ಫುಡ್ ಡೆಲಿವರಿ ಬಾಯ್‌ನಿಂದ ಯುವತಿಗೆ ಕಿರುಕುಳ; ಮೊಬೈಲ್‌ಗೆ ಅಶ್ಲೀಲ ಫೋಟೋ ಕಳಿಸಿ ಕಿರಿಕಿರಿ

ಫುಡ್ ಡೆಲಿವರಿ ಬಾಯ್‌ನಿಂದ ಯುವತಿಗೆ ಕಿರುಕುಳ; ಮೊಬೈಲ್‌ಗೆ ಅಶ್ಲೀಲ ಫೋಟೋ ಕಳಿಸಿ ಕಿರಿಕಿರಿ
ಪ್ರಾತಿನಿಧಿಕ ಚಿತ್ರ

ಫುಡ್ ಡೆಲಿವರಿ ಮಾಡಿದ ನಂತರವೂ ಮೆಸೆಜ್ ಮಾಡಿರುವ ಡೆಲಿವರಿ ಬಾಯ್, ನಿನ್ನ ಸ್ನೇಹಿತ ಎಂದು ಹೇಳಿಕೊಂಡು‌ ವಾಟ್ಸ್ ಆ್ಯಪ್ ಮೆಸೆಜ್ ಮಾಡಿದ್ದಾನೆ. ಮಧ್ಯರಾತ್ರಿ 11 ಗಂಟೆಗೆ ಮೆಸೆಜ್, ಕಾಲ್ ಮಾಡಿ ಕಿರುಕುಳ‌ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

TV9kannada Web Team

| Edited By: preethi shettigar

Jan 28, 2022 | 9:04 AM

ಬೆಂಗಳೂರು: ಫುಡ್ ಡೆಲಿವರಿ ಬಾಯ್‌(Food delivery boy) ಯುವತಿಗೆ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕಸವನಹಳ್ಳಿಯಲ್ಲಿ ನಡೆದಿದೆ. ಮೊಬೈಲ್‌ಗೆ ಅಶ್ಲೀಲ ಫೋಟೋ(Photos) ಕಳಿಸಿ ಕಿರಿಕಿರಿ ಮಾಡಿದ ಯುವಕನ ವಿರುದ್ಧ ಯುವತಿ ಸ್ನೇಹಿತ ಪೊಲೀಸ್ ಆಯುಕ್ತರಿಗೆ(police commissioner) ಟ್ವೀಟ್ ಮಾಡಿದ್ದು, ಯುವತಿಗೆ ಕಿರುಕುಳ ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದಾನೆ. ಫುಡ್ ಡೆಲಿವರಿಗಾಗಿ ನಂಬರ್ ನೀಡಿದ್ದ ಬೆಂಗಳೂರಿನ ಕಸವನಹಳ್ಳಿಯ ಯುವತಿಗೆ ಮೆಸೇಜ್ ಮಾಡಿ ಕಿರಿಕಿರಿ ಮಾಡಿದ್ದಾನೆ. ಬಿಹಾರದ ಮೊಬೈಲ್ ಸಂಖ್ಯೆಯಿಂದ ಮೆಸೇಜ್ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಫುಡ್ ಡೆಲಿವರಿ ಮಾಡಿದ ನಂತರವೂ ಮೆಸೆಜ್ ಮಾಡಿರುವ ಡೆಲಿವರಿ ಬಾಯ್, ನಿನ್ನ ಸ್ನೇಹಿತ ಎಂದು ಹೇಳಿಕೊಂಡು‌ ವಾಟ್ಸ್ ಆ್ಯಪ್ ಮೆಸೆಜ್ ಮಾಡಿದ್ದಾನೆ. ಮಧ್ಯರಾತ್ರಿ 11 ಗಂಟೆಗೆ ಮೆಸೆಜ್, ಕಾಲ್ ಮಾಡಿ ಕಿರುಕುಳ‌ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಪ್ರಿಂಕ್ಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್​ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರು: ಜೊಮ್ಯಾಟೋ‌ ಡೆಲಿವರಿ ಬಾಯ್ಸ್, ಹೋಟೆಲ್ ಸಿಬ್ಬಂದಿ ನಡುವೆ ಗಲಾಟೆ

ಜೊಮ್ಯಾಟೋ‌ ಡೆಲಿವರಿ ಬಾಯ್ಸ್ ಮತ್ತು ಹೋಟೆಲ್ ಸಿಬ್ಬಂದಿ ನಡುವೆ ಗಲಾಟೆಯಾದ ಘಟನೆ ಬೆಂಗಳೂರು ನಗರದ ಬಿಟಿಎಂ  ಲೇಔಟ್​ನ ಸೆಕೆಂಟ್ ಸ್ಟೇಜ್​ನಲ್ಲಿನ ಹೋಟೆಲ್‌ನಲ್ಲಿ ನಡೆದಿದೆ. ಗಲಾಟೆ ಮಾಡಿಕೊಂಡು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ರಾತ್ರಿ 2 ಗಂಟೆಗೆ ಆರ್ಡರ್ ಪಡೆಯುವ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಗಲಾಟೆ ಬಳಿಕ ಹೋಟೆಲ್ ಬಳಿ 40-50 ಡೆಲಿವರಿ ಬಾಯ್ಸ್ ಜಮಾವಣೆ ಆಗಿದ್ದಾರೆ. ಹೋಟೆಲ್ ಮುಂದಿಟ್ಟಿದ್ದ ಪಾಟ್ಸ್ ಅನ್ನು ಯುವಕರು ಧ್ವಂಸಗೊಳಿಸಿದ್ದಾರೆ. ಮೈಕೋ ಲೇಔಟ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಗೋಣಿ ಚೀಲ ಒಣಗಾಕುವ ವಿಚಾರಕ್ಕೆ ಕಿರಿಕ್ ತೆಗೆದು ಮಹಿಳೆಗೆ ಮಚ್ಚಿನೇಟು

ಗೋಣಿ ಚೀಲ ಒಣಗಾಕುವ ವಿಚಾರಕ್ಕೆ ಕಿರಿಕ್ ತೆಗೆದು ಮಹಿಳೆಗೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಸುಬ್ರಮಣ್ಯಪುರದ ವಸಂತಪುರದಲ್ಲಿ ನಡೆದಿದೆ. ತುಳಿಸಿ ಮಂಟಪದ ಮೇಲೆ ಗೋಣಿ ಚೀಲ ಹಾಕಿದ್ದ ನೆರೆಮನೆಯವರನ್ನು ಗೋಣಿ ಚೀಲ ತೆಗೆಯುವುದಕ್ಕೆ ಹೇಳಿದಕ್ಕೆ ಮಹಿಳೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ತಲೆ ಹಾಗೂ ಭುಜಕ್ಕೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ತಲೆಯಲ್ಲಿ ರಕ್ತ ಸುರಿಯುತ್ತಿದ್ದರು ಸ್ಥಳೀಯರು ಸಹಾಯಕ್ಕೆ ಬಾರಲಿಲ್ಲ. ಇನ್ನೂ ಈ ಸಂಬಂಧ ಪೊಲೀಸರಿಗೆ ದೂರು ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ. ಎಫ್​ಐಆರ್​ ದಾಖಲಾಗಿದ್ದರು ಇನ್ನೂ ಕೂಡ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎಂದು ಹಲ್ಲೆಗೊಳಗಾದ ಮಹಿಳೆ ಆರೋಪಿಸಿದ್ದಾರೆ.

ನೆರೆ ಮನೆಯ ವಿಜಯಲಕ್ಷ್ಮೀ, ಕುಮಾರ್, ವಿಶಾಲ್​ ಸೇರಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಮನೆ ಮುಂದೆ ನಿಲ್ಲಿಸಿರುವ ಬೈಕ್​ಗೆ ಬೆಂಕಿ ಹಚ್ಚಿದ್ದಾರೆ. ಮನೆ ಗ್ಲಾಸ್​ಗೆ ಕಲ್ಲಿನಿಂದ ಹೊಡೆದು ಬೈದಿದ್ದಾರೆ. ಹೀಗಾಗಿ ನೊಂದ ಅಮೂದ ಕುಟುಂಬಸ್ಥರು ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ಆದರೆ ಸಹಾಯಕ್ಕೆ ಸುಬ್ರಮಣ್ಯಪುರ ಪೊಲೀಸರು ಬಂದಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ! ಚಿಕ್ಕಮಗಳೂರು ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಅರೆಸ್ಟ್

ನಿಮ್ಮ ಆಫೀಸ್​ನಲ್ಲಿ ಬಾಸ್ ಕಿರಿಕಿರಿ ಮಾಡ್ತಾರಾ? ಕಿರಿಕಿರಿಯಿಂದ ಮುಕ್ತರಾಗಲು ಈ ವಿಡಿಯೋ ನೋಡಿ

Follow us on

Related Stories

Most Read Stories

Click on your DTH Provider to Add TV9 Kannada