ಜಿಮ್ ಮಾಡೋ ಯುವಕರಿಗೆ ಅಪ್ಪು ನಿಧನದಿಂದ ಶಾಕ್; ದುಃಖದಿಂದ ಹೊರ ಬರುತ್ತಿಲ್ಲ ಅಭಿಮಾನಿಗಳು

| Updated By: preethi shettigar

Updated on: Nov 03, 2021 | 1:39 PM

ಕಳೆದ 5 ದಿನಗಳಿಂದ ಜಿಮ್ ಕಡೆ ಯುವಕರು ಮುಖ ಮಾಡಿಲ್ಲ. ಮೊದಲೆರಡು ದಿನ ಹಲವೆಡೆ ಜಿಮ್ ಬಂದ್ ಇದ್ದವು. ಇದೀಗ ಜಿಮ್​ ಓಪನ್ ಇದ್ದರೂ ಜಿಮ್​ಗೆ ಯಾರು ಬರುತ್ತಿಲ್ಲ. ಅಲ್ಲದೇ ರಾಜ್ಯಾದ್ಯಂತ ಜಿಮ್ ಬಗ್ಗೆ ಯುವಕರು ನಿರ್ಲಕ್ಷ್ಯದ ಮಾತು ಆಡುತ್ತಿದ್ದಾರೆ.

ಜಿಮ್ ಮಾಡೋ ಯುವಕರಿಗೆ ಅಪ್ಪು ನಿಧನದಿಂದ ಶಾಕ್; ದುಃಖದಿಂದ ಹೊರ ಬರುತ್ತಿಲ್ಲ ಅಭಿಮಾನಿಗಳು
ಪುನೀತ್​ ರಾಜ್​ ಕುಮಾರ್​ ವರ್ಕೌಟ್​
Follow us on

ಬೆಂಗಳೂರು: ಚಿತ್ರನಟ ಪುನೀತ್​ ರಾಜ್​ ಕುಮಾರ್​ ನಿಧನದಿಂದ ರಾಜ್ಯ, ಹೊರ ರಾಜ್ಯದ ಜನರು ಬೇಸರಗೊಂಡಿದ್ದಾರೆ. ಮನೆ ಮಗನನ್ನೆ ಕಳೆದುಕೊಂಡಂತೆ ದುಃಖಿಸುತ್ತಿದ್ದಾರೆ. ಅದರಲ್ಲೂ ಅಭಿಮಾನಿಗಳಂತು ಊಟ, ನಿದ್ದೆ ಬಿಟ್ಟು ಶೋಕ ಆಚರಿಸುತ್ತಿದ್ದಾರೆ. ಅಪ್ಪು ಸದಾ ಕಾಲ ಜಿಮ್​ನಲ್ಲಿ ಕಾಲ ಕಳೆಯುತ್ತಿದ್ದರು ಸದೃಢ ದೇಹಕ್ಕಾಗಿ ವ್ಯಾಯಾಮ ಮಾಡುತ್ತಿದ್ದರು. ಹೀಗಿರುವಾಗಲೇ ಪುನೀತ್​ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಯುವಕರಿಗೆ ಆಶ್ಚರ್ಯ ಉಂಟು ಮಾಡಿದೆ. ಹೀಗಾಗಿ ಜಿಮ್ ಹೋಗುವುದನ್ನೇ ಯುವಪಡೆ ನಿಲ್ಲಿಸಿದ್ದಾರೆ.

ಕಳೆದ 5 ದಿನಗಳಿಂದ ಜಿಮ್ ಕಡೆ ಯುವಕರು ಮುಖ ಮಾಡಿಲ್ಲ. ಮೊದಲೆರಡು ದಿನ ಹಲವೆಡೆ ಜಿಮ್ ಬಂದ್ ಇದ್ದವು. ಇದೀಗ ಜಿಮ್​ ಓಪನ್ ಇದ್ದರೂ ಜಿಮ್​ಗೆ ಯಾರು ಬರುತ್ತಿಲ್ಲ. ಅಲ್ಲದೇ ರಾಜ್ಯಾದ್ಯಂತ ಜಿಮ್ ಬಗ್ಗೆ ಯುವಕರು ನಿರ್ಲಕ್ಷ್ಯದ ಮಾತು ಆಡುತ್ತಿದ್ದಾರೆ.

ಅದರಲ್ಲೂ ಜಿಮ್​ಗೆ ಹೋಗದಂತೆ ಮಕ್ಕಳನ್ನು ಪೋಷಕರು ತಡೆಯುತ್ತಿದ್ದು, ಕಡಿಮೆ ತೂಕವನ್ನು ಎತ್ತುವಂತೆ ಸಲಹೆ ನೀಡುತ್ತಿದ್ದಾರೆ. ರಾಜ್ಯದ್ಯಂತ ಶೇ.50ರಷ್ಟು ಮಂದಿ ಜಿಮ್​ಗೆ ಹೋಗಲು ಮನಸ್ಸು ಮಾಡುತ್ತಿಲ್ಲ. ಅಲ್ಲದೇ ಬೆಂಗಳೂರಿನಲ್ಲಿ ಶೇ.60ರಷ್ಟು ಮಂದಿ ಜಿಮ್​ಗೆ ಹೋಗಲು ಹಿಂದೇಟು ಹಾಕಿದ್ದಾರೆ. ಅಪ್ಪು ಹೃದಯಾಘಾತಕ್ಕೆ ಜಿಮ್ ವರ್ಕೌಟ್ ಕಾರಣ ಎಂಬ ನಂಬಿಕೆ ಎಲ್ಲರಲ್ಲೂ ಉಂಟಾಗಿದ್ದೆ ಇದಕ್ಕೆ ಕಾರಣ.

ಪ್ರತಿ ದಿನ 150 ಯುವಕ-ಯುವತಿ ಜಿಮ್​ಗೆ ಬರುತ್ತಿದ್ದರು. ಇದೀಗ 40-50 ಜನ ಮಾತ್ರ ಬರುತ್ತಿದ್ದಾರೆ. ಹೊಸದಾಗಿ ಯಾರು ಕೂಡ ನೊಂದಣಿ ಮಾಡಿಕೊಳ್ಳುತ್ತಿಲ್ಲ. ಕೊರೊನಾ ಬಳಿಕ ಚೇತರಿಸಿಕೊಳ್ಳುತ್ತಿದ್ದ ಜಿಮ್ ಉದ್ಯಮ ಈಗ ಮತ್ತೆ ಹಿಂದೆ ಉಳಿಯುವ ಭೀತಿ ಎದುರಾಗಿದೆ. ಇಂಥ ಹೊತ್ತಿನಲ್ಲಿ ಮತ್ತೆ ತೊಂದರೆಯಾಗುತ್ತಿದೆ ಎಂದು ಜಿಮ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಅಪ್ಪು ಸರ್ ಸ್ಟಂಟ್, ವರ್ಕೌಟ್ ನೋಡಿ ನಾನು ಜಿಮ್ ಸೇರಿದೆ. ಅವರಿಗೆ ಈ ರೀತಿ ಆಗಿರೋದು ಶಾಕ್ ಆಗಿದೆ. ನನ್ನ ಜತೆಗೆ ಸೆರಿದವರು ಕೂಡ ಜಿಮ್​ಗೆ ಬರುತ್ತಿಲ್ಲ. ಪೋನ್ ಮಾಡಿದರೆ ಇನ್ನು ಸ್ವಲ್ಪ ದಿನ ಆದ ಮೇಲೆ ಬರುತ್ತೀನಿ ಎಂದಿದ್ದಾರೆ. ನಮ್ಮನೇಲಿ ಜಾಸ್ತಿ ಹೊತ್ತು ವರ್ಕೌಟ್ ಮಾಡಬೇಡ ಅಂತಿದ್ದಾರೆ. ತೂಕ ಜಾಸ್ತಿ ಎತ್ತಬೇಡ ಎಂದು ಹೇಳಿದ್ದಾರೆ. ಕೋಚ್ ಹೇಳಿದಂಗೆ ವರ್ಕೌಟ್ ಮಾಡಿಕೊಂಡು ಹೋಗುತ್ತಿದ್ದೀನಿ. ಕಾಲೇಜಿನ ಜೊತೆಗೆ ಜಿಮ್​ಗೆ ಸಮಯ ಕೊಡುತ್ತಿದೆ. ಆದರೆ ಈಗ ಭಯದಲ್ಲೇ ವರ್ಕೌಟ್ ಮಾಡುತ್ತಿದ್ದೇನೆ ಎಂದು ವಿದ್ಯಾರ್ಥಿನಿ ಪ್ರತು ಹೇಳಿದ್ದಾರೆ.

ಇದನ್ನೂ ಓದಿ:
ಪುನೀತ್​ ರಾಜ್​ಕುಮಾರ್​ ಸಾವಿನಲ್ಲೂ ಲಾಭ ಪಡೆದ ರಣಹದ್ದುಗಳು; ಆಕ್ರೋಶ ಹೊರ ಹಾಕಿದ ಅಭಿಮಾನಿಗಳು

‘ಪುನೀತ್​ ಆಸ್ಪತ್ರೆಗೆ ಬಂದಾಗ ಸಹಜವಾಗಿಯೇ ಇದ್ದರು’; ಹಾಗಿದ್ದರೆ ತಪ್ಪು ನಡೆದಿದ್ದೆಲ್ಲಿ? ವೈದ್ಯರು ವಿವರಿಸಿದ್ದು ಹೀಗೆ