ಯೋಗೀಶ್ ಗೌಡ ಹತ್ಯೆ ಪ್ರಕರಣ: ಶಿವಾನಂದ ಶ್ರೀಶೈಲ ಬಿರಾದರ ಮಾಫಿ ಸಾಕ್ಷಿಯಾಗಲು ಹೈಕೋರ್ಟ್ ಒಪ್ಪಿಗೆ

|

Updated on: Apr 04, 2023 | 9:39 PM

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ಶ್ರೀಶೈಲ್​ ಬಿರಾದರ ಮಾಫಿ ಸಾಕ್ಷಿಯಾಗಲು ಹೈಕೋರ್ಟ್ ಅನುಮತಿ ನೀಡಿದೆ. ಪ್ರಕರಣದಲ್ಲಿ ಬಹುತೇಕ ಸಾಂದರ್ಭಿಕ ಸಾಕ್ಷಿಗಳಿರುವ ಹಿನ್ನೆಲೆ ಮಾಫಿ ಸಾಕ್ಷಿಯಾಗಿಸಿದರೆ ತಪ್ಪಿತಸ್ಥರ ಶಿಕ್ಷೆಗೆ ಅನುಕೂಲವಾಗಲಿದೆ.

ಯೋಗೀಶ್ ಗೌಡ ಹತ್ಯೆ ಪ್ರಕರಣ: ಶಿವಾನಂದ ಶ್ರೀಶೈಲ ಬಿರಾದರ ಮಾಫಿ ಸಾಕ್ಷಿಯಾಗಲು ಹೈಕೋರ್ಟ್ ಒಪ್ಪಿಗೆ
ಬಿಜೆಪಿ ಮುಖಂಡ ಯೋಗೀಶ್ ಗೌಡ
Image Credit source: udayavani.com
Follow us on

ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ (Yogesh Gowda Murder Case) ಸಂಬಂಧಿಸಿದಂತೆ ಶಿವಾನಂದ ಶ್ರೀಶೈಲ ಬಿರಾದರ ಮಾಫಿ ಸಾಕ್ಷಿಯಾಗಲು ಹೈಕೋರ್ಟ್ ಅನುಮತಿ ನೀಡಿದೆ. ಪ್ರಕರಣದಲ್ಲಿ ಬಹುತೇಕ ಸಾಂದರ್ಭಿಕ ಸಾಕ್ಷಿಗಳಿರುವ ಹಿನ್ನೆಲೆ ಮಾಫಿ ಸಾಕ್ಷಿಯಾಗಿಸಿದರೆ ತಪ್ಪಿತಸ್ಥರ ಶಿಕ್ಷೆಗೆ ಅನುಕೂಲವಾಗಲಿದೆ. ಹೀಗಾಗಿ ಸಿಆರ್​ಪಿಸಿ 306ರಡಿ ಹೇಳಿಕೆ ದಾಖಲಿಸಲು ನ್ಯಾ.ಕೆ.ನಟರಾಜನ್​ ಹೈಕೋರ್ಟ್ ಪೀಠದಿಂದ ಆದೇಶ ನೀಡಲಾಗಿದೆ. ಈ ಹಿಂದೆ ಆರೋಪಿ ತಪ್ಪೊಪ್ಪಿಕೊಳ್ಳಲು ಸೆಷನ್ಸ್ ಕೋರ್ಟ್ ಅನುಮತಿ ನಿರಾಕರಿಸಿದ ಹಿನ್ನೆಲೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಕೊಲೆ ಮಾಡಿದ ಆರೋಪಿಗೆ ಎ17 ಶಿವಾನಂದ ಬಿರಾದರ್ ಪಿಸ್ತೂಲ್ ನೀಡಿದ್ದ. ಮಾಜಿ ಸಚಿವ ವಿನಯ್ ಕುಲಕರ್ಣಿ ಈ ಕೊಲೆ ಪ್ರಕರಣದ‌ ಪ್ರಮುಖ ಆರೋಪಿ ಆಗಿದ್ದಾರೆ. ಸದ್ಯ ಅವರಿಗೆ ಧಾರವಾಡ ಪ್ರವೇಶ ಅನುಮತಿಯನ್ನು ಸುಪ್ರೀಂಕೋರ್ಟ್​ ನಿರಾಕರಿಸಿದೆ.

ಧಾರವಾಡ ಭೇಟಿಗೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಅರ್ಜಿ

ಧಾರವಾಡ ಭೇಟಿ ನಿರ್ಬಂಧ ಷರತ್ತು ಸಡಿಲಿಕೆ ಕೋರಿ ಸುಪ್ರೀಂಕೋರ್ಟ್​ಗೆ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. 1200 ಹಸುಗಳಿವೆ, 2400 ಮೇಕೆಗಳ ನಿರ್ವಹಣೆ ಮಾಡಬೇಕು. ಪತ್ನಿ, ಮಕ್ಕಳಿಂದ ಸೂಕ್ತ ನಿರ್ವಹಣೆ ಸಾಧ್ಯವಿಲ್ಲ. ವಿಧಾನಸಭೆ ಚುನಾವಣೆ ಇರುವುದರಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಹೀಗಾಗಿ ಧಾರವಾಡ ಭೇಟಿಗೆ ಅನುಮತಿ ನೀಡುವಂತೆ ಕೋರಿದ್ದರು. ಆದರೆ ಜಾಮೀನು ಷರತ್ತು ಸಡಿಲಿಕೆಗೆ ಸುಪ್ರೀಂಕೋರ್ಟ್ ನಿರಾಕರಿಸಿತ್ತು.

ಇದನ್ನೂ ಓದಿ: ಬಿಜೆಪಿ ಮುಖಂಡ ಯೋಗೀಶ್ ಗೌಡ ಬರ್ಬರ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಧಾರವಾಡ ಎಂಟ್ರಿಗೆ ಅನುಮತಿ ನಿರಾಕರಿಸಿದ ಸುಪ್ರೀಂ

ಜಾಮೀನು ನೀಡುವ ವೇಳೆ ವಾರಕ್ಕೆರಡು ಬಾರಿ ಸಿಬಿಐ ಕಚೇರಿಗೆ ಹಾಜರಾಗಬೇಕೆಂಬ ಷರತ್ತು ಸಡಿಲಿಸಲೂ ಮನವಿ ಮಾಡಿದ್ದು, ವಾರಕ್ಕೊಮ್ಮೆ ಮಾತ್ರ ಸಿಬಿಐ ಕಚೇರಿಗೆ ಹಾಜರಾಗಲು ಸುಪ್ರೀಂ ಸೂಚನೆ ನೀಡಿತ್ತು. ಧಾರವಾಡದಲ್ಲೇ ಚುನಾವಣೆಗೆ ಸ್ಪರ್ಧಿಸಲು ವಿನಯ್ ಕುಲಕರ್ಣಿ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.

ನಾನು ಟೆರರಿಸ್ಟ್ ಅಲ್ಲ

ನಾನು ಶಿಗ್ಗಾಂವಿ ಹೋಗುವುದು ನನ್ನ ತೀರ್ಮಾನ ಅಲ್ಲ. ಇದು ಹೈಕಮಾಂಡ್​ ತೀರ್ಮಾನ. ಯಾಕಂದ್ರೆ ನಾನು ಧಾರವಾಡಕ್ಕೆ ಹೋಗೋಕೆ ಆಗುತ್ತಿಲ್ಲ. ನಾನು ಟೆರರಿಸ್ಟ್ ಅಲ್ಲ. ನಾನು ಕಳೆದ 20 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ನಾಲ್ಕೈದು ಕ್ಷೇತ್ರದಲ್ಲಿ ನಿಂತರೂ ನಾನು ಗೆಲ್ಲುತ್ತೇನೆ. ಪಕ್ಷ ನನಗೆ ನಿಲ್ಲಬೇಡ ಅಂದ್ರೆ ನಾನು ತ್ಯಾಗ ಮಾಡುತ್ತೇನೆ. ನೋಡುತ್ತೀರಿ ಇನ್ನೂ ನನ್ನ ವಿರುದ್ದ ಷಡ್ಯಂತ್ರ ಆರಂಭವಾಗತ್ತೆ ಎಂದು ಹೇಳಿದ್ದರು.

ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಅಖಾಡಕ್ಕಿಳಿಯುವ ಬಗ್ಗೆ ವಿನಯ್​ ಕುಲಕರ್ಣಿ ಹೇಳಿದ್ದಿಷ್ಟು…

ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ

ಮಾರ್ಚ್​ 20ರಂದು ಬೆಳಗಾವಿಯಲ್ಲಿ ಮಾತನಾಡಿದ್ದ ವಿನಯ್ ಕುಲಕರ್ಣಿ, ಧಾರವಾಡಕ್ಕೆ ಹೋಗುವುದಕ್ಕೆ ನನಗೆ ಕೋರ್ಟ್ ನಿರ್ಬಂಧ ಇದೆ. ನಾನು ಶಿಗ್ಗಾಂವಿಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ. ಶಿಗ್ಗಾಂವಿ ಒಂದೇ ಅಲ್ಲ, ನನಗೆ ಇನ್ನೂ ನಾಲ್ಕೈದು ಕ್ಷೇತ್ರಗಳಿವೆ. ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿರುವುದಕ್ಕೆ ನಾನು ಸಾಕ್ಷಿ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದಿದ್ದರು.

ಶಿಗ್ಗಾಂವಿ ಟಿಕೆಟ್​​ ಕೇಳಿಲ್ಲ, ಧಾರವಾಡ ಟಿಕೆಟ್​​​ ಕೇಳಿದ್ದೇನೆ

ಶಿಗ್ಗಾಂವಿ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಶಿಗ್ಗಾಂವಿ ಟಿಕೆಟ್​​ ಕೇಳಿಲ್ಲ, ಧಾರವಾಡ ಟಿಕೆಟ್​​​ ಕೇಳಿದ್ದೇನೆ ಎಂದು ಇತ್ತೀಚೆಗೆ ಕುಲಕರ್ಣಿ ತಿಳಿಸಿದ್ದರು. ನಮ್ಮ ಪಕ್ಷದ ಮುಖಂಡರು ಏನೂ ಮಾಡ್ತಾರೋ ನೋಡೋಣ. ಪಕ್ಷದ ನಿರ್ಣಯ ನೋಡೋಣ, 7-8 ಜನ ಆಕಾಂಕ್ಷಿಗಳಿದ್ದಾರೆ. ಪಾಪ ಅವರ ಮನಸ್ಸಿಗೆ ನಾನು ನೋವು ಮಾಡಲು ಸಿದ್ಧವಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:39 pm, Tue, 4 April 23