AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World soil day 2022: ಬೈಕ್ ರ‍್ಯಾಲಿ ಮೂಲಕ ಮಣ್ಣಿನ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿದ ಸದ್ಗುರು

ಕಳೆದ ಹಲವಾರು ತಿಂಗಳುಗಳಿಂದ ದೇಶ ವಿದೇಶಗಳಲ್ಲಿ ಬೈಕ್ ರ‍್ಯಾಲಿ ನಡೆಸಿ 20 ಕ್ಕೂ ಹೆಚ್ಚು ದೇಶಗಳಲ್ಲಿ ಮಣ್ಣಿನ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. 

World soil day 2022: ಬೈಕ್ ರ‍್ಯಾಲಿ ಮೂಲಕ ಮಣ್ಣಿನ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿದ ಸದ್ಗುರು
ಸದ್ಗುರು
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Dec 05, 2022 | 11:19 AM

Share

ಬೆಂಗಳೂರು: ಇಂದು (ಡಿ.5) ವಿಶ್ವ ಮಣ್ಣಿನ ದಿನಾಚರಣೆ ಹಿನ್ನೆಲೆ ಸದ್ಗುರು ಜಗ್ಗಿ ವಾಸುದೇವ್ ಅವರು ಮತ್ತೊಂದು ಬೈಕ್ ರ‍್ಯಾಲಿ ಮಾಡುತ್ತಿದ್ದಾರೆ. ಬೆಂಗಳೂರಿನ ಹೆಬ್ಬಾಳದಿಂದ ಆರಂಭಿಸಿ ವಿಠಲ್ ಮಲ್ಯ ರಸ್ತೆಯಲ್ಲಿನ ಖಾಸಗಿ ಹೊಟೇಲ್‌ವರೆಗೂ ರ‍್ಯಾಲಿ ಮಾಡುತ್ತಿದ್ದು, ಮಣ್ಣು ಉಳಿಸಿ ಅಭಿಯಾನವನ್ನು ಮತ್ತಷ್ಟು ಧೃಡಗೊಳಿಸಿದ್ದಾರೆ. ಸದ್ಗುರು ರ‍್ಯಾಲಿ ಸಾಗುವ ಮಾರ್ಗದಲ್ಲಿ ಸೇವ್ ಸಾಯಿಲ್(save soil) ಭಿತ್ತಿಪತ್ರ ಹಿಡಿದು ನಿಂತ ನೂರಾರು ಜನರು ವಿಧಾನಸೌಧದ ಮುಂಭಾಗದಲ್ಲೂ ಮಣ್ಣು ಉಳಿಸಿ ಎಂದು ಘೋಷಣೆ ಕೂಗಿದ್ದಾರೆ.

ಇನ್ನು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ವಿಶ್ವ ಮಣ್ಣಿನ ದಿನಾಚರಣೆ ಹಿನ್ನೆಲೆ ಸದ್ಗುರು ಅವರು ಸುದ್ದಿಗೋಷ್ಠಿ ನಡೆಸಿದ್ದು, ಮಾರ್ಚ್ 21 ರಿಂದ 8 ತಿಂಗಳ ಕಾಲ ಈ ಅಭಿಯಾನ ನಡೆದಿದೆ.  81 ದೇಶಗಳಲ್ಲಿ ಮಣ್ಣಿನ ವಿಚಾರವಾಗಿ ಬದಲಾವಣೆಗೆ‌ ಮುಂದಾಗಿದೆ. ಜನವರಿಯಲ್ಲಿ ಆದ ವಿಶ್ವ ಮಟ್ಟದ ಸಭೆಯಲ್ಲಿ ಹವಾಮಾನ ವಿಚಾರವಾಗಿ ಮಾತನಾಡಲಾಯಿತು. ಆದರೆ ಮಣ್ಣಿನ ಬಗ್ಗೆ ಮಾತನಾಡಿರಲಿಲ್ಲ.ಈಗ ಪ್ರಪಂಚದೆಲ್ಲೆಡೆ ಮಣ್ಣಿನ ಮಹತ್ವದ ಕುರಿತು ಮಾತನಾಡಲಾಗುತ್ತಿದೆ ಮತ್ತು ಮಣ್ಣಿನ ವಿಚಾರವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿದೆ.

ಈಗಿನ ಬಹುತೇಕ ಆರೋಗ್ಯ ಸಮಸ್ಯೆಗಳು ಹಾಗೂ ಮಾನಸಿಕ ಸಮಸ್ಯೆಗಳಿಗೆ ಮಣ್ಣು ಪ್ರಮುಖ ಕಾರಣವಾಗಿದೆ. ಕ್ವಾಲಿಟಿ ಆಹಾರ ಸ್ವೀಕರಿಸುವುದು ಬಹಳ ಮುಖ್ಯ ಭಾರತದ ಮಣ್ಣು ಕೇವಲ ಶೇ 0.68 ಫಲವತ್ತವಾಗಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ಮಣ್ಣಿನ‌ ಫಲವತ್ತತೆ ಯುಕೆ ನಲ್ಲಿ ಕಾಣಬಹುದು.

ಇದನ್ನೂ ಓದಿ:World Soil Day 2022: ಕರ್ನಾಟಕದಲ್ಲಿ ಎಷ್ಟು ತರಹದ ಮಣ್ಣು ಇದೆ ? ಇಲ್ಲಿ ಯಾವ ಬೆಳೆ ಸೂಕ್ತ ಇಲ್ಲಿದೆ ಮಾಹಿತಿ

ಮಾನಸಿಕ ಆರೋಗ್ಯ ಸಮಸ್ಯೆಗಳು ಇತ್ತೀಚೆಗೆ ತುಂಬಾ ಹೆಚ್ಚಾಗುತ್ತಿದ್ದು, ಇದು ಸೋಷಿಯಲ್ ಮೀಡಿಯಾದಿಂದ ಆಗುತ್ತಿದೆ ಎಂದು ಅಂದುಕೊಳ್ಳುತ್ತಾರೆ.ಆದರೆ ಒಳ್ಳೆಯ ಆಹಾರ ಇಲ್ಲದಿರುವುದೇ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗಿದೆ. ಕೋವಿಡ್‌ನಲ್ಲಿ ನಾವು ಇದನ್ನೇ ನೋಡಿದ್ದು, ನಾವು ಕೋವಿಡ್ ಪ್ರಿವೆಂಟ್‌ ಮಾಡಲು ಆಗುತ್ತಿರಲಿಲ್ಲ, ಆರೋಗ್ಯಕರ ಆಹಾರವನ್ನೇ ಸ್ವೀಕರಿಸುತ್ತಿದ್ದರೆ, ಕೋವಿಡ್ ಸಂದರ್ಭದಲ್ಲಿ ಎಷ್ಟೋ ಸಾವುಗಳನ್ನು ತಡೆಗಟ್ಟಬಹುದಿತ್ತು, 2045 ನೇ ಇಸವಿಯ ಹೊತ್ತಿಗೆ ಶೇ. 40ರಷ್ಟು ಆಹಾರ ಉತ್ಪಾದನೆ ಕಡಿಮೆ ಆಗಲಿದೆ. ಅದನ್ನು ಸರಿಪಡಿಸಲು ನಾವು ಇವಾಗಿನಿಂದಲೇ ನಮ್ಮ ಜವಾಬ್ದಾರಿ ಆರಂಭಿಸಬೇಕು. ನಾವೆಲ್ಲರೂ ಒಂದು ಎಂದು ಇಡೀ ಪ್ರಪಂಚ ಭಾವಿಸಬೇಕು ಎಂದಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ