ನೀನು ಕುರೂಪಿ, ಸುಂದರವಾಗಿಲ್ಲ ಎಂದು ಗಂಡನಿಂದ ನಿಂದನೆ ಆರೋಪ; ಮಹಿಳೆ ಆತ್ಮಹತ್ಯೆಗೆ ಶರಣು

ಫೆಬ್ರವರಿ 18 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರು ವರ್ಷದ ಹಿಂದೆ ನಿಜಾಮುದ್ದೀನ್ ಜೊತೆಗೆ ಅನಿಶಾ ಎರಡನೇ ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷ ಹಾಗೂ 6 ತಿಂಗಳ ಇಬ್ಬರು ಮಕ್ಕಳಿದ್ದಾರೆ.  ಮದುವೆಯಾದಾಗಿನಿಂದ ಗಂಡ ಹಾಗೂ ಅತ್ತೆಯಿಂದ ಕಿರುಕುಳ ಆರೋಪ ಕೇಳಿ ಬಂದಿದೆ.

ನೀನು ಕುರೂಪಿ, ಸುಂದರವಾಗಿಲ್ಲ ಎಂದು ಗಂಡನಿಂದ ನಿಂದನೆ ಆರೋಪ; ಮಹಿಳೆ ಆತ್ಮಹತ್ಯೆಗೆ ಶರಣು
ನಿಜಾಮುದ್ದೀನ್ ಮತ್ತು ಅನಿಶಾ
Edited By:

Updated on: Feb 22, 2022 | 8:52 AM

ಬೆಂಗಳೂರು: ಮೈಮೇಲೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಮಹಿಳೆ(Woman) ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ನಗರದ ಡಿಜೆ ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ. ನೀನು ಕುರೂಪಿ, ಸುಂದರವಾಗಿಲ್ಲ ಎಂದು ಗಂಡ ನಿಂದನೆ ಮಾಡುತ್ತಾರೆ ಎಂದು ಮಹಿಳೆ ತನ್ನ ಕುಟುಂಬಸ್ಥರಲ್ಲಿ(Family) ಹೇಳಿಕೊಂಡಿದ್ದಳು. ಸದ್ಯ ಈ ವಿಷಯದಿಂದಲೇ ನೊಂದ ಮಹಿಳೆ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಅನಿಶಾ(33) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಫೆಬ್ರವರಿ 18 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರು ವರ್ಷದ ಹಿಂದೆ ನಿಜಾಮುದ್ದೀನ್ ಜೊತೆಗೆ ಅನಿಶಾ ಎರಡನೇ ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷ ಹಾಗೂ 6 ತಿಂಗಳ ಇಬ್ಬರು ಮಕ್ಕಳಿದ್ದಾರೆ.  ಮದುವೆಯಾದಾಗಿನಿಂದ ಗಂಡ ಹಾಗೂ ಅತ್ತೆಯಿಂದ ಕಿರುಕುಳ ಆರೋಪ ಕೇಳಿ ಬಂದಿದೆ.

ನೀನು ಕುರೂಪಿ, ಸುಂದರವಾಗಿಲ್ಲ ಬೇಗ ಸಾಯಿ ಬೇರೆ ಮದುವೆ ಆಗುತ್ತೀನಿ ಎಂದು ಗಂಡ ಕಿರುಕುಳ ನೀಡುತ್ತಿದ್ದ. ಇದಕ್ಕೆ ನಿಜಾಮುದ್ದೀನ್ ತಾಯಿ ಖಲೀಂಉನ್ನೀಸಾ ಕೂಡ ಸಾಥ್​ ನೀಡುತ್ತಿದ್ದರು. 17 ನೇ ತಾರೀಕು ಕೂಡ ಗಂಡ ಹಾಗೂ ಅತ್ತೆ ಬೈದಿದ್ದರು. ಹೀಗಾಗಿ 18 ರಂದು ಮುಂಜಾನೆ 12.30 ಕ್ಕೆ ಸೀಮೆ ಎಣ್ಣೆ ಸುರಿದುಕೊಂಡು ಅನಿಶಾ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಕಿ ನಂದಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಫೆಬ್ರವರಿ 22) ಅನಿಶಾ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಲಾರ: ಮಾವಿನ ತೋಪಿನಲ್ಲಿ ಕತ್ತು ಕೊಯ್ದು ವೃದ್ಧನ ಕೊಲೆ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಇಂದಿರಾನಗರದ ಬಳಿ ಮಾವಿನ ತೋಪಿನಲ್ಲಿ ಕತ್ತು ಕೊಯ್ದು ವೃದ್ಧನ ಕೊಲೆ ಮಾಡಿದ್ದಾರೆ. ಕತ್ತು ಕೊಯ್ದು ಗಂಡುಮನತ್ತ ಗ್ರಾಮದ ಮುನಿಸ್ವಾಮಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲಾ.

ಇದನ್ನೂ ಓದಿ:

New Book: ಶೆಲ್ಫಿಗೇರುವ ಮುನ್ನ; ಜಿಬಿ ಹರೀಶರ ‘ಕಲಾಯೋಗಿ ಆನಂದ ಕುಮಾರಸ್ವಾಮಿ’ ಓದಿಗೆ ಲಭ್ಯ

Suicide: ಹೋಟೆಲ್​ನ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರೂಪದರ್ಶಿ

 

Published On - 8:34 am, Tue, 22 February 22