Namma Metro: ಬೆಂಗಳೂರಿನಲ್ಲಿ ಜನಪ್ರಿಯತೆ ಪಡೆಯದ ಕಾಮನ್ ಮೊಬಿಲಿಟಿ ಕಾರ್ಡ್​

ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮಾರ್ಚ್ ಅಂತ್ಯದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್​ಗಳನ್ನು ಬಿಎಮ್​ಆರ್​ಸಿಎಲ್ ಬಿಡುಗಡೆ ಮಾಡಿತ್ತು. ಆದ್ರೆ ಈ ಕಾರ್ಡ್​ಗೆ ನಿರೀಕ್ಷಿತ ರೀತಿಯಲ್ಲಿ ಉತ್ತಮ ಪ್ರತಿಕ್ರಿಯೆಗಳು ಸಿಗುತ್ತಿಲ್ಲ.

Namma Metro: ಬೆಂಗಳೂರಿನಲ್ಲಿ ಜನಪ್ರಿಯತೆ ಪಡೆಯದ ಕಾಮನ್ ಮೊಬಿಲಿಟಿ ಕಾರ್ಡ್​
ಸಂಗ್ರಹ ಚಿತ್ರ
Follow us
ಆಯೇಷಾ ಬಾನು
|

Updated on: Jun 24, 2023 | 12:53 PM

ಬೆಂಗಳೂರು: ‘ಒಂದು ದೇಶ ಒಂದು ಕಾರ್ಡ್​’ ಯೋಜನೆಯ ಭಾಗವಾಗಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ( Namma Metro) ಇದೇ ವರ್ಷದ ಮಾರ್ಚ್ ಅಂತ್ಯದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್​ಗಳನ್ನು ಬಿಡುಗಡೆ ಮಾಡಲಾಗಿತ್ತು. ಆದ್ರೆ ರಾಷ್ಟ್ರೀಯ ಸಾಮಾನ್ಯ ಸಾರಿಗೆ ಕಾರ್ಡ್​ಗೆ (National Common Mobility Card- NCMC) ನಿರೀಕ್ಷಿತ ರೀತಿಯಲ್ಲಿ ಉತ್ತಮ ಪ್ರತಿಕ್ರಿಯೆಗಳು ಸಿಗುತ್ತಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಟಿಕೆಟ್​ ಖರೀದಿಸಲು BMRCL ಸ್ಮಾರ್ಟ್​​ ವಿಧಾನ ಪರಿಚಯಿಸಿ ಯಾವುದೋ ಕಾಲವಾಗಿದೆ. ಬಿಎಂಆರ್​​ಸಿಎಲ್​ ವತಿಯಿಂದ ಇದುವರೆಗೆ ಮಾರಾಟವಾಗಿರುವ 8 ಲಕ್ಷ ಕಾರ್ಡ್​​​ಗಳ ಪೈಕಿ ಕೇವಲ 4,500 ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್​​​​ಗಳನ್ನು ಬೆಂಗಳೂರಿನಲ್ಲಿ ವಿತರಿಸಿದೆ. ವೈಟ್​​​ಫೀಲ್ಡ್​​​-ಕೆಆರ್​​ ಪುರಂ ಮೆಟ್ರೋ ಮಾರ್ಗ ಉದ್ಘಾಟನೆ ಸಂದರ್ಭದಲ್ಲಿ ಕಳೆದ ಮಾರ್ಚ್​​​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ​NCMC ಕಾರ್ಡ್​​​ಗಳಿಗೆ ಚಾಲನೆ ಕೊಟ್ಟಿದ್ದರು.

BMRCL ಅಧಿಕಾರಿಗಳು ಹೇಳುವಂತೆ ಮುಂಬೈ ಹೊರತುಪಡಿಸಿ, ಇತರೆ ಎಲ್ಲಾ ಮೆಟ್ರೋ ನಗರಗಳಲ್ಲಿ NCMC ಕಾರ್ಡ್​ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿಲ್ಲ. ಬಹುಶಃ ಮುಂಬೈನ ಸಾರಿಗೆ ಏಜೆನ್ಸಿಗಳು NCMC ಕಾರ್ಡ್​ಗಳನ್ನು ಪ್ರಾರಂಭಿಸುವವರೆಗೆ ತಮ್ಮದೇ ಆದ (ಸ್ಮಾರ್ಟ್) ಕಾರ್ಡ್‌ಗಳನ್ನು ಹೊಂದಿರಲಿಲ್ಲ. ಆದ್ದರಿಂದ NCMC ಕಾರ್ಡ್​ಗಳ ಬಳಕೆಯು ಮುಂಬೈನಲ್ಲಿ ವ್ಯಾಪಕವಾಗಿದೆ. ಆದರೆ ಕೋಲ್ಕತ್ತಾ, ಕೊಚ್ಚಿ, ಬೆಂಗಳೂರು ಮತ್ತು ದೆಹಲಿಯಲ್ಲಿ ಪ್ರಯಾಣಿಕರು ತಮ್ಮದೇ ಆದ ಮೆಟ್ರೋ ಕಾರ್ಡ್​ಗಳನ್ನು ಹೊಂದಿರುವುದರಿಂದ ಯಾರು ಕೂಡ ಕಾಮನ್ ಮೊಬಿಲಿಟಿ ಕಾರ್ಡ್​ಗಳನ್ನು ಪಡೆಯುತ್ತಿಲ್ಲ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದರು.

ಇದನ್ನೂ ಓದಿ: Namma Yatri: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಮಿಂಚಿನ ಸಂಚಾರ; ಇದು ವಿಶ್ವದ ಮೊದಲ ಪರಿಪೂರ್ಣ ಓಪನ್ ಮೊಬಿಲಿಟಿ ಆ್ಯಪ್

BMRCL ನ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಪ್ರಕಾರ, ಇತ್ತೀಚೆಗೆ ಸಂಸ್ಥೆಯು ದಿನಕ್ಕೆ 30-35 NCMC ಗಳನ್ನು ಮಾರಾಟ ಮಾಡುತ್ತಿದೆ. ಆದರೆ ತಡೆರಹಿತ ಪ್ರಯಾಣ ಮತ್ತು ಪಾವತಿಯನ್ನು ಸಕ್ರಿಯಗೊಳಿಸಲು ಉದ್ದೇಶಿಸಲಾದ ಕಾರ್ಡ್​ಗೆ ಹೆಚ್ಚಿನ ಆಧ್ಯತೆ ಅಥವಾ ಜನಪ್ರಿಯತೆ ಸಿಗುತ್ತಿಲ್ಲ.

ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ ಎಂದರೇನು?

ರುಪೇ ಪೇಮೆಂಟ್‌ ವ್ಯವಸ್ಥೆಯ ಆಧಾರದಲ್ಲಿ ಸಾಮಾನ್ಯ ಮೊಬಿಲಿಟಿ ಕಾರ್ಡ್‌ ಕೆಲಸ ಮಾಡುತ್ತದೆ. ಬಸ್‌, ಪಾರ್ಕಿಂಗ್​ಗಾಗಿ ಸೇರಿದಂತೆ ಎಲ್ಲಾ ಕಡೆಯ ಮೆಟ್ರೋ ಸಂಪರ್ಕ, ರೀಟೇಲ್‌ ಶಾಪಿಂಗ್‌ಗಳಲ್ಲಿ ಒಂದೇ ಕಾರ್ಡ್‌ ಮೂಲಕ ವ್ಯವಹರಿಸಬಹುದು. ಬ್ಯಾಂಕ್‌ನಿಂದ ನೀಡಲಾಗುವ ರೂಪೇ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ನಂತೆಯೇ ಸಾಮಾನ್ಯ ಮೊಬಿಲಿಟಿ ಕಾರ್ಡ್‌ ಕೂಡ ಇರುತ್ತದೆ. ಈ ರೂಪೇ ಕಾರ್ಡ್‌ ಅನ್ನು ಪಾಲುದಾರ ಬ್ಯಾಂಕಿನ ಡೆಬಿಟ್‌/ಕ್ರೆಡಿಟ್‌ ಅಥವಾ ಪ್ರಿಪೇಯ್ಡ್‌ ಕಾರ್ಡ್‌ ರೂಪದಲ್ಲಿ ನೀಡಬಹುದು. ‘ಒಂದು ದೇಶ, ಒಂದು ಕಾರ್ಡ್‌’ ಎಂಬ ಪರಿಕಲ್ಪನೆಯಡಿ ಕಾರ್ಡ್‌ ರೂಪಿಸಿದ್ದು, ಇಡೀ ದೇಶದ ಮೆಟ್ರೋದಲ್ಲಿ ಇದನ್ನು ಬಳಸಬಹುದು. ಬೆಂಗಳೂರಿನ ಮೆಟ್ರೋ ಪ್ರಯಾಣಿಕರು ಈ ಕಾರ್ಡ್ ಹೊಂದಿದ್ದರೆ ದೇಶದ ಯಾವುದೇ ಮೆಟ್ರೋದ್ಲಲೂ ಪ್ರಯಾಣಿಸಬಹುದು, ಹಾಗೂ ತಮ್ಮ ಎಲ್ಲಾ ಪೇಮೆಂಟ್​ಗೂ ಡೆಬಿಟ್, ಕ್ರೆಡಿಟ್ ಕಾರ್ಡ್​ನಂತೆ ಬಳಸಬಹುದು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್