AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year 2026: ಹೊಸ ವರ್ಷಕ್ಕೆ ನೈಟ್ ಪ್ಲಾನ್ ಇದೆಯಾ? ಬಿಎಂಟಿಸಿ ನೀಡುತ್ತಿದೆ ತಡರಾತ್ರಿಯವರೆಗೂ ಬಸ್ ಸೇವೆ

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ BMTC ಮಧ್ಯರಾತ್ರಿ ಬಸ್ ಸೇವೆಗಳನ್ನು ಒದಗಿಸುತ್ತಿದೆ. ಡಿಸೆಂಬರ್ 31 ರಾತ್ರಿ 11 ರಿಂದ ಜನವರಿ 1ರ ಮುಂಜಾನೆ 2 ಗಂಟೆಯವರೆಗೆ ವಿಶೇಷ ಬಸ್‌ಗಳು ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಿಂದ ವಿವಿಧ ಭಾಗಗಳಿಗೆ ಲಭ್ಯವಿರಲಿವೆ. ಮೆಟ್ರೋ ಕೂಡ ಅದೇ ಸಮಯಕ್ಕೆ ಸೇವೆ ಒದಗಿಸಲಿದ್ದು, ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಮಾತ್ರ ತಾತ್ಕಾಲಿಕವಾಗಿ ಮುಚ್ಚಿರುತ್ತದೆ.

New Year 2026: ಹೊಸ ವರ್ಷಕ್ಕೆ ನೈಟ್ ಪ್ಲಾನ್ ಇದೆಯಾ? ಬಿಎಂಟಿಸಿ ನೀಡುತ್ತಿದೆ ತಡರಾತ್ರಿಯವರೆಗೂ ಬಸ್ ಸೇವೆ
ಹೊಸ ವರ್ಷಕ್ಕೆ ನೈಟ್ ಪ್ಲಾನ್ ಇದೆಯಾ? ಬಿಎಂಟಿಸಿ ನೀಡುತ್ತಿದೆ ತಡರಾತ್ರಿಯವರೆಗೂ ಬಸ್ ಸೇವೆ
ಭಾವನಾ ಹೆಗಡೆ
|

Updated on: Dec 31, 2025 | 9:03 AM

Share

ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಸಾರ್ವಜನಿಕರಿಗೆ ಕೊಡುಗೆ ನೀಡಿದ್ದು, ಇಂದು (ಡಿಸೆಂಬರ್ 31) ತಡರಾತ್ರಿಯವರೆಗೂ ನಗರದ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ವಿಶೇಷ ಮಧ್ಯರಾತ್ರಿ ಬಸ್ ಸೇವೆಗಳನ್ನು ಘೋಷಿಸಿದೆ. ನ್ಯೂ ಇಯರ್ ಪ್ರಯುಕ್ತ ಇಂದು ರಾತ್ರಿ 11 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 2 ಗಂಟೆಯವರೆಗೆ ವಿಶೇಷ ಬಸ್ ಸೇವೆಗಳು ಕಾರ್ಯನಿರ್ವಹಿಸಲಿದ್ದು, ಪ್ರಯಾಣಿಕರ ಬೇಡಿಕೆ ಹೆಚ್ಚಾದಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗುವುದೆಂದು ಬಿಎಂಟಿಸಿ ತಿಳಿಸಿದೆ.

ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಿಂದ ನೇರ ಸೇವೆಗಳು

ವಿಶೇಷ ಬಸ್‌ಗಳು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಮತ್ತು ಬ್ರಿಗೇಡ್ ರಸ್ತೆಯಿಂದ ಹೊರಟು ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಎಲೆಕ್ಟ್ರಾನಿಕ್ಸ್ ಸಿಟಿ ಪೂರ್ವ, ಜಿಗಣಿ, ಸರ್ಜಾಪುರ, ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್, ಜನಪ್ರಿಯ ಟೌನ್‌ಶಿಪ್, ನೆಲಮಂಗಲ, ಯಲಹಂಕ (ಉಪನಗರ 5ನೇ ಹಂತ ಸೇರಿ), ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿ, ಜೀವನ್ ಭೀಮಾನಗರ ಸೇರಿದಂತೆ ಹಲವೆಡೆಗೆ ಬಸ್ ಸಂಚಾರ ಇರಲಿದೆ. ಈ ಕಾರಿಡಾರ್‌ಗಳಿಗೆ ಜಿ-ಸರಣಿ ಹಾಗೂ ನಿಯಮಿತ ಮಾರ್ಗದ ಬಸ್‌ಗಳನ್ನು ಮೀಸಲಿಡಲಾಗಿದೆ.

ಮಾರ್ಗ ಮತ್ತು ಬಸ್ ಸಂಖ್ಯೆಗಳ ವಿವರ

ಬ್ರಿಗೇಡ್ ರಸ್ತೆಯಿಂದ

  • ಎಲೆಕ್ಟ್ರಾನಿಕ್ಸ್ ಸಿಟಿ – ಜಿ-3
  • ಜಿಗಣಿ – ಜಿ-4

ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ:

  •  ಸರ್ಜಾಪುರ – ಜಿ-2
  •  ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್ – ಜಿ-6
  •  ಜನಪ್ರಿಯ ಟೌನ್‌ಶಿಪ್ – ಜಿ-7
  •  ನೆಲಮಂಗಲ – ಜಿ-8
  •  ಯಲಹಂಕ ಉಪನಗರ 5ನೇ ಹಂತ – ಜಿ-9
  •  ಯಲಹಂಕ – ಜಿ-10
  •  ಬಾಗಲೂರು – ಜಿ-11
  •  ಹೊಸಕೋಟೆ – 317-ಜಿ
  •  ಚನ್ನಸಂದ್ರ / ಕಾಡುಗೋಡಿ – ಎಸ್‌ಬಿಎಸ್‌-13ಕೆ
  •  ಬನಶಂಕರಿ – 13 ಗೆ ಬಸ್​ಗಳು ಸಂಚರಿಸಲಿವೆ.

ಇದನ್ನೂ ಓದಿ New Year 2026: ಹೊಸ ವರ್ಷಾಚರಣೆಗೆ ಗುಡ್ ನ್ಯೂಸ್: ತಡರಾತ್ರಿ ವರೆಗೂ ಇರುತ್ತೆ ನಮ್ಮ ಮೆಟ್ರೋ ರೈಲು ಸಂಚಾರ!

ವಿಶೇಷ ಮೆಟ್ರೋ ಸೇವೆ

ಇದೇ ವೇಳೆ, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಸೇವಾ ಅವಧಿಯನ್ನು ವಿಸ್ತರಿಸಿದೆ. ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ ತಡರಾತ್ರಿ 2 ಗಂಟೆಯವರೆಗೆ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವನ್ನು ಭದ್ರತಾ ಕಾರಣಗಳಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.