ಕರ್ನಾಟಕ, ಕನ್ನಡಿಗರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪಶ್ಚಿಮ ಬಂಗಾಳ ಯುವಕ ನಿಲಯ್ ಮಂಡಲ್ ಇನ್ಸ್ಟಾಗ್ರಾಮ್ನಲ್ಲಿ ಕರ್ನಾಟಕ, ಕನ್ನಡಿಗರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾನೆ.
ಬೆಂಗಳೂರು ಅ.01: ವಿವಿಧ ರಾಜ್ಯ ಮತ್ತು ದೇಶಗಳಿಂದ ವಿದ್ಯಾಭ್ಯಾಸ ಅಥವಾ ಕೆಲಸಕ್ಕಾ ರಾಜಧಾನಿ ಬೆಂಗಳೂರಿಗೆ (Bengaluru) ಬಂದು ನೆಲಸುತ್ತಾರೆ. ಇಲ್ಲಿದ್ದು, ವರ್ಷಗಳೇ ಕಳೆದರೂ ಕನ್ನಡ ಕಲಿಯದೇ “ಕನ್ನಡ ಗೊತ್ತಿಲ್ಲ” ಎನ್ನುವರು. ಇದಷ್ಟೇ ಅಲ್ಲದೇ ಈ ಮಣ್ಣಿನ ಆಹಾರ, ನೀರು ಸೇವಿಸಿ ಉಂಡ ಮನೆಗೆ ಎರಡು ಬಗೆ ಎಂಬ ಮಾತಿನಂತೆ ಕನ್ನಡಿಗರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ. ಇದೇ ರೀತಿಯಾಗಿ ಪಶ್ಚಿಮ ಬಂಗಾಳ (West Bengal) ಯುವಕ ನಿಲಯ್ ಮಂಡಲ್ ಕನ್ನಡ ಮತ್ತು ಕನ್ನಡಿಗರ ಬಗ್ಗೆ ಬಹಳ ತುಚ್ಛವಾದ ಶಬ್ಧಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ (Socail Media) ಬರೆದುಕೊಂಡಿದ್ದಾನೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಇನ್ಸ್ಟಾಗ್ರಾಮ್ನಲ್ಲಿ ಕರ್ನಾಟಕ, ಕನ್ನಡಿಗರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾನೆ. ಈತನ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗೆ ಕೊಡಿಗೆಹಳ್ಳಿ ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಒಂಟಿಯಾಗಿ ಓಡಾಡುವ ಯುವತಿಯರನ್ನೇ ಟಾರ್ಗೆಟ್ ಮಾಡಿ ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ, ಕಾಮುಕ ಅರೆಸ್ಟ್
ನಿಲಯ್ ಮಂಡಲ್ ಪೋಸ್ಟ್ನಲ್ಲಿ ಏನಿದೆ?
ಬೆಂಗಳೂರು ಇಲ್ಲದೆ ಕರ್ನಾಟಕ ಏನೂ ಅಲ್ಲ. ನೀವು ಕರ್ನಾಟಕದ ಜನತೆ ಅವಿದ್ಯಾವಂತರು. ಅದಕ್ಕಾಗಿಯೇ ಜನರು ಬಂದು ನಿಮ್ಮ ತಾಯಿಯನ್ನು ಹಾಳು ಮಾಡುತ್ತಾರೆ. ಕರ್ನಾಟಕದ ಜನರು ಅವಿದ್ಯಾವಂತರು ಮತ್ತು ನನ್ನ ಸ್ನಾನಗೃಹವನ್ನು ಸ್ವಚ್ಛಗೊಳಿಸುವವರು. ನಾವು ಉತ್ತರ ಭಾರತೀಯರು, ಅದರಲ್ಲೂ ಬಂಗಾಳಿಗಳು ನಿಮ್ಮನ್ನು ಅಭಿವೃದ್ಧಿಪಡಿಸಲು ಇಲ್ಲಿಗೆ ಬರುತ್ತೇವೆ. ನಿಮ್ಮನ್ನು ಬಿಟ್ಟರೆ ಕನ್ನಡ ಮಾತನಾಡುವ ತಾಯಂದಿರು ಅರಣ್ಯವಾಸಿಗಳಾಗುತ್ತಾರೆ. ನೀವು ಕನ್ನಡ, ಕರ್ನಾಟಕ, ಬೆಂಗಳೂರು ಜನರು ಬಾತ್ರೂಮ್ ಸ್ವಚ್ಛಗೊಳಿಸಲು ಲಾಯಕರ. ಮತ್ತು ಯಾರೂ ನಿಮ್ಮ ಭಾಷೆಯನ್ನು ಕಲಿಯುವುದಿಲ್ಲ, ಇದು ಅತ್ಯಂತ ಕೆಟ್ಟ ಭಾಷೆಯಾಗಿದೆ. ಭಾರತದ ಅತ್ಯಂತ ಅನುಪಯುಕ್ತ ರಾಜ್ಯ ಕರ್ನಾಟಕ ಎಂದು ನಿಂದಿಸಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ