AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

14 ಕಾಯಿಲೆಗಳ ನೆಪವೊಡ್ಡಿ ಜಾಮೀನಿಗೆ ಅರ್ಜಿ ಸಲ್ಲಿಸಿದ ವಂಚಕ ಯುವರಾಜ್ ಸ್ವಾಮಿ

ಜೈಲು ಆಸ್ಪತ್ರೆಯಲ್ಲಿಯೇ ಪರೀಕ್ಷೆ ಮಾಡಿಸಿ ರಿಪೋರ್ಟ್ ಪಡೆದಿರುವ ಯುವರಾಜ್ ಸ್ವಾಮಿ, ತನಗೆ ಹಲವು ಕಾಯಿಲೆಗಳಿವೆ ಎಂದು ರಿಪೋರ್ಟ್ ಸಲ್ಲಿಸಿದ್ದಾನೆ.

14 ಕಾಯಿಲೆಗಳ ನೆಪವೊಡ್ಡಿ ಜಾಮೀನಿಗೆ ಅರ್ಜಿ ಸಲ್ಲಿಸಿದ ವಂಚಕ ಯುವರಾಜ್ ಸ್ವಾಮಿ
ಯುವರಾಜ್ ಸ್ವಾಮಿ
TV9 Web
| Updated By: sandhya thejappa|

Updated on: Aug 22, 2021 | 11:03 AM

Share

ಬೆಂಗಳೂರು: ಹಲವರಿಗೆ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಯುವರಾಜ್ ಸ್ವಾಮಿ (Yuvaraj Swamy) ಸದ್ಯ ಜೈಲಿನಲ್ಲಿದ್ದು, ಹೊರಬರಲು ಸರ್ಕಸ್ ನಡೆಸುತ್ತಿದ್ದಾನೆ. ಜಾಮೀನು (Bail) ನೀಡಿ ಬಿಡುಗಡೆ ಮಾಡುವಂತೆ ಮೇಲಿಂದ ಮೇಲೆ ಯುವರಾಜ್ ಅರ್ಜಿ ಸಲ್ಲಿಸುತ್ತಿದ್ದಾನೆ. ಹೇಗಾದರೂ ಮಾಡಿ ಜೈಲಿನಿಂದ ಹೊರಬರಬೇಕೆಂದು ಕಸರತ್ತು ನಡೆಸುತ್ತಿರುವ ಯುವರಾಜ್ ಅನಾರೋಗ್ಯದ ಕಥೆ ಹೇಳಿ, ಜಾಮೀನು ಕೇಳುತ್ತಿದ್ದಾನೆ. ಬಣ್ಣ ಬಣ್ಣದ ಕಥೆ ಬಿಟ್ಟು ಕೋಟಿ ಕೋಟಿ ವಂಚಿಸಿದ್ದ ಈತನ ನಿಜ ಬಣ್ಣವನ್ನು ಸಿಸಿಬಿ ಅಧಿಕಾರಿಗಳು ಬಿಚ್ಚಿಟ್ಟು, ಜೈಲಿಗೆ ತಳ್ಳಿದ್ದರು. ಆದರೆ ಸೆರೆವಾಸದಿಂದ ಹೊರಬರಲು ಕಸರತ್ತು ನಡೆಸುತ್ತಿದ್ದಾನೆ.

ಜೈಲು ಆಸ್ಪತ್ರೆಯಲ್ಲಿಯೇ ಪರೀಕ್ಷೆ ಮಾಡಿಸಿ ರಿಪೋರ್ಟ್ ಪಡೆದಿರುವ ಯುವರಾಜ್ ಸ್ವಾಮಿ, ತನಗೆ ಹಲವು ಕಾಯಿಲೆಗಳಿವೆ ಎಂದು ರಿಪೋರ್ಟ್ ಸಲ್ಲಿಸಿದ್ದಾನೆ. ಸಲ್ಲಿಸಿದ ಅರ್ಜಿಯಲ್ಲಿ ಕಳೆದ 5 ವರ್ಷಗಳಿಂದ ತಾನು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ಸದ್ಯ ಅನಾರೋಗ್ಯದ ನೆಪವೊಡ್ಡಿ ಜಾಮೀನು ನೀಡುವಂತೆ ಆತ ಕೋರ್ಟ್ಗೆ ಮನವಿ ಮಾಡಿದ್ದಾನೆ.

14 ಕಾಯಿಲೆಗಳು ಖುದ್ದು ಯುವರಾಜ್ ಸ್ವಾಮಿ ತನಗೆ ಇರುವ ಕಾಯಿಲೆಗಳ ಬಗ್ಗೆ ಹೇಳಿಕೊಂಡಿದ್ದಾನೆ. ಕಳೆದ 7- 8 ವರ್ಷಗಳಿಂದ ಅಧಿಕ ರಕ್ತದೊತ್ತಡ, 6 ವರ್ಷಗಳಿಂದ ಮಧುಮೇಹ, ಲೀವರ್ ಸಮಸ್ಯೆ, ಕುತ್ತಿಗೆಯಿಂದ ಬೆನ್ನಿನ ಎಲುಬು ಅತಿಯಾದ ನೋವು, ಗುದದ್ವಾರದಲ್ಲಿ ಬಿರುಕು ಕಾಯಿಲೆ, ಗ್ಯಾಸ್ಟ್ರಿಕ್ ಸಮಸ್ಯೆ, ಐರನ್ ಮತ್ತು ವಿಟಮಿನ್ ಕೊರತೆ, ಉರಿಯೂತ, ಸಣ್ಣ ಪ್ರಮಾಣದ ಖಿನ್ನತೆ, ಭುಜದ ಹಳೆ ಮೂಳೆ ಮುರಿತದ ನೋವು, ಕುತ್ತಿಗೆ ನೋವು, ವೈರಲ್ ಜ್ವರ ಸೇರಿ ಒಟ್ಟು 14 ಕಾಯಿಲೆಗಳು ಇರುವುದಾಗಿ ತಿಳಿಸಿದ್ದಾನೆ.

ಹದಿನಾಲ್ಕು ಆರೊಗ್ಯ ಸಮಸ್ಯೆಗಳ ಪಟ್ಟಿ ಸಮೇತ ಜಾಮೀನು ಅರ್ಜಿ ಸಲ್ಲಿಸಿರುವ ಯುವರಾಜ್, ಈ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು 90 ದಿನ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದಾನೆ. ಹೊರಗಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಿ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಮುಂದಿನ ಬೆಳವಣಿಗೆ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ

Yuvraj Singh: ಟೀಮ್ ಇಂಡಿಯಾ ಬಗ್ಗೆ ಆಕ್ರೋಶ ಹೊರಹಾಕಿದ ಯುವರಾಜ್ ಸಿಂಗ್

ವಂಚಕ ಯುವರಾಜ್ ವಿರುದ್ಧ ಚಾರ್ಜ್‌ಶೀಟ್; ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಲೆಟರ್​​ಹೆಡ್​​ನಲ್ಲಿ ಬರೆದಿದ್ದ ಪತ್ರ ಸಿಸಿಬಿ ವಶಕ್ಕೆ

(Yuvaraj Swamy has filed a bail on his ill health)

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!