ಬೆಂಗಳೂರು: ಕೋಮು ಸಾಮರಸ್ಯ ಕದಡುವ ವಿದ್ಯಮಾನ ನಡೀತಿರುವ ವಿಚಾರದ ಬಗ್ಗೆ ಇಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ಮಾತನಾಡಿದ್ದು, ನಾವು ಅಭಿವೃದ್ಧಿ ಕೆಲಸ ಇಟ್ಟುಕೊಂಡು ಚುನಾವಣೆ ಎದುರಿಸ್ತೇವೆ. ಕಾಂಗ್ರೆಸ್ ನಮ್ಮ ಮೇಲೆ ವಿನಾಕಾರಣ ಆರೋಪ ಮಾಡುತ್ತಿದೆ. ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಈ ಬಾರಿ ಕರ್ನಾಟಕದಲ್ಲೂ ಕಾಂಗ್ರೆಸ್ಗೆ (Congress) ಸೋಲು ಕಟ್ಟಿಟ್ಟ ಬುತ್ತಿ. ಸೋಲಾಗುತ್ತದೆ ಎಂದು ಗೊತ್ತಿದ್ದರೂ ರಾಹುಲ್ ಗಾಂಧಿ (Rahul Gandhi) ಇಲ್ಲಿಗೆ ಬರುವ ಧೈರ್ಯ ತೋರಿಸಿರುವುದು ಮೆಚ್ಚಬೇಕಾದದ್ದೇ. ಬಹಳ ಧೈರ್ಯದಿಂದ ರಾಹುಲ್ ಗಾಂಧಿ ಇಲ್ಲಿಗೆ ಬಂದಿದ್ದಾರೆ. ಅವರು ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ. ಆದರೆ ಅವರ ನೇತೃತ್ವದಲ್ಲಿ ಯಾವುದೂ ನೆಟ್ಟಗೆ ನಡೆಯುತ್ತಿಲ್ಲ. ಅವರಿಂದ ಹೊಸದು ಏನೂ ಮಾಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಅವಧಿಪೂರ್ವ ಚುನಾವಣೆ ನಡೆಯೋದಿಲ್ಲ. ಅವಧಿ ಮುಗಿದ ಬಳಿಕವೇ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಬೊಮ್ಮಾಯಿಯವರ ಆಡಳಿತ ವೈಖರಿಯಿಂದ ಹೆಸರು ಮಾಡಿದ್ದಾರೆ. ಈ ಆಧಾರದಲ್ಲೇ ಚುನಾವಣೆ ಎದುರಿಸುತ್ತೇವೆ. ನಾವೇ ಗೆಲ್ಲುತ್ತೇವೆ. ಪಕ್ಷದಲ್ಲಿ ಯಾವುದೇ ಬದಲಾವಣೆ ಮಾಡಲ್ಲ. ಈಗ ಪಕ್ಷ ಹೇಗಿದೆಯೋ ಅದೇ ಸ್ಥಿತಿಯಲ್ಲಿ ಚುನಾವಣೆ ಎದುರಿಸ್ತೇವೆ. ಸಂಪುಟಕ್ಕೆ ಆಕಾಂಕ್ಷಿಗಳ ಸೇರ್ಪಡೆ, ಬಿಡುವುದು ಸಿಎಂ ವಿವೇಚನೆ ಎಂದು ಹೇಳಿದ್ದಾರೆ.
ಬೆಂಗಳೂರಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮನ
ನಾಳೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅರುಣ್ ಸಿಂಗ್ ಭಾಗಿಯಾಗುವ ಹಿನ್ನಲೆಯಲ್ಲಿ ಇಂದು ಬೆಂಗಳೂರಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದಾರೆ. ಇಂದು ರಾತ್ರಿ ಕುಮಾರಕೃಪಾ ಅತಿಥಿ ಗೃಹದಲ್ಲಿ ಅರುಣ್ ಸಿಂಗ್ ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ:
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಭೆ ಬಿಜೆಪಿ ಕಚೇರಿಗೆ ಸ್ಥಳಾಂತರ; ಭೇಟಿಗೆ ತುದಿಗಾಲಲ್ಲಿ ನಿಂತಿರುವ ಹಲವು ಶಾಸಕರು
ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ವಿಚಾರದ ಬಗ್ಗೆ ಅರುಣ್ ಸಿಂಗ್ ಮೌನ; ಅಚ್ಚರಿ ಮೂಡಿಸಿದ ರಾಜ್ಯ ಉಸ್ತುವಾರಿಯ ನಡೆ
Published On - 7:32 pm, Thu, 31 March 22