೈ, ವಿಜಯೇಂದ್ರ ವಿರುದ್ಧದ ಅಸಮಾಧಾನ ಮಾತ್ರ ಚರ್ಚೆ ಆಗಿಲ್ಲ. ಬದಲಾಗಿ ಮುಡಾ ಯಾತ್ರೆಯಂತೆ ವಾಲ್ಮೀಕಿ ನಿಗಮದಲ್ಲಿನ ಅಕ್ರಮ ವಿರುದ್ಧದ ಹೋರಾಟ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಮುಡಾಕ್ಕಿಂತ ವಾಲ್ಮೀಕಿ ನಿಗಮದಲ್ಲಿನ ಹಗರಣವೇ ದೊಡ್ಡದು, ಹೀಗಾಗಿ ಈ ಹಗರಣವನ್ನ ಮುಂದಿಟ್ಟುಕೊಂಡು ಹೋರಾಟ ಮಾಡಬೇಕಿದೆ. ಈ ಬಗ್ಗೆ ಆಂದೋಲನ ಅಥವಾ ಪಾದಯಾತ್ರೆ ಮಾಡುವ ಅಗತ್ಯವಿದೆ ಅಂತ ಚರ್ಚೆ ಮಾಡಿದ್ದಾರೆ. ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಹೈಕಮಾಂಡ್ ಜತೆಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲು ಯತ್ನಾಳ್​, ಜಾರಕಿಹೊಳಿ ತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯ ಖಾಲಿಯಾದ್ರೆ ನಾಲ್ಕು ಜಿಲ್ಲೆ ಜನರಿಗೆ ಸಂಕಷ್ಟ, ಆಂಧ್ರಕ್ಕೂ ಇದೇ ಪಾಲು

ಪರ್ಯಾಯ ನಾಯಕರ ಪ್ರತ್ಯೇಕ ಪಾದಯಾತ್ರೆ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​, ಒಳ್ಳೆಯದಾಗಲಿ.. ಅವರ ಪಾದಯಾತ್ರೆ ಯಶಸ್ವಿ ಆಗಲಿ ಅಂತ ಕಾಲೆಳೆದ್ರು.

ಇನ್ನು ಬಸನಗೌಡ ಪಾಟೀಲ್​ ಯತ್ನಾಳ್​ ತಂಡದ ಜತೆಗೆ ಇನ್ನಷ್ಟು ನಾಯಕರು ಸಂಪರ್ಕ ಹೊಂದಿದ್ದಾರೆ. ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಯತ್ನಾಳ್​ ಸಂಪರ್ಕ ಮಾಡಿದ್ದು, ಈ ಎಲ್ಲಾ ನಾಯಕರು ಶೀಘ್ರದಲ್ಲೇ ಮತ್ತೊಂದು ದೊಡ್ಡ ಮಟ್ಟದ ಸಭೆಗೆ ಸಿದ್ಧರಾಗಿದ್ದಾರಂತೆ. ಈ ಬೆಳವಣಿಗೆ ನಡುವೆ ಹರಿಹರ ಬಿಜೆಪಿ ಶಾಸಕ, ಬಿ.ಪಿ ಹರೀಶ್​ ಬಿಎಸ್​ವೈ ಹಾಗೂ ಬೊಮ್ಮಾಯಿ ವಿರುದ್ಧ ಹೊಂದಾಣಿಕೆ ಬಾಂಬ್​ ಸಿಡಿಸಿದ್ದಾರೆ.

ಇದು ಬಿಜೆಪಿಯಲ್ಲಿನ ಅಂತರ್ಯುದ್ಧದ ಕಥೆಯಾದ್ರೆ, ದೋಸ್ತಿ ಬಳಗದಲ್ಲೂ ಅಸಮಾಧಾನದ ಕಾವು ಶುರುವಾಗಿದೆ. ಚನ್ನಪಟ್ಟಣದ ಮೇಲೆ ಕಣ್ಣಿಟ್ಟಿರುವ ಸಿ.ಪಿ ಯೋಗೇಶ್ವರ್​, ದೆಹಲಿಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಯೋಗೇಶ್ವರ್​, ನಾನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಚಿಂತಿಸಿದ್ದೇನೆ ಅಂದ್ರು. ಆದ್ರೆ ಛಲವಾದಿ ನಾರಾಯಣಸ್ವಾಮಿ ಮಾತ್ರ ಯೋಗೇಶ್ವರ್​ ಸೈಲೆಂಟ್​ ಆಗಿರಬೇಕು ಅಂತ ಹೇಳಿದ್ದು, ಟಿಕೆಟ್​ ಕದನಕ್ಕೆ ಟ್ವಿಸ್ಟ್​ ಕೊಟ್ಟಂತಿದೆ.

ಸದ್ಯ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ನೋಡ್ತಿದ್ರೆ ಅಂತರಂಗದ ಸಮರ ಬೂದಿ ಮುಚ್ಚಿದ ಕೆಂಡದಂತೆ ಇರೋದು ಸ್ಪಷ್ಟವಾಗ್ತಿದೆ. ಇಂಥಾ ಅಸಮಾಧಾನದ ಪಟ್ಟಿಗೆ ಕೇಸರಿಯ ದೋಸ್ತಿಯಲ್ಲಿ ಚನ್ನಪಟ್ಟಣ ಟಿಕೆಟ್ ತಿಕ್ಕಾಟಕ್ಕೆ ವೇದಿಕೆ ರೆಡಿ ಆದ್ರೂ ಅಚ್ಚರಿ ಇಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:33 pm, Mon, 12 August 24

2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ