ಸಿಎಂ ಬೊಮ್ಮಾಯಿರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ, ಧರಣಿ ಕೈಬಿಡುವ ಬಗ್ಗೆ ಚರ್ಚಿಸಿ ನಿರ್ಧಾರ ತಿಳಿಸುತ್ತೇವೆ -CITU ರಾಜ್ಯಾಧ್ಯಕ್ಷೆ ವರಲಕ್ಷ್ಮೀ
ಸಿಎಂ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ CITU ಅಧ್ಯಕ್ಷೆ ವರಲಕ್ಷ್ಮೀ, ಸದ್ಯ 60 ಕೋಟಿ ಹಣ ಮಂಜೂರು ಮಾಡಿ ಎಂದು ಮನವಿ ಮಾಡಿದ್ದೇವೆ. ಸಿಎಂ ಸಕಾರತ್ಮಕವಾಗಿ ಸ್ಪಂದಿಸಿ, ಭರವಸೆ ನೀಡಿದ್ದಾರೆ. ಸಿಎಂ ನಮ್ಮ ಬೇಡಿಕೆಗಳನ್ನ ಆಲಿಸಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದ್ದೇವೆ ಎಂದರು.
ಬೆಂಗಳೂರು: ಸಂಬಳ ಹೆಚ್ಚಳ, ಸೌಲಭ್ಯ ಹೆಚ್ಚಳ ಅಂತಾ ಪ್ರತಿಭಟನೆ ಮಾಡ್ತಿದ್ದ ರಾಜ್ಯ ಬಿಸಿಯೂಟ ನೌಕರರು ಆಗಸ್ಟ್ 16ರಿಂದ ತಮ್ಮ ನೌಕರಿ ಉಳಿವಿಗಾಗಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 60 ವರ್ಷ ವಯಸ್ಸಾದ ಕಾರ್ಯಕರ್ತೆಯರನ್ನು ಸರ್ಕಾರ ಕೆಲಸದಿಂದ ವಜಾ ಮಾಡಿದೆ. ಇದರಿಂದಾಗಿ 6,500 ಕಾರ್ಯಕರ್ತೆಯರು ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇವರಿಗೆ ನಿವೃತ್ತಿ ವೇತನ ಕೊಟ್ಟಿಲ್ಲ. ಯಾವ ಸೌಲಭ್ಯ ಕೊಡದೆ ಕೆಲಸದಿಂದ ವಜಾಗೊಳಿಸಿದ್ದಾರೆ. ಇದ್ರಿಂದ ಸಿಟ್ಟಿಗೆದ್ದಿರೋ ಬಿಸಿಯೂಟ ನೌಕರರು CITU ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ರು. ಹಾಗೂ ಮಧ್ಯಾಹ್ನ 1 ಗಂಟೆಯೊಳಗೆ ಸ್ಪಂದಿಸದೆ ಇದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕೋದಾಗಿ ಕಾರ್ಯಕರ್ತೆಯರು ಗಡುವು ನೀಡಿದ್ದರು. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆಗೆ ಕರೆದಿದ್ದು CITU ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಸಿಎಂ ಭೇಟಿ ಮಾಡಿದ್ದಾರೆ.
ಧರಣಿ ಕೈಬಿಡಬೇಕಾ ಬೇಡ್ವಾ ಅನ್ನೋ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ
ಇನ್ನು ಸಿಎಂ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ CITU ಅಧ್ಯಕ್ಷೆ ವರಲಕ್ಷ್ಮೀ, ಸದ್ಯ 60 ಕೋಟಿ ಹಣ ಮಂಜೂರು ಮಾಡಿ ಎಂದು ಮನವಿ ಮಾಡಿದ್ದೇವೆ. ಸಿಎಂ ಸಕಾರತ್ಮಕವಾಗಿ ಸ್ಪಂದಿಸಿ, ಭರವಸೆ ನೀಡಿದ್ದಾರೆ. ಸಿಎಂ ನಮ್ಮ ಬೇಡಿಕೆಗಳನ್ನ ಆಲಿಸಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದ್ದೇವೆ. ಆದ್ರೆ ಶಿಕ್ಷಣ ಸಚಿವರು, ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್ ಪ್ರತಿಭಟನೆ ಸ್ಥಳಕ್ಕೆ ಬರಬೇಕೆಂದು ಒತ್ತಾಯ ಮಾಡಿದ್ದೇವೆ. ಇನ್ನೂ ಪ್ರತಿಭಟನೆ ಕೈಬಿಡಬೇಕಾ ಎಂಬ ವಿಚಾರವನ್ನ ಚರ್ಚೆ ಮಾಡ್ತೇವೆ. ಇನ್ನೂ ಎರಡು ಗಂಟೆಯಲ್ಲಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು.
60 ವರ್ಷ ಮೇಲ್ಪಟ್ಟ ನೌಕರರನ್ನು ಕೆಲಸದಿಂದ ವಜಾಗೊಳಿಸುವಾಗ 1 ಲಕ್ಷ ರೂಪಾಯಿ ಹಿಡಿಗಂಟು ನೀಡಬೇಕು. ಬಿಸಿಯೂಟ ನೌಕರರನ್ನು ಖಾಯಂಗೊಳಿಸಬೇಕು. ಇವರನ್ನು ಸರ್ಕಾರಿ ಕಾರ್ಮಿಕರೆಂದು ಗುರುತಿಸಬೇಕು. ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 1 ಸಾವಿರ ರೂಪಾಯಿಗಳನ್ನ ಜಾರಿ ಮಾಡಬೇಕು. ಜೊತೆಗೆ ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಟ್ಟಿಕೊಡಬೇಕು ಎಂದು ಬಿಸಿಯೂಟ ನೌಕರರು ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: 6,500 ಮಂದಿ ಬಿಸಿಯೂಟ ಕಾರ್ಯಕರ್ತೆಯರ ವಜಾ: ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:15 pm, Wed, 17 August 22