ಬೆಂಗಳೂರು: ರಸ್ತೆಯಲ್ಲಿ ಕಾರು (Car) ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವೈಟ್ ಫೀಲ್ಡ್ (Whitefield) ಪೊಲೀಸರು ಬಂಧಿಸಿದ್ದಾರೆ. ರಘು ಮತ್ತು ಮುರುಳಿ ಬಂಧಿತ ಆರೋಪಿಗಳು. ಆ. 5 ರಂದು ರಘು ಮತ್ತು ಮುರುಳಿ ಬೈಕ್ನಲ್ಲಿ ಕಾರವೊಂದು ಹಿಂಬಾಲಿಸಿಕೊಂಡು ಬಂದಿದ್ದರು. ವೈಟ್ ಫಿಲ್ಡ್ನ ಸಿದ್ದಾಪುರ ಬಳಿ ಕಾರನ್ನು ಅಡ್ಡಗಟ್ಟಿದ್ದರು. ಬಳಿಕ ಕಾರಿನ ಬಳಿ ಬಂದು ಚಾಲಕನಿಗೆ ಕಾರಿನಿಂದ ಕೆಳೆಗೆ ಇಳಿಯಲು ಹೇಳಿದ್ದರು. ಚಾಲಕ ಕೆಳೆಗೆ ಇಳಿಯದಿದ್ದಾಗ ಕಲ್ಲಿನಿಂದ ಕಾರಿನ ಗಾಜನ್ನು ಒಡೆಯಲು ಯತ್ನಿಸಿದ್ದರು. ನಂತರ ವಿಂಡ್‌ಶೀಲ್ಡ್ ಮುರಿಯಲು ಯತ್ನಿಸಿದ್ದರು.
One more #roadrage case caught on camera within a span of 1 month in Siddapura #whitefield limits, #Bengaluru
As per information the two wheeler chased the person in the car & his family 3 times to assault them & pelted stones & tried breaking the windows. pic.twitter.com/CIZoQA7BWG— NaNu Watching (@Namma_watching) August 6, 2023
ಘಟನೆಯ ದೃಶ್ಯಗಳನ್ನು Nanu Watching ಎಂಬುವರು ಟ್ವೀಟ್ ಮಾಡಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಮಾಡಿದ್ದರು. ಇನ್ನು ವಿಚಾರ ತಿಳಿಯುತ್ತಿದ್ದಂತೆ ವೈಟ್‌ಫೀಲ್ಡ್ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರು ಅಡ್ಡಗಟ್ಟಿದ ಪುಂಡರು
ಬೆಂಗಳೂರಿನಲ್ಲಿ ಈಚೆಗೆ ಇಂತಹ ಹಲವು ಘಟನೆಗಳು ನಡೆಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಕಾರಿನಲ್ಲಿ ಡ್ಯಾಶ್ ಕ್ಯಾಮೆರಾ ಅಳವಡಿಸುವಂತೆ ತಜ್ಞರು ಕಾರು ಮಾಲೀಕರಿಗೆ ಸಲಹೆ ನೀಡುತ್ತಿದ್ದಾರೆ.
ಚಾಮರಾಜನಗರ: ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿಪುರದಲ್ಲಿ ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಿಡಿಗೇಡಿಗಳ ಗುಂಪೊಂದು ಕಾರಿನಲ್ಲಿ ಬಂದು ದಂಪತಿ ಸಾಗುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದರು. ನಂತರ ದಂಪತಿ ಇದ್ದ ಕಾರಿನ ಬಳಿ ಬಂದು, ಕಾರಿನಲ್ಲಿದ್ದ ಮಹಿಳೆಯ ಕೈಗಳನ್ನು ಹೊರಗೆ ಎಳೆದಿದ್ದಾರೆ. ಇದರಿಂದ ಮಹಿಳೆ ಗಾಯಗೊಂಡಿದ್ದಾರೆ. ಅಲ್ಲದೇ ಕಾರಿನ ಡ್ಯಾಶ್‌ಕ್ಯಾಮ್ ಅನ್ನು ಹಾನಿ ಮಾಡಲು ಯತ್ನಿಸಿದ್ದರು.
ಘಟನೆ ದೃಶ್ಯ ಕಾರಿನ ಡ್ಯಾಶ್ಕ್ಯಾಮ್ನಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋವನ್ನು ಥರ್ಡ್ ಐ ಎಂಬ ಟ್ವಿಟರ್ ಖಾತೆ ಬಳೆಕೆದಾರರು ಆ.6 ರಂದು ಟ್ವೀಟ್ ಮಾಡಿದ್ದಾರೆ. “ನಾವು ದೂರು ಸಲ್ಲಿಸಲು ಬಯಸಿದ್ದೇವು. ಆದರೆ ನಾವು ತಮಿಳುನಾಡು ಗಡಿಗೆ ಹತ್ತಿರದಲ್ಲಿದ್ದರಿಂದ ಪೊಲೀಸರು ನಮಗೆ ಸಹಾಯ ಮಾಡಲಿಲ್ಲ. ದಯವಿಟ್ಟು ಈ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಿ. ಅವರು ದಂಪತಿಯನ್ನು ಅಡ್ಡಗಟ್ಟಲು ಕಾರಣವೇನು ? ಅಂತ ತಿಳಿಸಿ” ಎಂದು ಟ್ವೀಟ್ ಮಾಡಿದ್ದರು.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿ ದಂಪತಿ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದರು. ಅಲ್ಲದೇ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಅವರ ದೂರವಾಣಿ ನಂಬರ್ ಅನ್ನು ಸಹ ಹಂಚಿಕೊಂಡಿದ್ದರು.
ಅದೇ ದಿನ ರಾತ್ರಿ 9.21ಕ್ಕೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ (SP) ಪದ್ಮಿನಿ ಸಾಹೂ ಅವರು ಟ್ವೀಟ್ ಮಾಡಿ ತಿಳಿಸಿದ್ದರು.