ವಾಜಪೇಯಿ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ -ನಿರ್ದೇಶಕ ಮನೋಜ್ ಕುಮಾರ್ ಪುನರುಚ್ಚಾರ, ಲೋಕಾಯುಕ್ತಕ್ಕೆ ದೂರು

ABVMC ಆಸ್ಪತ್ರೆಯಲ್ಲಿ ಸಹ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಪ್ರಭಾವಿಗಳ ನೇಮಕ ಆಗಿದೆ. ವಯೋಮಿತಿ ದಾಟಿರುವವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಭಾವಿ ಶಾಸಕರು ಮತ್ತು ಸಚಿವರ ಮಕ್ಕಳುಗಳನ್ನು ನೇಮಕವಾಗಿದೆ ಎಂದು ಜನತಾ ಪಕ್ಷ ರಾಜ್ಯಾಧ್ಯಕ್ಷ ನಾಗೇಶ್ ಆರೋಪಿಸಿದ್ದು, ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ವಾಜಪೇಯಿ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ -ನಿರ್ದೇಶಕ ಮನೋಜ್ ಕುಮಾರ್ ಪುನರುಚ್ಚಾರ, ಲೋಕಾಯುಕ್ತಕ್ಕೆ ದೂರು
ವಾಜಪೇಯಿ ವೈದ್ಯಕೀಯ ಕಾಲೇಜು (ಹಿಂದಿನ ಬೌರಿಂಗ್​ ಆಸ್ಪತ್ರೆ) ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ - ABVMC ಡೀನ್​
Follow us
ರಾಚಪ್ಪಾಜಿ ನಾಯ್ಕ್
| Updated By: ಸಾಧು ಶ್ರೀನಾಥ್​

Updated on:Oct 05, 2023 | 1:51 PM

ಬೆಂಗಳೂರು, ಅಕ್ಟೋಬರ್​​ 5: ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಸಂಶೋಧನಾ ಸಂಸ್ಥೆಯಲ್ಲಿ (Shri Atal Bihari Vajapayee Medical College and Research Institute Shivaji Nagar, Bengaluru) 2022-23 ರಲ್ಲಿ ನಡೆದಿದ್ದ 58 ಮಂದಿ ಸಹ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಯಲ್ಲಿ (Recruitment) ಅಕ್ರಮ (Corruption) ನಡೆದಿತ್ತು. ವಯೋಮಿತಿ ದಾಟಿರುವವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಭಾವಿ ಶಾಸಕರು, ಸಚಿವರ ಮಕ್ಕಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪಕ್ಕೆ ಸಂಬಂಧಪಟ್ಟಂತೆ ಹಿಂದಿನ ಬೌರಿಂಗ್ ಆಸ್ಪತ್ರೆಯ ನಿರ್ದೇಶಕ (Director cum Dean) ಡಾ. ಮನೋಜ್ ಕುಮಾರ್ ಪ್ರತಿಕ್ರಿಯಿಸಿದ್ದು ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದಾರೆ. ಈ ಮಧ್ಯೆ, ಇದೇ ಭ್ರಷ್ಟಾಚಾರ ಪ್ರಕರಣದ ಸಂಬಂಧ ಡಾ. ಹೆಚ ವಿ ಮನೋಜ್ ಕುಮಾರ್ ಸೇರಿದಂತೆ ಸಂಜಯಗಾಂಧಿ ಇನ್ಸ್ಟಿಟ್ಯೂಟ್ ನಿರ್ದೇಶಕ ಡಾ. ನಿರಂಜನ್ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರದ ಅಪರ ಕಾರ್ಯದರ್ಶಿ ಜಾವೀದ್ ಅಖ್ತರ್ ವಿರುದ್ಧ ಜನತಾ ಪಕ್ಷ ರಾಜ್ಯಾಧ್ಯಕ್ಷ ನಾಗೇಶ್ ಅವರು ಕರ್ನಾಟಕ ಲೋಕಾಯುಕ್ತಕ್ಕೆ (Lokayukta) ದೂರು ಸಲ್ಲಿಸಿದ್ದಾರೆ.

ಸಹ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಪ್ರಭಾವಿಗಳ ನೇಮಕ ಆಗಿದೆ. ವಯೋಮಿತಿ ದಾಟಿರುವವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಭಾವಿ ಶಾಸಕರು ಮತ್ತು ಸಚಿವರ ಮಕ್ಕಳುಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದವರಿಗೆ ಇದರಿಂದ ಅನ್ಯಾಯ ಆಗಿದೆ ಎಂದು ಆರೋಪಿಸಿರುವ ನಾಗೇಶ್ ಅವರು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ರಾಜಕಾರಣಿಗಳ ಮಕ್ಕಳೇ ಇದ್ದರೂ ನಿಯಮದ ಪ್ರಕಾರ ನೇಮಕಾತಿ ಆಗಿರುತ್ತದೆ- ಡಾ. ಮನೋಜ್ ಕುಮಾರ್

ನಿಯಮಾವಳಿ ಪ್ರಕಾರ ನೇಮಕಾತಿ ಆಗಿದೆ. ಅಂಕಪಟ್ಟಿಯಲ್ಲಿ ಯಾವುದೇ ತಿದ್ದುಪಡಿ ಮಾಡಿಲ್ಲ, ಡಾಕ್ಯುಮೆಂಟ್ ಆಗಿದೆ. 6 ಜನರು ಅಭ್ಯರ್ಥಿಗಳ ಸಂದರ್ಶನ ನಡೆಸಿದ್ದಾರೆ. ಮೆರಿಟ್ ಲಿಸ್ಟ್ ಮಾಡಿ ಪ್ರಾವಿಷನ್ ಲಿಸ್ಟ್ ಅನೌನ್ಸ್ ಮಾಡಿದ್ದಿವಿ. ರೋಸ್ಟರ್ ಪ್ರಕಾರ ಸರ್ಕಾರದಿಂದ ಫೈನಲ್ ಲಿಸ್ಟ್ ಮಾಡಿದ್ದಿವಿ. ಸರ್ಕಾರ ಹೇಳಿದಂತೆ ರೋಸ್ಟರ್ ಸಿಸ್ಟಮ್ ಫಾಲೋ ಮಾಡಿದ್ದೇವೆ. ೬೨ ಪೋಸ್ಟ್ ಕರೆದಿದ್ವಿ. ೫೮ ಜನರ ಆಯ್ಕೆಯಾಗಿದೆ. ಇನ್ನು ೧೨ ಜನರಿಗೆ ನೇಮಕಾತಿ ಆದೇಶ ಕೊಡಬೇಕು. ರಾಜಕಾರಣಿಗಳ ಮಕ್ಕಳೇ ಇದ್ದರೂ ನಿಯಮದ ಪ್ರಕಾರ ನೇಮಕಾತಿ ಆಗಿರುತ್ತದೆ. ತಿಂಗಳ ಹಿಂದೆ ಈ ಬಗ್ಗೆ ಸರ್ಕಾರ ಕೂಡ ತನಿಖೆಗೆ ಆದೇಶ ಮಾಡಿದೆ. ಸಂಬಂಧಪಟ್ಟ ವರದಿ ನೀಡಲಾಗಿದೆ. ನಿಗದಿ ಪಡಿಸಿದ ವಯೋಮಿತಿ ಆಧಾರದ ಮೇಲೆ ನೇಮಕಾತಿ ಆಗಿದೆ. ಈ ನೇಮಕಾತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಬೌರಿಂಗ್ ಆಸ್ಪತ್ರೆ ಡೀನ್​ ಮತ್ತು ನಿರ್ದೇಶಕ ಮನೋಜ್ ಕುಮಾರ್ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: 50% ಬಿಲ್ ಅಮೌಂಟ್​​ ರಿಲೀಸ್ ಮಾಡ್ತೇವೆ, ಬೆಂಗಳೂರಿನಲ್ಲಿ ಬಾಕಿ ಕಾಮಗಾರಿಗಳನ್ನು ಬೇಗನೇ ಮುಗಿಸಿ -ಗುತ್ತಿಗೆದಾರರಿಗೆ ಬೆಂಗಳೂರು ಉಸ್ತುವಾರಿ ಸಚಿವ ಶಿವಕುಮಾರ್ ಸೂಚನೆ

ಈ ಮಧ್ಯೆ, ಅಟಲ್ ಬಿಹಾರಿ ವಾಜಪೇಯಿ ಕಾಲೇಜು ಪ್ರಾಧ್ಯಾಪಕರ ನೇಮಕದಲ್ಲಿ ಅಕ್ರಮ ಪ್ರಕರಣದ ತನಿಖೆಗೆ ಸರ್ಕಾರದಿಂದ ಸಮಿತಿ ರಚನೆಯಾಗಿದ್ದು, 2023 ಆಗಸ್ಟ್ 10 ರಂದು ಅಧಿಸೂಚನೆ ಹೊರಡಿಸಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:42 pm, Thu, 5 October 23