ಪ್ರತೇಕ ಘಟನೆ: ಆನೇಕಲ್​ನ ದೊಡ್ಡಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಬಾವಿಯಲ್ಲಿ ಯುವಕನ ಶವ ಸಿಕ್ತು

ಬೆಂಗಳೂರಿನ ಆನೇಕಲ್​ನ ದೊಡ್ಡಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಮತ್ತೊಂದಡೆ ಮಂಡ್ಯದ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದ ಬಳಿಯ ಬಾವಿಯಲ್ಲಿ ಕೊಳೆತ ಯುವಕನೋರ್ವನ ಶವ ಪತ್ತೆಯಾಗಿದೆ. ಈ ಎರಡೂ ಪ್ರತ್ಯೇಕ ಘಟನೆಯ ವಿವರ ಈ ಕೆಳಗಿನಂತಿದೆ ನೋಡಿ.

ಪ್ರತೇಕ ಘಟನೆ: ಆನೇಕಲ್​ನ ದೊಡ್ಡಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಬಾವಿಯಲ್ಲಿ ಯುವಕನ ಶವ ಸಿಕ್ತು
ಆನೇಕಲ್​ ಬಳಿಯ ದೊಡ್ಡಕೆರೆ
Updated By: ರಮೇಶ್ ಬಿ. ಜವಳಗೇರಾ

Updated on: Aug 23, 2023 | 12:29 PM

ಬೆಂಗಳೂರು, (ಆಗಸ್ಟ್ 23): ಬೆಂಗಳೂರು(Bengaluru)  ಹೊರವಲಯ ಆನೇಕಲ್ ಪಟ್ಟಣದ ದೊಡ್ಡಕೆರೆಯಲ್ಲಿ ಅಪರಿಚಿತ ಮಹಿಳೆಯ (Woman) ಶವ ಪತ್ತೆಯಾಗಿದೆ. ಇಂದು (ಆಗಸ್ಟ್ 23) ಬೆಳಿಗ್ಗೆ ಕೆರೆಯಲ್ಲಿ (Lake) ಮೃತದೇಹ ತೇಲುತ್ತಿರುವುದನ್ನ ಕಂಡು ಸ್ಥಳೀಯರು ಕೂಡಲೇ ಆನೇಕಲ್ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಯೋ ಅಥವಾ ಕೊಲೆ ಮಾಡಿ ನಂತರ ಮೃತದೇಹವನ್ನು ತಂದು ಕರೆಗೆ ಎಸೆಯಲಾಗಿದೆಯಾ ಎನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ.

ಬಾವಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ

ಮಂಡ್ಯ,(ಆಗಸ್ಟ್ 23): ಮಂಡ್ಯ ( Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದ ಜಮೀನಿನೊಂದರ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ( body) ಪತ್ತೆಯಾಗಿದೆ. ಬಾವಿಯಲ್ಲಿ ಪತ್ತೆಯಾದ ಶವ ಸುಮಾರು 20 ವರ್ಷದ ಯುವಕನದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಬಾವಿಯ ಸುತ್ತಮುತ್ತ ಕೆಟ್ಟವಾಸನೆ ಬರುತ್ತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ ಪಿ ನವೀನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಾಯದಿಂದ 40 ಅಡಿಯಲ್ಲಿ ಆಳದಲ್ಲಿದ್ದ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಈ ಬಳಿಕ ಮಂಡ್ಯ ಜಿಲ್ಲೆಯ ವಿಮ್ಸ್ ಶವಾಗಾರಕ್ಕೆ ಮೃತ ದೇಹ ರವಾನೆ ಮಾಡಲಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಗೆ ನುಗ್ಗಿದ ಕಾರು, ಚಾಲಕ ದುರ್ಮರಣ

ರಾಯಚೂರು: ರಾಯಚೂರು ತಾಲೂಕಿನ ಕಸ್ಬೆ ಕ್ಯಾಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಂಗಡಿಗೆ ನುಗ್ಗಿದೆ. ಪರಿಣಾಮ ಚಾಲಕ ಸಲೀಂ(34) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಿನ್ನೆ (ಆಗಸ್ಟ್ 22) ತಡರಾತ್ರಿ ಸಿಂಧನೂರಿನಿಂದ ರಾಯಚೂರಿಗೆ ತೆರಳುತ್ತಿದ್ದಾಗ ಕಸ್ಬೆ ಕ್ಯಾಂಪ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಹೆದ್ದಾರಿ ಪಕ್ಕದಲ್ಲಿದ್ದ ಅಂಗಡಿಗೆ ನುಗ್ಗಿದೆ. ಅತೀವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ನಿಮ್ಮ  ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ