‘ವಿಷ್ಣು ಪ್ರಿಯ’ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕೆನ್ನೆ ತಟ್ಟಿ ಮಾತಾಡಿದ ಭಾರತಿ ವಿಷ್ಣವರ್ಧನ್
ಟಿವಿ9 ಸಿನಿಮಾ ವರದಿಗಾರರು ನೀಡಿರುವ ಮಾಹಿತಿ ಪ್ರಕಾರ ವಿಷ್ಣು ಪ್ರಿಯ ಸಿನಿಮಾ ಫೆಬ್ರುವರಿ 21 ರಂದು ಬೆಳ್ಳಿತೆರೆಯನ್ನು ಅಪ್ಪಳಿಸಲಿದೆ. ಯುವ ಜೋಡಿ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾ ಅಪ್ಪಟ ಲವ್ ಸ್ಟೋರಿ ಅಂತೆ. ಅಂದಹಾಗೆ ಪ್ರಿಯಾ ವಾರಿಯರ್ ಯಾರು ಅಂತ ಗೊತ್ತಾಯ್ತು ತಾನೇ? ಒರು ಅಡಾರ್ ಲವ್ ಚಿತ್ರದಲ್ಲಿ ಮಿಟಿ ಮಿಟಿ ಕಣ್ಣು ಮಿಟುಕಿಸಿದ ತುಂಟ ಸುಂದರಿ !
ಬೆಂಗಳೂರು: ಚಿತ್ರನಟ ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ ನಂತರ ಬಿಡುವಾಗಿದ್ದಾರೆ. ಇವತ್ತು ಅವರು ‘ವಿಷ್ಣು ಪ್ರಿಯ’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಲ್ಲದೆ ಲವಲವಿಕೆಯಿಂದ ಓಡಾಡಿದರು. ಸುದೀಪ್ ಅವರಿಗೆ ಈಗ ನಮ್ಮ ಮಧ್ಯೆದಲ್ಲಿರದ ವಿಷ್ಣವರ್ಧನ್ ಮತ್ತು ಅಂಬರೀಶ್ ಅವರ ಮೇಲೆ ಅದೆಷ್ಟು ಅಭಿಮಾನ ಪ್ರೀತಿ ಇತ್ತು ಅಂತ ಕನ್ನಡಿಗರಿಗೆಲ್ಲ ಗೊತ್ತಿದೆ. ಇವತ್ತಿನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದ ಭಾರತಿ ವಿಷ್ಣವರ್ಧನ್ ಅವರು ಪ್ರೀತಿಯಿಂದ ಸುದೀಪ್ ಕೆನ್ನೆ ತಟ್ಟಿ ಮಾತಾಡಿದರು. ನಂತರ ಸುದೀಪ್ ಖ್ಯಾತ ನಿರ್ದೇಶಕರಾದ ಎಸ್ ನಾರಾಯಣ, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಇಂದ್ರಜಿತ್ ಲಂಕೇಶ್ ಅವರಿಗೆ ವಿಶ್ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಣ್ಸನ್ನೆ ಹುಡುಗಿ ನಟನೆಯ ಕನ್ನಡ ಸಿನಿಮಾ ‘ವಿಷ್ಣು ಪ್ರಿಯಾ’ ಫೆಬ್ರವರಿ 21ಕ್ಕೆ ರಿಲೀಸ್