Zomato: ಗಿಗ್ಸ್​ ರದ್ದು ಪಡಿಸಲು ಆಗ್ರಹಿಸಿ ಬೆಂಗಳೂರಿನಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ಸ್​ ಪ್ರತಿಭಟನೆ

| Updated By: ಸುಷ್ಮಾ ಚಕ್ರೆ

Updated on: Apr 16, 2022 | 7:53 PM

ಪ್ರಮುಖ ಫುಡ್ ಡೆಲಿವರಿ ಕಂಪನಿಗಳಲ್ಲಿ ಒಂದಾಗಿರುವ ಜೊಮ್ಯಾಟೋ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೊಮೊಟೊ ಫುಡ್ ಡೆಲಿವರಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

Zomato: ಗಿಗ್ಸ್​ ರದ್ದು ಪಡಿಸಲು ಆಗ್ರಹಿಸಿ ಬೆಂಗಳೂರಿನಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ಸ್​ ಪ್ರತಿಭಟನೆ
ಜೊಮ್ಯಾಟೋ ಡೆಲಿವರಿ
Follow us on

ಬೆಂಗಳೂರು: ಹಸಿವಾದಾಗ ನಮಗೆ ಥಟ್ ಅಂತ ನೆನಪಾಗೋದು ಸ್ವಿಗ್ಗಿ ಅಥವಾ ಜೊಮ್ಯಾಟೊ (Zomato). ಇದರಲ್ಲಿ ಆರ್ಡರ್ ಮಾಡಿದರೆ ಯಾವುದೇ ಸಮಸ್ಯೆ ಇಲ್ಲದೆ ಊಟ ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತಾರೆ. ಆದರೆ, ಈಗ ಜೊಮ್ಯಾಟೊ ಡೆಲಿವರಿ ಬಾಯ್ಸ್ ಗೆ ಗಿಗ್ ಸಮಸ್ಯೆ ಆಗ್ಬಿಟ್ಟಿದೆ. ಹೀಗಾಗಿ, ದಯವಿಟ್ಟು ನಮ್ಮ ಸಮಸ್ಯೆಗೆ ಪರಿಹಾರ ಮಾಡಿಕೊಡಿ ಎಂದು ಬೆಂಗಳೂರಿನಲ್ಲಿ ಹಲವು ಭಾಗಗಳಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಗಿಗ್ ನಿಂದ (Gigs) ಇವರಿಗೆ ತೊಂದರೆ ಆಗ್ತಿರೋದು ಯಾಕೆ? ಎಂಬ ಮಾಹಿತಿ ಇಲ್ಲಿದೆ.

ಪ್ರಮುಖ ಫುಡ್ ಡೆಲಿವರಿ ಕಂಪನಿಗಳಲ್ಲಿ ಒಂದಾಗಿರುವ ಜೊಮ್ಯಾಟೋ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೊಮೊಟೊ ಫುಡ್ ಡೆಲಿವರಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಿಕಪ್ ಚಾರ್ಜ್ ಹೆಚ್ಚಳ ಮಾಡಬೇಕು, ರೆಸ್ಟೋರೆಂಟ್ ವೇಟಿಂಗ್‌ ಚಾರ್ಜ್ ಕೊಡಬೇಕು, ಹೆಲ್ತ್ ಇನ್ಸ್ಯುರೇನಸ್ ಕಾರ್ಡ್ ಕೊಡಬೇಕು ಹಾಗೂ ಗಿಗ್ಸ್ ಕೂಡಲೇ ತೆಗೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹೊಸದಾಗಿ ಬಂದಿರುವ ಗಿಗ್ಸ್ ನಿಂದಾಗಿ ಡೆಲಿವರಿ ಬಾಯ್ಸ್ ಗೆ ತೊಂದರೆ ಆಗುತ್ತಿದೆ ಎಂದು ಬೆಂಗಳೂರಿನ ಹಲವು ಭಾಗಗಳಲ್ಲಿ ಒಟ್ಟು ಎಂಟು ಕಡೆ ಪ್ರತಿಭಟನೆ ನಡೆಸಿದ್ದಾರೆ. ನಮಗೆ ಹಸಿವಾದಾಗ ನಮ್ಮ ಬಾಗಿಲಿಗೆ ಆಹಾರವನ್ನು ನೀಡಿದ ಫುಡ್ ಡೆಲಿವರಿ ಬಾಯ್ಸ್ ನಿನ್ನೆಯಿಂದ ಬೆಂಗಳೂರಿನಲ್ಲಿ ಸತತ ಮೂರು ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಸಾವಿರಾರು ಜೊಮಾಟೊ ಫುಡ್ ಡೆಲಿವರಿ ಬಾಯ್ಸ್ ಕಳೆದ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ನಾರ್ಮಲ್ ಆಗಿ ಕೆಲಸ ಮಾಡಿಕೊಂಡು ಹೋಗ್ತಿದ್ದ ಫುಡ್ ಡೆಲಿವರಿ ಬಾಯ್ಸ್ ಗೆ ಕಳೆದ ಒಂದು ತಿಂಗಳ ಹಿಂದೆ ಜೊಮೊಟೊನವರು ಗಿಗ್ ಅನ್ನು ಪರಿಚಯ ಮಾಡಿದ್ದಾರೆ. ಗಿಗ್ ನಲ್ಲಿ ಕೆಲಸ ಮಾಡಿದರೆ ಫುಡ್ ಡೆಲಿವರಿ ಬಾಯ್ಸ್ ಗೆ ವರ್ಕ್ ಔಟ್ ಆಗುವುದಿಲ್ಲ ಎಂದು ಗಿಗ್ ತೆಗೆಯಲು ಆಯಾ ಕಿಚನ್ ಸೆಂಟರ್ ಗಳ ಮುಂದೆ ಜೊಮೊಟೊ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು

ಅಷ್ಟಕ್ಕೂ ಜೊಮ್ಯಾಟೊ ನಲ್ಲಿ ಕೆಲಸ ಮಾಡುವ ಫುಡ್ ಡೆಲಿವರಿ ಬಾಯ್ಸ್ ಗಿಗ್​ಗಿಂತ ಮುಂದೆ ರೇಟ್ ಕಾರ್ಡ್ ಸಿಸ್ಟಮ್ ನಿಂದ ಕೆಲಸ ಮಾಡ್ತಿದ್ರೂ ರೇಟ್ ಕಾರ್ಡ್ ನಲ್ಲಿ ಫುಡ್ ಆರ್ಡರ್. ಫುಡ್ ಪಿಕ್ ಅಪ್, ವೇಟಿಂಗ್‌ ಗೆ ಕಿಲೋಮೀಟರ್ ಗೆ ಐದು ರೂಪಾಯಿ ಅಷ್ಟು ಜೊಮ್ಯಾಟೊ ಕಂಪನಿ ನೀಡ್ತಿದ್ರೂ ಇನ್ನೂ ನೀವು ದಿನದ ಲೆಕ್ಕದಲ್ಲಿ ಅಥವಾ ವಾರದ ಲೆಕ್ಕದಲ್ಲಿ ಕೆಲಸ ಮಾಡಬಹುದು. ಅಂದರೆ ಉದಾಹರಣೆಗೆ ಒಂದು ದಿನಕ್ಕೆ ಇಪ್ಪತ್ತೈದು ಆರ್ಡರ್ ಗಳನ್ನು ಮಾಡಿದರೆ ಸುಮಾರು ಎರಡು ಸಾವಿರದತನಕ ಜೊಮ್ಯಾಟೊ ನವರು ಹಣ ನೀಡುತ್ತಾರೆ. ಹಾಗೇ, ಪ್ರತಿವಾರ 185 ಆರ್ಡರ್ ಮಾಡಿದರೆ 14 ಸಾವಿರದತನಕ ಫುಡ್ ಡೆಲಿವರಿ ಬಾಯ್ಸ್ ದುಡಿಯಬಹುದು. ಅದೂ ಅಲ್ಲದೆ ರಾತ್ರಿ 12 ಗಂಟೆಯ ಮೇಲೆ ಕೆಲಸ ಮಾಡಿದರೆ ಒಂದು ಆರ್ಡರ್ ಗೆ ಸುಮಾರು 30 ರೂ.ಗಳನ್ನು ನೀಡುತ್ತಾರೆ‌.

ಆದರೆ, ಜೊಮ್ಯಾಟೊ ಹೊಸದಾಗಿ ಪರಿಚಯ ಮಾಡಿದ ಗಿಗ್ ನಲ್ಲಿ ಇದು ಯಾವುದು ಇರುವುದಿಲ್ಲ. ಕೇವಲ ಫುಡ್ ಪಿಕ್ ಅಪ್ ನಿಂದ ಡೆಲಿವರಿಗೆ ಅಷ್ಟೇ ಹಣವನ್ನು ನೀಡಲಾಗುತ್ತದೆ. ಅಂದರೆ ಫುಡ್ ಪಿಕ್ ಅಪ್ ಹೋಗುವ ಕಿಲೋಮೀಟರ್ ಗೆ ಹಣ ಬರುವುದಿಲ್ಲ. ಹಾಗೇ ರಾತ್ರಿ 12 ಗಂಟೆಯ ಬಳಿಕ ಹೆಚ್ಚುವರಿ ಹಣ ಬರುವುದಿಲ್ಲ. ವಾರದ ಲೆಕ್ಕಾಚಾರದ ಬದಲಿಗೆ ನೀವು ಒಂದು ದಿನದ ಮುಂಚಿತವಾಗಿಯೇ ಆಪ್ ನಲ್ಲಿ ಸ್ಲಾಟ್ ಅನ್ನು ಗಿಗ್ ಮೂಲಕ ಬುಕ್ ಮಾಡಬೇಕು. ಒಂದು ವೇಳೆ ಸ್ಲಾಟ್ ಅನ್ನು ಬುಕ್ ಮಾಡಿ ಕ್ಯಾನ್ಸೆಲ್ ಮಾಡಿದರೆ ಹಣ ಕಟ್ ಆಗುತ್ತದೆ. ಹೀಗಾಗಿ ಗಿಗ್ ಇದ್ದರೆ ನಾವು ಕೆಲಸ ಮಾಡಲ್ಲ ಎಂದು ಸಾವಿರಾರು ಫುಡ್ ಡೆಲಿವರಿ ಬಾಯ್ಸ್ ನಗರದ HSR ಲೇಔಟ್, ಜಾಲಹಳ್ಳಿ, ಜಯನಗರ, ಕೋರಮಂಗಲ, ಇನ್ನೂ ಹಲವು ಭಾಗದ ಹಬ್ ಗಳಲ್ಲಿ ಪ್ರತಿಭಟನೆ ಮಾಡುವ ಮೂಲಕ ಜೊಮ್ಯಾಟೋ ಕಂಪನಿಯ ವಿರುದ್ಧ ಆರೋಪ ಮಾಡ್ತಿದ್ದಾರೆ.

ಪ್ರತಿಭಟನೆ ಮಾಡ್ತಿರುವ ಡೆಲಿವರಿ ಬಾಯ್ಸ್​ಗೆ ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್ನರ್ಸ್ ಯೂನಿಯನ್ (UFDPU) ಬೆಂಬಲ ನೀಡಿದ್ದಾರೆ. ಇವರನ್ನು ಕಾರ್ಮಿಕರಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಷ್ಟೆಲ್ಲ ಪ್ರತಿಭಟನೆ ಮಾಡಿದರೂ ಇದುವರೆಗೂ ಜೊಮ್ಯಾಟೊ ಕಂಪನಿಯವರು ಪ್ರತಿಭಟನೆ ಮಾಡುತ್ತಿರುವ ಡೆಲಿವರಿ ಬಾಯ್ಸ್​ಗೆ ಕರೆ ಮಾಡಿಲ್ಲ. ಬದಲಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಒಳ್ಳೆಯದಲ್ಲ. ಡೆಲಿವರಿ ಬಾಯ್ಸ್ ಗೆ ಹೆಲ್ತ್ ಇನ್ಶುರೆನ್ಸ್ ಕೂಡ ಇಲ್ಲ. ಕೆಲಸದಲ್ಲಿ ಏನಾದರೂ ಆದರೆ ಏನು ಗತಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫುಡ್ ಡೆಲಿವರಿ ಬಾಯ್ಸ್ ಇದ್ದು ನಗರದಲ್ಲಿ 32 ಹಬ್ ಗಳ ಪೈಕಿ ಎಂಟು ಕಡೆ ಮುಷ್ಕರ ನಡೆಸುತ್ತಿದ್ದಾರೆ. ಇನ್ನು, ನಾಳೆ ಕೂಡ ಪ್ರತಿಭಟನೆ ಆಯಾ ಹಬ್ ಮುಂದೆ ಪ್ರತಿಭಟನೆ ಮುಂದುವರಿಯುತ್ತದೆ. ಡೆಲಿವರಿ ಬಾಯ್ಸ್ ಪ್ರತಿಭಟನೆಗೆ ಜೊಮ್ಯಾಟೊ ಕಂಪನಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದು ಕಾದು ನೋಡಬೇಕು.

(ವರದಿ: ಬಾಲಾಜಿ, ಟಿವಿ9 ಬೆಂಗಳೂರು)

ಇದನ್ನೂ ಓದಿ: ಜೊಮ್ಯಾಟೊದ 1.5 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಕೊವಿಡ್​ ಲಸಿಕೆ ಉಚಿತ; ಸಿಇಒ ದೀಪಿಂದರ್​ ಗೋಯಲ್ ಘೋಷಣೆ

ಜೊಮ್ಯಾಟೊ ಫುಡ್​ ಡೆಲಿವರಿ ಬಾಯ್ ಕಾಮರಾಜು​ ಪರ ನಿಂತ ಬಾಲಿವುಡ್​ನ ಖ್ಯಾತ​ ನಟಿ; ಆರೋಪ ಮಾಡಿದ ಮಹಿಳೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ

Published On - 7:53 pm, Sat, 16 April 22