ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಯುವತಿಯರು ಚೆನ್ನೈನಲ್ಲಿ ಪತ್ತೆ; ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದ ಪೊಲೀಸರು

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಯುವತಿಯರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡಿದ್ದಾರೆ. ಚೆನೈನಿಂದ ಯುವತಿಯರನ್ನ ಬೆಂಗಳೂರಿಗೆ ಕರೆತಂದ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ.

ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಯುವತಿಯರು ಚೆನ್ನೈನಲ್ಲಿ ಪತ್ತೆ; ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದ ಪೊಲೀಸರು
ನಾಪತ್ತೆಯಾಗಿದ್ದ ಯುವತಿಯರು
Updated By: sandhya thejappa

Updated on: Jul 29, 2022 | 9:42 AM

ಬೆಂಗಳೂರು: ನಾವು ಇನ್ನು ಬರಲ್ಲ ನಮ್ಮನ್ನು ಹುಡುಕಬೇಡಿ ಎಂದು ತಿಳಿಸಿ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಚೆನ್ನೈನಲ್ಲಿ (Chennai) ಪತ್ತೆಯಾಗಿದ್ದಾರೆ. ಯುವತಿಯರಾದ ಹರ್ಷಿತಾ, ವೈಶಾಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ (College) ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಇಬ್ಬರು ಸ್ನೇಹಿತರಾಗಿದ್ದು, ನಿನ್ನೆ (ಜುಲೈ 28) ಕಾಣೆಯಾಗಿದ್ದರು. ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಯುವತಿಯರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡಿದ್ದಾರೆ. ಚೆನೈನಿಂದ ಯುವತಿಯರನ್ನ ಬೆಂಗಳೂರಿಗೆ ಕರೆತಂದ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ.

ಯುವತಿಯರು ಇದ್ದಕ್ಕಿದ್ದಂತೆ ನಾಪತ್ತೆಯಾಗಲು ಕಾರಣವೇನು? ಪ್ರಕರಣದ ಹಿಂದೆ ಯಾರದ್ದಾದರೂ ಕೈವಾಡ ಇದೆಯಾ? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: 777 Charlie OTT: ಒಟಿಟಿಗೆ ಎಂಟ್ರಿ ಕೊಟ್ಟ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’; ಜುಲೈ 29ರಿಂದ ವೂಟ್​ ಸೆಲೆಕ್ಟ್​ನಲ್ಲಿ ಪ್ರಸಾರ

ಇದನ್ನೂ ಓದಿ
International Bullion Exchange: ಭಾರತದ ಮೊದಲ ಜಾಗತಿಕ ಚಿನ್ನ-ಬೆಳ್ಳಿ ವಿನಿಮಯ ಕೇಂದ್ರಕ್ಕೆ ಇಂದು ನರೇಂದ್ರ ಮೋದಿ ಚಾಲನೆ
Karnataka Rain: ಕರಾವಳಿ, ಮಲೆನಾಡಿನಲ್ಲಿ ಇಂದಿನಿಂದ 5 ದಿನ ಜೋರು ಮಳೆ; ಉತ್ತರ ಒಳನಾಡಿನಲ್ಲಿ ಹಳದಿ ಅಲರ್ಟ್​
ಮಂಗಳೂರಿನ ಸುರತ್ಕಲ್​​ನಲ್ಲಿ ಫಾಜಿಲ್​ ಹತ್ಯೆ ಪ್ರಕರಣ: ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಎಂದ ಮಾಜಿ ಸಚಿವ ಯು.ಟಿ.ಖಾದರ್
IND vs WI T20I: ಇಂದು ಭಾರತ-ವೆಸ್ಟ್​ ಇಂಡೀಸ್ ಮೊದಲ ಟಿ20: ರೋಚಕತೆ ಸೃಷ್ಟಿಸಿದ ಟೀಮ್ ಇಂಡಿಯಾ ಪ್ಲೇಯಿಂಗ್ XI

ಬೈಕ್ ಕಳ್ಳ ಸೆರೆ:
ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ರಾಯಚೂರಿನಲ್ಲಿ ಸೆರೆಯಾಗಿದ್ದಾನೆ. ರಂಗನಾಥ್ ದೊಡ್ಡಮನಿ (26) ಬಂಧಿತ ವ್ಯಕ್ತಿ. ಆರೋಪಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಮೂಲದವನು. ಬೆಂಗಳೂರಿನಲ್ಲಿ ಫೋಟೋ ಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ. ನಗರದಲ್ಲಿ ರಾಯಲ್ ಎನ್ ಫೀಲ್ಡ್, ಪಲ್ಸರ್ ಸೇರಿದಂತೆ ಹಲವು ಬೈಕ್​ಗಳನ್ನ​​ ಕಳ್ಳತನ ಮಾಡಿದ್ದ. ಕದ್ದ ಬೈಕ್​ಗಳನ್ನು ರಾಯಚೂರಿನಲ್ಲಿ ಮಾರಾಟ ಮಾಡುತ್ತಿದ್ದ.

ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿ ರಾಯಲ್ ಎನ್ ಫೀಲ್ಡ್ ಬೈಕ್​ನಲ್ಲಿ ಹೋಗುತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರನ್ನ ನೋಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆಗ ಆರೋಪಿ ರಂಗನಾಥ್​ನನ್ನ ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸದ್ಯ 6 ಬೈಕ್ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್​ನ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಮಕ್ಕಳು ಮತ್ತು ಶಾಲಾ ವ್ಯವಸ್ಥಾಪಕ ಮಂಡಳಿ ಕಂಗಾಲು

Published On - 9:36 am, Fri, 29 July 22