ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷಾಚರಣೆ (New Year 2026) ಪ್ರಯುಕ್ತ ಭದ್ರತೆ ಮತ್ತು ಸುರಕ್ಷತಾ ಕಾರಣಗಳಿಗಾಗಿ ಕರ್ನಾಟಕದ (Karnataka) ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ (Bengaluru) ಫ್ಲೈಓವರ್ಗಳನ್ನು ಬಂದ್ ಮಾಡಲಾಗುತ್ತದೆ. ಮತ್ತೊಂದೆಡೆ ಬಿಎಂಟಿಸಿ ಬಸ್, ನಮ್ಮ ಮೆಟ್ರೋ ಸೇವೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಏನೇನು ಇರುತ್ತೆ? ಏನೇನು ಇರಲ್ಲ ಎಂಬ ಮಾಹಿತಿ ಇಲ್ಲಿದೆ.
ಹೊಸ ವರ್ಷಾಚರಣೆ: ಏನೇನಿರಲ್ಲ?
- ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಡಿಸೆಂಬರ್ 31ರ ಮಧ್ಯಾಹ್ನ 2 ಗಂಟೆಯಿಂದ ಜನವರಿ 1ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
- ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧ ಹೇರಲಾಗಿದೆ.
- ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಧ್ಯರಾತ್ರಿ 12.30ರವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದೆ. ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಕೊಡಗು ಜಿಲ್ಲೆಯಲ್ಲಿ ರಾತ್ರಿ 10 ಗಂಟೆಯ ಬಳಿಕ ಒಳಾಂಗಣದಲ್ಲಿ ಮಾತ್ರ ಪಾರ್ಟಿ ಮಾಡಲು ಅವಕಾಶ.
- ಬೆಂಗಳೂರಿನ ಚರ್ಚ್ ಸ್ಟ್ರೀಟ್, ಎಂಜಿ ರಸ್ತೆಯಲ್ಲಿ ಒಮ್ಮೆ ಹೋಗಿ ಹೊರಹೋದವರಿಗೆ ಮರಳಿ ಎಂಟ್ರಿ ಇಲ್ಲ.
- ನಮ್ಮ ಮೆಟ್ರೋ ಎಂಜಿ ರಸ್ತೆ, ಟ್ರಿನಿಟಿ ನಿಲ್ದಾಣ ಬಂದ್.
- ಬೆಂಗಳೂರಿನಲ್ಲಿ ಸಂಜೆ 6 ರ ನಂತರ ಪಾರ್ಕ್ಗಳು ಬಂದ್.
- ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ಗಳಲ್ಲಿ ಸಂಜೆಯ ನಂತರ ವಾಹನ ಸಂಚಾರ ಬಂದ್.
- ಚಿಕ್ಕಬಳ್ಳಾಪುರ ಜಿಲ್ಲೆಯ ಬೆಟ್ಟಗಳ ಚಾರಣಕ್ಕೆ ಅರಣ್ಯ ಇಲಾಖೆ ನಿರ್ಬಂಧ. ಸ್ಕಂದಗಿರಿ, ಆವಲಬೆಟ್ಟ, ಕೈವಾರದ ಬೆಟ್ಟ ಚಾರಣಕ್ಕೆ ಡಿಸೆಂಬರ್ 31 ರ ಸಂಜೆ 6 ಗಂಟೆಯಿಂದ ಜನವರಿ 1 ರ ಬೆಳಗ್ಗೆ 7 ಗಂಟೆಯವರೆಗೂ ನಿರ್ಬಂಧ.
- ಬೆಂಗಳೂರು ದಕ್ಷಿಣ ಜಿಲ್ಲೆಯ ಶ್ರೀರಾಮದೇವರ ಬೆಟ್ಟ, ಸಂಗಮ, ಮೇಕೆದಾಟು ಮತ್ತು ಚುಂಚಿ ಫಾಲ್ಸ್‌ಗಳಿಗೆ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ.
ಹೊಸ ವರ್ಷಾಚರಣೆ: ಏನೇನಿರುತ್ತೆ?
- ಬೆಂಗಳೂರಿನಲ್ಲಿ ತಡರಾತ್ರಿ 2 ಗಂಟೆ ವರೆಗೆ ಬಿಎಂಟಿಸಿ ಬಸ್ ಸಂಚಾರ.
- ಮುಂಜಾನೆ 3 ಗಂಟೆ ವರೆಗೆ ನಮ್ಮ ಮೆಟ್ರೋ ರೈಲು ಸೇವೆ.
- ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪಬ್, ಬಾರ್, ರೆಸ್ಟೋರೆಂಟ್ಗಳು ತಡರಾತ್ರಿ ವರೆಗೂ ಕಾರ್ಯಾಚರಿಸಲಿವೆ.
- ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ರಾತ್ರಿ 1 ರ ವರೆಗೂ ಕಾರ್ಯಾಚರಣೆಗೆ ಅನುಮತಿ ಇದೆ.
- ಕರಾವಳಿ ನಗರಗಳಾದ ಮಂಗಳೂರು, ಉಡುಪಿಗಳಲ್ಲಿ ಬೀಚ್ ಬದಿಯ ರೆಸಾರ್ಟ್ಗಳು, ಹೋಮ್ ಸ್ಟೇಗಳು ತೆರೆದಿರಲಿವೆ.
- ಮಂಗಳೂರು ನಗರದಲ್ಲಿ ರಾತ್ರಿ 12.30ರೊಳಗೆ ಹೊಸ ವರ್ಷ ಆಚರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ