ಬೆಂಗಳೂರು: ಒಂಟಿಯಾಗಿ ಓಡಾಡುವ ಯುವತಿಯರನ್ನೇ ಟಾರ್ಗೆಟ್​ ಮಾಡಿ ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ, ಕಾಮುಕ ಅರೆಸ್ಟ್

ಈ ಕಾಮುಕ ಒಂಟಿ ಯುವತಿಯರು ಕಂಡ್ರೆ ಸಾಕು. ಅವರನ್ನು ಹಿಂಬಾಲಿಸಿ ಯಾರು ಇಲ್ಲದ ಸಮಯ ನೋಡಿಕೊಂಡು ಅವರನ್ನು ಅಪ್ಪಿ ಅಸಹ್ಯವಾಗಿ ವರ್ತಿಸುತ್ತಿದ್ದ. ಸದ್ಯ ಯುವತಿಯ ದೂರಿನ ಮೇರೆಗೆ ಕೇಸ್​ ದಾಖಲಿಸಿಕೊಂಡಿದ್ದ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕೀಚಕನ ಮತ್ತಷ್ಟು ನೀಚ ಕೃತ್ಯಗಳು ಬೆಳಕಿಗೆ ಬಂದಿವೆ.

ಬೆಂಗಳೂರು: ಒಂಟಿಯಾಗಿ ಓಡಾಡುವ ಯುವತಿಯರನ್ನೇ ಟಾರ್ಗೆಟ್​ ಮಾಡಿ ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ, ಕಾಮುಕ ಅರೆಸ್ಟ್
ಅಯ್ಯಪ್ಪ
Follow us
TV9 Web
| Updated By: ಆಯೇಷಾ ಬಾನು

Updated on: Oct 01, 2023 | 9:14 AM

ಬೆಂಗಳೂರು, ಅ.01: ಒಂಟಿಯಾಗಿ ಓಡಾಡುವ ಯುವತಿಯರನ್ನೇ ಟಾರ್ಗೆಟ್ ಮಾಡಿ ಯುವತಿಯರ ಖಾಸಗಿ ಅಂಗ ಮುಟ್ಟಿ ಎಸ್ಕೇಪ್ ಆಗುತ್ತಿದ್ದ ಕೀಚಕನನ್ನು ಹೈಗ್ರೌಂಡ್ಸ್ ಪೊಲೀಸರು (High Ground Police) ಬಂಧಿಸಿದ್ದಾರೆ. ವೈಯ್ಯಾಲಿ ಕಾವಲ್ ನಿವಾಸಿ ಅಯ್ಯಪ್ಪ ಬಂಧಿತ ಆರೋಪಿ. ಈ ಕಾಮುಕ ಒಂಟಿ ಯುವತಿಯರು ಕಂಡ್ರೆ ಸಾಕು. ಅವರನ್ನು ಹಿಂಬಾಲಿಸಿ ಯಾರು ಇಲ್ಲದ ಸಮಯ ನೋಡಿಕೊಂಡು ಅವರನ್ನು ಅಪ್ಪಿ ಅಸಹ್ಯವಾಗಿ (Misbehave) ವರ್ತಿಸುತ್ತಿದ್ದ. ಸದ್ಯ ಯುವತಿಯ ದೂರಿನ ಮೇರೆಗೆ ಕೇಸ್​ ದಾಖಲಿಸಿಕೊಂಡಿದ್ದ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕೀಚಕನ ಮತ್ತಷ್ಟು ನೀಚ ಕೃತ್ಯಗಳು ಬೆಳಕಿಗೆ ಬಂದಿವೆ.

ರಾತ್ರಿ ಊಟ ಮುಗಿಸಿ ವಾಕ್ ಮಾಡುತ್ತಿದ್ದ ಯುವತಿಯನ್ನು ಕಂಡು ಬೈಕ್​ನಲ್ಲಿ ದಿಢೀರನೇ ಪ್ರತ್ಯಕ್ಷವಾಗಿದ್ದ ಕಾಮುಕ ಅಯ್ಯಪ್ಪ, ಯುವತಿಯಿಂದ ಅಣತಿ ದೂರದಲ್ಲಿ ಬೈಕ್ ನಿಲ್ಲಿಸಿದ್ದ. ಬಳಿಕ ಯುವತಿಯನ್ನ ಫಾಲೋ ಮಾಡಿ ಅಸಭ್ಯವಾಗಿ ಮುಟ್ಟಿ ಯುವತಿ ಜೊತೆಗೆ ಕಿರಿಕ್ ತೆಗೆದು ಅಸಭ್ಯವಾಗಿ ವರ್ತಿಸಿದ್ದ. ಕೀಚಕನ ಅಸಭ್ಯ ವರ್ತನೆ ಕಂಡು ಯುವತಿ ಕಿರುಚಾಡಿದ್ದಾರೆ. ಇದರಿಂದ ಗಾಬರಿಗೊಂಡ ಕಾಮುಕ ಯುವತಿ ಬಿಟ್ಟು, ಬಂದು ಬೈಕ್​ನಲ್ಲಿ ಎಸ್ಕೇಪ್ ಆಗಿದ್ದ. ಈ ಘಟನೆ ವಸಂತನಗರದಲ್ಲಿ ನಡೆದಿದ್ದು ಘಟನೆ ಬಗ್ಗೆ ಯುವತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕೇಸ್ ದಾಖಲಿಸಿಕೊಂಡ ಪೊಲೀಸರು ವೈಯ್ಯಾಲಿ ಕಾವಲ್ ನಿವಾಸಿ ಅಯ್ಯಪ್ಪನನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕಾಮುಕನ ಮತ್ತಷ್ಟು ನೀಚ ಕೃತ್ಯಗಳು ಬೆಳಕಿಗೆ ಬಂದಿವೆ. ವರ್ಕ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ಅಯ್ಯಪ್ಪ, ರಿಪೇರಿಗೆ ಬರುವ ಬೈಕ್ ತೆಗೆದುಕೊಂಡು ನಗರದಲ್ಲಿ ಸುತ್ತಾಡುತ್ತಿದ್ದ. ದಿನಕ್ಕೊಂದು ಬೈಕ್​ನಲ್ಲಿ ರೌಂಡ್ಸ್ ಹಾಕುತ್ತಿದ್ದ. ಈ ವೇಳೆ ಒಂಟಿಯಾಗಿ ಯುವತಿಯರು ಕಂಡ್ರೆ ಅವರನ್ನು ತಬ್ಬಿ, ಖಾಸಗಿ ಅಂಗ ಮುಟ್ಟಿ ಎಸ್ಕೇಪ್ ಆಗುತ್ತಿದ್ದ. ಈ ರೀತಿ ಅನೇಕ ಬಾರಿ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿ ಎಸ್ಕೇಪ್ ಆಗಿದ್ದ. ಸದ್ಯ ಕಾಮುಕನನ್ನ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ನುಗು ಡ್ಯಾಂನ ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ಸಾವು

ಅಪಘಾತದಲ್ಲಿ ಇಬ್ಬರು ಬೈಕ್​ ಸವಾರರಿಗೆ ಗಂಭೀರ ಗಾಯ

ಬೆಂಗಳೂರಿನ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು ಇಬ್ಬರು ಬೈಕ್​ ಸವಾರರಿಗೆ ಗಂಭೀರ ಗಾಯಗಳಾಗಿವೆ. ಓವರ್​ ಟೇಕ್​ ಮಾಡಲು ಹೋಗಿ ಮುಂದೆ ಹೋಗುತ್ತಿದ್ದ ಬೈಕ್​ಗೆ​​ ಆಟೋ ಡಿಕ್ಕಿ ಹೊಡೆದಿದೆ. ಇದರಿಂದ ಅಪಘಾತ ಸಂಭವಿಸಿದ್ದು ಅಪಘಾತ ಮಾಡಿದ ಆಟೋ ಚಾಲಕ ಪರಾರಿಯಾಗಿದ್ದಾನೆ. ಆಟೋ ಡಿಕ್ಕಿಯಿಂದಾಗಿ ಇಬ್ಬರು ಬೈಕ್​​ ಸವಾರರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಲಾರಿ ಹರಿದು ಬೈಕ್​ ಸವಾರರಿಗೆ ಗಂಭೀರ ಗಾಯಗಳಾಗಿವೆ. ಲಾರಿ ಹರಿದ ಪರಿಣಾಮ ಯುವತಿ ಕಾಲು ಕಳೆದುಕೊಂಡಿದ್ದಾಳೆ. ಗಾಯಾಳು ಯುವತಿ, ಯುವಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್