ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ನೇರ ಪ್ರಸಾರ, ಕನ್ನಡದಲ್ಲೇ ವಿವರಣೆ

ಚಂದ್ರನ ಅಂಗಳಕ್ಕೆ ಚಂದ್ರಯಾನ-3 ವಿಕ್ರಮ್​ ಲ್ಯಾಂಡರ್​ ಲ್ಯಾಂಡ್​ ಆಗುವ ಕೌತುಕ ಕ್ಷಣವನ್ನು ಕಣ್ತಿಂಬಿಕೊಳ್ಳಲು ಇಡೀ ವಿಶ್ವವೇ ಕಾತುರವಾಗಿರುವುದರಿಂದ ಕಾಯುತ್ತಿದೆ. ಈ ಕ್ಷಣಕ್ಕಾಗಿ ಕೌಂಟ್​ಡೌನ್​ ಶುರುವಾಗಿದೆ. ಇನ್ನು ಇತ್ತ ಬೆಂಗಳೂರಿನ ನೆಹರು ತಾರಾಲಯದಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ವಿಶೇಷ ಏನಂದರೆ ಲ್ಯಾಂಡರ್​ ಲ್ಯಾಂಡ್​ ಆಗುವ ಬಗ್ಗೆ ಕನ್ನಡದಲ್ಲಿ ವಿವರಣೆ ಸಿಗಲಿದೆ. ಈ ಅವಕಾಶವನ್ನು ಮಿಸ್​ ಮಾಡಿಕೊಳ್ಳಬೇಡಿ.

ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ನೇರ ಪ್ರಸಾರ, ಕನ್ನಡದಲ್ಲೇ ವಿವರಣೆ
ನೆಹರು ತಾರಾಲಯದಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ನೇರ ಪ್ರಸಾರ
Follow us
Poornima Agali Nagaraj
| Updated By: ರಮೇಶ್ ಬಿ. ಜವಳಗೇರಾ

Updated on: Aug 23, 2023 | 11:53 AM

ಬೆಂಗಳೂರು, (ಆಗಸ್ಟ್ 23): ಸೌರಮಂಡಲದಲ್ಲಿ ಅದೊಂದು ಅಮೂಲ್ಯವಾದ ಸಂಪನ್ಮೂಲ.. ಆಕರ್ಷಕ.. ನಿಗೂಢ.. ಕುಳಿಗಳೇ ತುಂಬಿರೋ ಸುಂದರ ಚಂದಮಾಮನ ಅಂಗಳದಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ. ಇಸ್ರೋ ವಿಜ್ಞಾನಿಗಳ 4 ವರ್ಷದ ಕನಸು,  4 ಲಕ್ಷ ಕಿಲೋ ಮೀಟರ್ ಪ್ರಯಾಣ. ಬಾಹ್ಯಾಕಾಶದಲ್ಲಿ ಐತಿಹಾಸಕ ಮೈಲಿಗಲ್ಲು ಸಾಧಿಸುವುದಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇದೆ.  ಇಂದು(ಆಗಸ್ಟ್ 23) ಸಂಜೆ 6ಗಂಟೆ 4 ನಿಮಿಷಕ್ಕೆ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಲ್ಯಾಂಡ್​ ಆಗುತ್ತಿದ್ದು, ಆ ಕೌತುಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕೆಲ ಗಂಟೆಗಳಷ್ಟೇ ಬಾಕಿ ಉಳಿದಿವೆ. ಹೀಗಾಗಿ ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನ -3 (Chandrayaan-3)ವಿಕ್ರಮ್​ ಲ್ಯಾಂಡರ್​((Vikram lander) )ಚಂದ್ರನ ಮೇಲೆ ಲ್ಯಾಂಡಿಂಗ್ ಆಗುವ ನೇರ ಪ್ರಸಾರ ಮಾಡುತ್ತಿದೆ. ಇದಕ್ಕಾಗಿ ದೊಡ್ಡ ಎಲ್​ಇಡಿ ಸ್ಕ್ರೀನ್​ ಹಾಕಲಾಗಿದೆ. ಇನ್ನು ವಿಶೇಷ ಏನೆಂದರೆ ಲ್ಯಾಂಡರ್ ಮಾಹಿತಿಗಳನ್ನು ತಾರಾಲಯದ ವಿಜ್ಞಾನಿಗಳು ಕನ್ನಡದಲ್ಲಿಯೇ ನೀಡಲಿದ್ದಾರೆ.

ನೆಹರು ತಾರಾಲಯದಲ್ಲಿ ನೇರ ಪ್ರಸಾರ

ವಿಕ್ರಮ್ ಲ್ಯಾಂಡರ್ ನ ಲ್ಯಾಂಡಿಂಗ್ ನ ನೇರ ಪ್ರಸಾರ ವೀಕ್ಷಿಸಲು ಬೆಂಗಳೂರಿನ ನೆಹರು ತಾರಾಲಯದಲ್ಲಿ(Nehru Planetarium) ವ್ಯವಸ್ಥೆ ಕಲ್ಪಿಸಲಾಗಿದೆ. ಚಂದ್ರನ ಅಂಗಳಕ್ಕೆ ಲ್ಯಾಂಡರ್ ಇಳಿಯುವ ಕ್ಷಣವನ್ನು ನೋಡಲು ದೇಶವೇ ಕಾತುರವಾಗಿರುವುದರಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು (ಆ.23)ಸಂಜೆ 5 ಗಂಟೆಯಿಂದ ಸಾಪ್ಟ್ ಲ್ಯಾಂಡಿಂಗ್ ನೇರ ಪ್ರಸಾರ ವೀಕ್ಷಿಸಲು ಈ ಅವಕಾಶ ಕಲ್ಪಿಸಲಾಗಿದೆ. ತಾರಾಲಯದ ಹೊರಗಡೆ ಆರು ದೊಡ್ಡ ಎಲ್ ಇಡಿ ಸ್ಕ್ರೀನ್ ಮೂಲಕ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನೆಹರು ತಾರಾಲಯದ ಹೊರಭಾಗದಲ್ಲಿ ಸುಮಾರು 500 ಜನರು ನೇರ ಪ್ರಸಾರ ವೀಕ್ಷಿಸಲು ಅನುವುಮಾಡಿಕೊಡಲಾಗಿದೆ.

ಇದನ್ನೂ ಓದಿ: Chandrayaan 3 Moon Landing Live: ಚಂದ್ರಯಾನ3 ಯಶಸ್ಸಿಗೆ ಶ್ರೀಶೈಲ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ

ವಿಕ್ರಮ್​ ಲ್ಯಾಂಡರ್ ಲ್ಯಾಂಡಿಂಗ್​ ಬಗ್ಗೆ ಕನ್ನಡದಲ್ಲಿಯೇ ಮಾಹಿತಿ

ಇನ್ನು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದ್ದು, ಲ್ಯಾಂಡರ್ ಮಾಹಿತಿಗಳನ್ನು ತಾರಾಲಯ ದ ವಿಜ್ಞಾನಿಗಳು ಕನ್ನಡದಲ್ಲಿಯೇ ನೀಡಲಿದ್ದಾರೆ.

ಒಟ್ಟಿನಲ್ಲಿ ಲ್ಯಾಂಡಿಂಗ್​ನ ರೋಚಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಜನರು ಕಾತುರತೆಯಿಂದ ಕಾಯುತ್ತಿದ್ದು, ಈ ಕ್ಷಣವನ್ನು ನೇರ ಪ್ರಸಾರದಲ್ಲಿ ನೋಡಲು ಅವಕಾಶವಿರುವುದರಿಂದ ಎಲ್ಲರ ಚಿತ್ತ ವಿಕ್ರಮ್ ಲ್ಯಾಂಡರ್​ ನತ್ತ ನೆಟ್ಟಿದೆ. ಬೆಂಗಳೂರಿನಲ್ಲಿ ಇದ್ದವರು ಈ ಅವಕಾಶವನ್ನು ಮಿಸ್​ ಮಾಡಿಕೊಳ್ಳಬೇಡಿ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ