50% ಬಿಲ್ ಅಮೌಂಟ್ ರಿಲೀಸ್ ಮಾಡ್ತೇವೆ, ಬೆಂಗಳೂರಿನಲ್ಲಿ ಬಾಕಿ ಕಾಮಗಾರಿಗಳನ್ನು ಬೇಗನೇ ಮುಗಿಸಿ -ಗುತ್ತಿಗೆದಾರರಿಗೆ ಬೆಂಗಳೂರು ಉಸ್ತುವಾರಿ ಸಚಿವ ಶಿವಕುಮಾರ್ ಸೂಚನೆ
ಬೆಂಗಳೂರು ಟ್ರಾಫಿಕ್ ಬಗ್ಗೆನೂ ಮಾತನಾಡಿದ್ದೇನೆ. ನಾಳಿದ್ದು ಅಕ್ಟೋಬರ್ 7ರಂದು ಸಭೆ ಮಾಡಿ ಟ್ರಾಫಿಲ್ ಕಂಟ್ರೋಲ್ ಬಗ್ಗೆ ಪರಾಮರ್ಷೆ ನಡೆಸುತ್ತೇವೆ. ನಗರ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ಗುಂಡಿಗಳನ್ನ ಮುಚ್ಚಲು ಬಿಬಿಎಂಪಿ ಕ್ರಮ ತೆಗೆದುಕೊಳ್ಳಬೇಕು - ಬೆಂಗಳೂರು ಉಸ್ತುವಾರಿ ಸಚಿವರೂ ಆದ ಡಿಸಿಎಂ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 5: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರು ಸುದ್ದಿಗೋಷ್ಠಿ ನಡೆಸಿ, ಮಾತನಾಡುತ್ತಿದ್ದಾರೆ. ನಿನ್ನೆ ಬುಧವಾರ ರಾಜಧಾನಿ ರೌಂಡ್ಸ್ ನಡೆಸಿದ್ದ ಬೆಂಗಳೂರು ಉಸ್ತುವಾರಿ ಸಚಿವರೂ ಆದ ಡಿಕೆಶಿ ಅವರು ಬೆಂಗಳೂರಿನ ಸ್ಥಿತಿಗತಿ, ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಸದ್ಯಕ್ಕೆ ಮಳೆ ನಿಂತಿದ್ದು, ಮತ್ತೆ ಸದ್ಯದಲ್ಲೇ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಮಳೆ ಆರಂಭವಾಗುವ ಹೊತ್ತಿಗೆ ಎಲ್ಲಾ ಕಾಮಗಾರಿ ಕೆಲಸ ಮುಗಿಸಲು ಸೂಚನೆ ನೀಡಿದ್ದೇನೆ. ಅಪ್ರೂವಲ್ ಆಗಿದ್ದ ಕೆಲಸಗಳು ನಿಂತಿದ್ದವು. ಮತ್ತೆ ಆರಂಭಗೊಳಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಒಟ್ಟಾರೆ 5000 ಕೋಟಿ ರೂ ಕಾಮಗಾರಿ ಕೆಲಸ ನಿಂತಿತ್ತು. ಅದನ್ನ ಆರಂಭಿಸಲು ಹೇಳಿದ್ದೇನೆ. ಸರ್ಕಾರದ ಬಿಲ್ ಗಳು 50 % ರಿಲೀಸ್ ಮಾಡಲಿದ್ದೇವೆ. 675 ಕೋಟಿ ರೂ ಗಳನ್ನ ಬಿಡುಗಡೆ ಮಾಡುತ್ತೇವೆ. 432 ಕೋಟಿ ಬಿಬಿಎಂಪಿ ಕಾಮಗಾರಿ ಬಿಲ್ ಬಿಡುಗಡೆ ಮಾಡುತ್ತೇವೆ. ಇಂಜಿನಿಯರುಗಳು ಮತ್ತು ಗುತ್ತಿಗೆದಾರರಿಗೆ (BBMP Contractor) ಕಾಮಗಾರಿ ಬೇಗನೇ ಮುಗಿಸುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನು ಬೆಂಗಳೂರು ಟ್ರಾಫಿಕ್ ಬಗ್ಗೆನೂ ಮಾತನಾಡಿದ್ದೇನೆ. ನಾಳಿದ್ದು ಅಕ್ಟೋಬರ್ 7ರಂದು ಸಭೆ ಮಾಡಿ ಟ್ರಾಫಿಲ್ ಕಂಟ್ರೋಲ್ ಬಗ್ಗೆ ಪರಾಮರ್ಷೆ ನಡೆಸುತ್ತೇವೆ. ನಗರ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ಗುಂಡಿಗಳನ್ನ ಮುಚ್ಚಲು ಬಿಬಿಎಂಪಿ ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರಿನ ಎಲ್ಲ ಕಡೆಯೂ ಟ್ರಾಫಿಕ್ ಕಂಟ್ರೋಲ್ ಮಾಡುವುದು ಅಸಾಧ್ಯದ ಮಾತು. ಹಾಗೆಯೇ, ಬೆಂಗಳೂರಿನಾದ್ಯಂತ ರಸ್ತೆಗುಂಡಿ ಮುಚ್ಚಲು ಆಗಲ್ಲ. ಚಿಕ್ಕಪುಟ್ಟ ಸಮಸ್ಯೆಗಳು ಇವೆ. ಮಳೆಗೆ ಆಗಾಗ್ಗೆ ಚಿಕ್ಕಪುಟ್ಟ ಗುಂಡಿಗಳು ಬೀಳುತ್ತಿರುತ್ತೆ ಎಂದು ಶಿವಕುಮಾರ್ ಹೇಳಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಇನ್ನೂ ಹೇಳಿದರು ವಿವರ ಇಲ್ಲಿದೆ.
ರಾಜ್ಯದ ಎಲ್ಲಾ ಬೆಳೆಗಳನ್ನು ರಕ್ಷಣೆ ಮಾಡಿದ್ದೇವೆ. ಸದ್ಯ ಯಾವುದೇ ಬೆಳೆ ಬೆಳೆಯದಂತೆ ಹೇಳಿದ್ದೇವೆ. ಮಳೆ ಆರಂಭವಾಗುವ ಲಕ್ಷಣಗಳು ಇವೆ. ಈ ವರ್ಷ ಬರಗಾಲದ ವರ್ಷ, ಏನೂ ಮಾಡಲಾಗದು. ನಾನೂ ದಿನ ಕೈ ಮುಗಿಯುತ್ತಿದ್ದೇನೆ. ವಿರೋಧ ಪಕ್ಷದ ಧ್ವನಿ ನಿಲ್ಲಿಸಲಾಗುತ್ತಾ? 3 ಸಾವಿರ ಟಿಎಂಸಿ ನೀರು ಕೊಡಲಾಗಲ್ಲ ಎಂದು ತಿಳಿಸಿದ್ದೇವೆ. ಕಾವೇರಿ ವಿಚಾರದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಸಾಹೇಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾವು ಯಾವುದೇ ಆಪರೇಷನ್ ಮಾಡ್ತಿಲ್ಲ. (ನಮ್ಮ ಸಿದ್ದರಾಮಯ್ಯ ಸರ್ಕಾರ) ಬೀಳ್ತದೆ ಬೀಳ್ತದೆ ಅಂತ ಬದ್ದ ವೈರಿಗಳು ಕಾಯ್ತಿದಾರೆ, ಅವರೆಲ್ಲ ಒಂದಾಗಿದಾರೆ ಎಂದು ಈ ಸಂದರ್ಭದಲ್ಲಿ ಜೆ ಹೆಚ್ ಪಟೇಲ್ ಅವರ ಒಂದು ಭಾಷಣದ ಬಗ್ಗೆ ಪ್ರಾಸಂಗಿಕವಾಗಿ ಪ್ರಸ್ತಾವಿಸಿದರು. ಇನ್ನು, ನನಗೆ ಕನ್ನಡ ಬರಲ್ಲ ಎಂದು ನಮ್ಮ ಅಣ್ಣ (ಹೆಚ್ ಡಿ ಕುಮಾರಸ್ವಾಮಿ) ಹೇಳಿದ್ದಾರೆ, ಹಾಗಾಗಿ ಇನ್ನು ಇಂಗ್ಲೀಷ್ ನಲ್ಲಿ ಮಾತಾಡ್ತೇನೆ.
ಸಾರ್ವಜನಿಕರೂ ಸಹ ಪಾಟ್ ಹೋಲ್ಸ್ ಬಗ್ಗೆ ಮಾಹಿತಿ ನೀಡಬಹುದು:
ಪಾಟ್ ಹೋಲ್ಸ್ ಮುಚ್ಚುವ ಕೆಲಸ ಶುರುವಾಗಿದೆ. ಸಾರ್ವಜನಿಕರೂ ಸಹ ಪಾಟ್ ಹೋಲ್ಸ್ ಬಗ್ಗೆ ಮಾಹಿತಿ ನೀಡಬಹುದು. ಕೂಡಲೇ ಅದನ್ನ ಮುಚ್ಚುವ ಕೆಲಸ ಮಾಡ್ತೇವೆ. ಇಡೀ ಬೆಂಗಳೂರು ಮಾಡುವುದು ಕಷ್ಟ, ಆದರೆ ಪ್ರಮುಖ ರಸ್ತೆಗಳಲ್ಲಿ ಮುಚ್ಚುತ್ತೇವೆ. ಟೆಂಡರ್ ಶೂರ್ ಕಾಮಗಾರಿಗಳು ನಡೆದಿವೆ. ಕೇಬಲ್ ಗಳು ಇನ್ನೂ ಮೇಲೆ ಹಾರಾಡ್ತಿವೆ. ಅಧಿಕಾರಿಗಳು ಕೇಬಲ್ ಕಟ್ ಮಾಡ್ತಾರೆ. ಟೆಂಡರ್ ಶೂರ್ ಕಡೆ ಕೇಬಲ್ ಎಳೆದುಕೊಳ್ಳಬೇಕು. 350 ಕಿ.ಮೀ. ನಾವು ಟೆಂಡರ್ ಶೂರ್ ಮಾಡಿದ್ದೇವೆ. ಇದನ್ನ ಕೇಬಲ್ ಹಾಕೋಕೆ ಬಳಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Thu, 5 October 23