ಬೆಂಗಳೂರು; ಮಹಿಳೆಯನ್ನು ತಬ್ಬಿ ವ್ಯಕ್ತಿಯ ದುರ್ವರ್ತನೆ; ಎಕ್ಸ್​ ಖಾತೆಯಲ್ಲಿ ನೋವು ತೋಡಿಕೊಂಡ ಮಹಿಳೆ

ಬೆಂಗಳೂರಿನ ತನ್ನ ಮನೆಯ ಬಳಿ ವ್ಯಕ್ತಿಯೋರ್ವ ತನ್ನನ್ನು ತಬ್ಬಿ ದುರ್ವರ್ತನೆ ತೋರಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಎಕ್ಸ್‌ ಖಾತೆಯಲ್ಲಿ ನೋವು ತೋಡಿಕೊಂಡಿದ್ದಾರೆ. ಅಲ್ಲದೆ ವ್ಯಕ್ತಿಯ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದೆ.

ಬೆಂಗಳೂರು; ಮಹಿಳೆಯನ್ನು ತಬ್ಬಿ ವ್ಯಕ್ತಿಯ ದುರ್ವರ್ತನೆ; ಎಕ್ಸ್​ ಖಾತೆಯಲ್ಲಿ ನೋವು ತೋಡಿಕೊಂಡ ಮಹಿಳೆ
ದುರ್ವರ್ತನೆ ತೋರಿದ ವ್ಯಕ್ತಿ
Follow us
ಆಯೇಷಾ ಬಾನು
|

Updated on: Mar 21, 2024 | 10:46 AM

ಬೆಂಗಳೂರು, ಮಾರ್ಚ್.21: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮಹಿಳೆಯರಿಗೆ (Woman) ಸ್ವಲ್ಪವೂ ಸೇಫ್ಟಿ ಇಲ್ಲದಂತಾಗಿದೆ. ಇತ್ತೀಚೆಗೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಎದುರು ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಇದೀಗ ಮಹಿಳೆಯೊಬ್ಬರು ತಮ್ಮ ಮನೆಗೆ ತೆರಳಲು ಗೇಟ್ ಓಪನ್ ಮಾಡುವಾಗ ಹಿಂದೆಯಿಂದ ಬಂದ ವ್ಯಕ್ತಿ ಅವರನ್ನು ತಬ್ಬಿಕೊಂಡ ಘಟನೆ ನಡೆದಿದೆ. ಈ ಬಗ್ಗೆ ಮಹಿಳೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಘಟನೆಯ ಮಾಹಿತಿ ಹಂಚಿಕೊಂಡಿದ್ದಾರೆ.

ಮಂಗಳವಾರ ರಾತ್ರಿ ತನ್ನ ಮನೆಯ ಬಳಿ ವ್ಯಕ್ತಿಯೊಬ್ಬರು ತನ್ನನ್ನು ಅಪ್ಪಿಕೊಂಡು ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ X ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ಮಹಿಳೆ ತನ್ನ ಮನೆಯ ಗೇಟ್ ಓಪನ್ ಮಾಡುವಾಗ ತನಗೆ ಕಿರುಕುಳ ನೀಡಿದ ವ್ಯಕ್ತಿಯ ವೀಡಿಯೊವನ್ನು ಕೂಡ ಪೋಸ್ಟ್ ಮಾಡಿದ್ದಾರೆ.

ಮಹಿಳೆಯ ಪೋಸ್ಟ್

ಕಳೆದ ರಾತ್ರಿ ನನ್ನ ಸ್ನೇಹಿತನೊಬ್ಬ ನನ್ನನ್ನು ನನ್ನ ಮನೆಯ ಹತ್ತಿರ ಡ್ರಾಪ್ ಮಾಡಿ ಹೋದ. ನಾನು ಗೇಟ್ ತೆರೆಯಲು ಮುಂದಾದಾಗ, ಈ ವ್ಯಕ್ತಿ ಬಂದು ನನ್ನನ್ನು ಹಿಂದಿನಿಂದ ಹಿಡಿದಪ್ಪಿ ಓಡಿ ಹೋದ. ನಾನು ನನ್ನ ಸ್ನೇಹಿತನಿಗೆ ಕರೆ ಮಾಡಿ ಅವನು ಓಡಿ ತಪ್ಪಿಸಿಕೊಳ್ಳುವ ಮೊದಲು ಅವನನ್ನು ಹಿಡಿಯಲು ಹೇಳಿದೆ ಎಂದು ಮಹಿಳೆ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕುಡಿಯಲು ನೀರು ಕೇಳಿ ಯುವತಿ ಜೊತೆ ಫುಡ್ ಡೆಲಿವರಿ ಬಾಯ್​​ ದುರ್ವರ್ತನೆ, FIR ದಾಖಲು

ಆ ವ್ಯಕ್ತಿಯನ್ನು ಏಕೆ ಬಿಟ್ಟು ಕಳಿಸಿದ್ದೀರಿ ಎಂದು ಕೇಳುವ ಎಲ್ಲರಿಗೂ ನಾನು ಹೇಳೋದು ಎಷ್ಟೇ. ನಾನು ಆತನನ್ನು ಬಿಟ್ಟುಕಳಿಸಿಲ್ಲ, ನಾನು ಅವನ ವಿರುದ್ಧ ದೂರು ನೀಡಿದ್ದೇನೆ ಮತ್ತು ಅವನು ಪೊಲೀಸರ ಮುಂದೆ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದನ್ನು ಪೋಸ್ಟ್ ಮಾಡುವ ಕಾರಣವೆಂದರೆ ಜಾಗೃತಿ ಮತ್ತು ಲೋಪದೋಷ. ಎಲ್ಲರೂ ಜಾಗೃತರಾಗಬೇಕು.

ಮಹಿಳೆ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ, ವ್ಯಕ್ತಿ ತನ್ನ ಮುಖವನ್ನು ಕ್ಯಾಮೆರಾದಿಂದ ಮುಚ್ಚಿಕೊಳ್ಳುತ್ತಿರುವುದು ಕಂಡುಬಂದಿದೆ. ಮಹಿಳೆ ಜೊತೆ ದುರ್ವರ್ತನೆ ತೋರಿದ್ದಾಗಿ ವ್ಯಕ್ತಿ ಒಪ್ಪಿಕೊಂಡಿದ್ದಾನೆ.

ಆಕೆಯ ಸ್ನೇಹಿತ ಆತನನ್ನು ಹಿಡಿದಾಗ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಆದರೆ, ವ್ಯಕ್ತಿಯ ವಿರುದ್ಧ ಕೇವಲ ಆರೋಪಗಳಿರುವ ಕಾರಣ ಬಿಡುಗಡೆ ಮಾಡಲಾಗಿದೆ ಎಂದು ಮಹಿಳೆ ಹೇಳಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ