BESCOM: ಬೆಂಗಳೂರಿಗರೇ ಗಮನಿಸಿ; ಕೋರಮಂಗಲ, ಜಯನಗರ, ರಾಜಾಜಿನಗರ ಸೇರಿ ಹಲವೆಡೆ ಇಂದು ಪವರ್ ಕಟ್

| Updated By: Skanda

Updated on: Sep 05, 2021 | 7:06 AM

Bengaluru Power Cut: ಇಂದು ರಾಜಾಜಿನಗರ, ಆರ್​ಆರ್​ ನಗರ, ಕೆಂಗೇರಿ, ಕೋರಮಂಗಲ, ಜಯನಗರ, ಪೀಣ್ಯ, ಹೆಬ್ಬಾಳ, ಜಾಲಹಳ್ಳಿ, ಮಲ್ಲೇಶ್ವರಂ, ಇಂದಿರಾನಗರ, ಶಿವಾಜಿನಗರ, ನೆಲಮಂಗಲ, ಹೊಸಕೋಟೆ ಭಾಗಗಳಲ್ಲಿ ಪವರ್ ಕಟ್ ಇರಲಿದೆ.

BESCOM: ಬೆಂಗಳೂರಿಗರೇ ಗಮನಿಸಿ; ಕೋರಮಂಗಲ, ಜಯನಗರ, ರಾಜಾಜಿನಗರ ಸೇರಿ ಹಲವೆಡೆ ಇಂದು ಪವರ್ ಕಟ್
ಬೆಸ್ಕಾಂ
Follow us on

Bangalore Power Cut: ಬೆಂಗಳೂರು: ಬೆಂಗಳೂರಿನ ದಕ್ಷಿಣ ಮತ್ತು ಪಶ್ಚಿಮ ಭಾಗಗಳ ಬಹುತೇಕ ಏರಿಯಾಗಳಲ್ಲಿ ಇಂದಿನಿಂದ ಸೆ. 13ರವರೆಗೂ (Power Cut) ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ (Bangalore) ಅನೇಕ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ. ಬೆಸ್ಕಾಂನಿಂದ ನೆಲದ ಅಡಿಯಲ್ಲಿ ಕೇಬಲ್ ಎಳೆಯುವ ಕೆಲಸವಾಗುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇಂದು ರಾಜಾಜಿನಗರ, ಆರ್​ಆರ್​ ನಗರ, ಕೆಂಗೇರಿ, ಕೋರಮಂಗಲ, ಜಯನಗರ, ಪೀಣ್ಯ, ಹೆಬ್ಬಾಳ, ಜಾಲಹಳ್ಳಿ, ಮಲ್ಲೇಶ್ವರಂ, ಇಂದಿರಾನಗರ, ಶಿವಾಜಿನಗರ, ನೆಲಮಂಗಲ, ಹೊಸಕೋಟೆ ಭಾಗಗಳಲ್ಲಿ ಸಂಜೆ 6 ಗಂಟೆಯವರೆಗೂ ಪವರ್ ಕಟ್ ಇರಲಿದೆ. ವಿದ್ಯುತ್ ಅಡಚಣೆಗೆ ಸಹಕರಿಸಬೇಕಂದು ಬೆಸ್ಕಾಂ ಮನವಿ ಮಾಡಿದೆ.

ನಾಳೆಯಿಂದ ಬೆಂಗಳೂರಿನ ಬಾಪೂಜಿ ನಗರ, ಪಂತರಪಾಳ್ಯ, ಇಂಡಸ್ಟ್ರಿಯಲ್ ಟವರ್, ನೈಸ್ ರಸ್ತೆ, ಸಿದ್ಧಿವಿನಾಯಕ ಲೇಔಟ್, ಐಟಿಐ ಲೇಔಟ್, ಕಾಮಾಕ್ಷಿಪಾಳ್ಯ ಕೈಗಾರಿಕಾ ಪ್ರದೇಶ, ಕೆ.ಎಸ್​.ಜಿ. ಎಸ್ಟೇಟ್, ಪೇಟೆ ಚನ್ನಪ್ಪ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ. 13ರವರೆಗೂ ವಿದ್ಯುತ್ ಸಂಪರ್ಕ ವ್ಯತ್ಯಯವಾಗಲಿದೆ.

ಹಾಗೇ, ಬ್ಯಾಡರಹಳ್ಳಿ, ಅಂಜನಾ ನಗರ, ಬಿಇಎಲ್ ಲೇಔಟ್, ಗಿಡ್ಡದಕೋನೇನಹಳ್ಳಿ, ಮುದ್ದಿನ ಪಾಳ್ಯ, ಬಿಡಿಎ 8 ಹಾಗೂ 9ನೇ ಹಂತ, ರೈಲ್ವೆ ಬಡಾವಣೆ, ಉಪಕಾರ್ ಲೇಔಟ್, ಭವಾನಿ ಲೇಔಟ್, ಬಾಲಾಜಿ ಲೇಔಟ್, ಗೊಲ್ಲರಹಟ್ಟಿ, ರತ್ನ ನಗರ, ಮಾಡರ್ನ್ ಲೇಔಟ್, ಬಿಎಂಟಿಸಿ ಡಿಪೊ, ಕೆಬ್ಬೆಹಳ್ಳ, ಮಹದೇಶ್ವರ ನಗರ, ಮುನೇಶ್ವರ ನಗರ, ಚನ್ನಪ್ಪ ಬಡಾವಣೆ, ಶ್ರೀನಿವಾಸ ನಗರ, ಹೆಗ್ಗನಹಳ್ಳಿ ಮುಖ್ಯರಸ್ತೆ, ವಸಂತ ವಲ್ಲಭ ನಗರ, ಶಾರದಾ ನಗರ, ಮಾರುತಿ ಬಡಾವಣೆ, ಇಸ್ರೊ ಲೇಔಟ್, ಕುಮಾರಸ್ವಾಮಿ ಲೇಔಟ್, ಟೀಚರ್ಸ್‌ ಕಾಲೋನಿ, ಜರಗನಹಳ್ಳಿ, ಎಂ.ಎಸ್. ಲೇಔಟ್, ಜಿ.ಕೆ.ಎಂ. ಕಾಲೇಜು ರಸ್ತೆ, ಚಿಕ್ಕಸ್ವಾಮಿ ಲೇಔಟ್, ರಾಜಮ್ಮ ಗಾರ್ಡನ್, ಗೋವಿಂದ ರೆಡ್ಡಿ, ರಾಜೀವ್‌ ಗಾಂಧಿ ರಸ್ತೆ, ಪದ್ಮನಾಭ ನಗರ, ಬನಗಿರಿ ನಗರ ಉದ್ಯಾನ ರಸ್ತೆ, ಪ್ರಾರ್ಥನಾ ಶಾಲೆ, ಬನಶಂಕರಿ ಎರಡನೇ ಹಂತ, ಜೆ.ಪಿ. ನಗರ ಎರಡನೇ ಹಂತ, ಡಾಲರ್ಸ್‌ ಬಡಾವಣೆ, ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ, ಕತ್ರಿಗುಪ್ಪೆ, ಬನಶಂಕರಿ 3ನೇ ಹಂತದಲ್ಲಿ ಕೂಡ ಪವರ್ ಕಟ್ ಇರಲಿದೆ.

ಜೊತೆಗೆ, ಲಾಲ್‌ಬಾಗ್‌ ರಸ್ತೆ, ಬಚ್ಚೇಗೌಡ ಕಾಂಪೌಂಡ್, ನಂದಿನಿ ಅಪಾರ್ಟ್‌ಮೆಂಟ್, ಲಕ್ಷ್ಮಿ ರಸ್ತೆ, ಕುಮಾರಸ್ವಾಮಿ ಬಡಾವಣೆ, ಪೈಪ್‌ಲೈನ್ ರಸ್ತೆ, ಸಮೃದ್ಧಿ ಬಡಾವಣೆ, ವಿಠ್ಠಲ ನಗರ, ಕಾರ್ಮೆಲ್‌ ಶಾಲೆ ಏರಿಯಾ, ಭವಾನಿ ನಗರ, ತ್ಯಾಗರಾಜ ನಗರ, ಬಿಬಿಎಂಪಿ ಈಜುಕೊಳ, ಜೆ.ಸಿ. ರಸ್ತೆ, ಪ್ರತಿಮಾ ಕೈಗಾರಿಕಾ ಬಡಾವಣೆ, ಕುವೆಂಪು ನಗರ, ರಾಜೀವ್‌ ಗಾಂಧಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ. 13ರವರೆಗೆ ಪವರ್ ಕಟ್ ಇರಲಿದೆ.

ಇದನ್ನೂ ಓದಿ: ಬೆಂಗಳೂರಿನ ಜನ ಎಷ್ಟು ಭಾಷೆ ಮಾತಾಡುತ್ತಾರೆ ಗೊತ್ತಾ?; ಭಾರತದಲ್ಲೇ ಅತಿ ಹೆಚ್ಚು ಭಾಷಿಗರಿರುವ ನಗರ ಬೆಂಗಳೂರು

ವಿದ್ಯುತ್ ಬಿಲ್​ನಲ್ಲಿ ತಿದ್ದುಪಡಿ ಮಾಡಿ ಅಕ್ರಮ; ಮೂವರು ಬೆಸ್ಕಾಂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಸುನಿಲ್ ಕುಮಾರ್ ಆದೇಶ

(BESCOM announces Power Cut in Bengaluru Jayanagara, Koramangala, RR Nagar, Rajajinagar and other Areas on Sunday)