ಆ ಗ್ರಾಮದ ಜನರ ಒಂದು ಐಡಿಯಾದಿಂದ ಅಲ್ಲಿ ಜಲಕ್ರಾಂತಿಯಾಗಿದೆ!

ಬೀದರ್: ಈ ಗ್ರಾಮದ ಜನರು ಕೊಟ್ಟ ಒಂದೇ ಒಂದು ಐಡಿಯಾದಿಂದ ಈಗ ಅಲ್ಲಿ ಜಲಕ್ರಾಂತಿಯಾಗಿದೆ. ಒಂದು ಚಿಕ್ಕ ಬ್ಯಾರೇಜ್ ನೀರು ಹತ್ತಾರು ಹಳ್ಳಿಗಳಿಗೆ ನೀರು ಕೊಡುತ್ತಿದೆ. ಮೆಳೆಯಿಲ್ಲದೆ ಭೂಮಿಯಲ್ಲಿ ಬೆಳೆ ಬೆಳೆಯಲಾಗದ ಸ್ಥಿತಿಯಲ್ಲಿದ್ದ ರೈತರು ಭರಪೂರ ನೀರು ಕಂಡು ಸಂತಸ ಪಡುವಂತಾಗಿದೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಸಾಯೆಗಾಂವ್ ಗ್ರಾಮದ ಜನ ಕೊಟ್ಟ ಒಂದು ಐಡಿಯಾ ಗ್ರಾಮಕ್ಕೆ ಗ್ರಾಮವೇ ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ. ನೀರಿನಿಂದ ತುಂಬಿ ತುಳುಕುವಂತೆ ಮಾಡಿದೆ. ಆ ಗ್ರಾಮದಲ್ಲಿ ಚಿಕ್ಕ […]

ಆ ಗ್ರಾಮದ ಜನರ ಒಂದು ಐಡಿಯಾದಿಂದ ಅಲ್ಲಿ ಜಲಕ್ರಾಂತಿಯಾಗಿದೆ!
ಸಾಧು ಶ್ರೀನಾಥ್​

Updated on: Nov 20, 2019 | 9:00 AM

ಬೀದರ್: ಈ ಗ್ರಾಮದ ಜನರು ಕೊಟ್ಟ ಒಂದೇ ಒಂದು ಐಡಿಯಾದಿಂದ ಈಗ ಅಲ್ಲಿ ಜಲಕ್ರಾಂತಿಯಾಗಿದೆ. ಒಂದು ಚಿಕ್ಕ ಬ್ಯಾರೇಜ್ ನೀರು ಹತ್ತಾರು ಹಳ್ಳಿಗಳಿಗೆ ನೀರು ಕೊಡುತ್ತಿದೆ. ಮೆಳೆಯಿಲ್ಲದೆ ಭೂಮಿಯಲ್ಲಿ ಬೆಳೆ ಬೆಳೆಯಲಾಗದ ಸ್ಥಿತಿಯಲ್ಲಿದ್ದ ರೈತರು ಭರಪೂರ ನೀರು ಕಂಡು ಸಂತಸ ಪಡುವಂತಾಗಿದೆ.

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಸಾಯೆಗಾಂವ್ ಗ್ರಾಮದ ಜನ ಕೊಟ್ಟ ಒಂದು ಐಡಿಯಾ ಗ್ರಾಮಕ್ಕೆ ಗ್ರಾಮವೇ ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ. ನೀರಿನಿಂದ ತುಂಬಿ ತುಳುಕುವಂತೆ ಮಾಡಿದೆ. ಆ ಗ್ರಾಮದಲ್ಲಿ ಚಿಕ್ಕ ಸೇತುವೆ ಇತ್ತು. ಪ್ರತಿ ಮಳೆಗಾಲದಲ್ಲಿ ಈ ಸೇತುವೆಗೆ ನೀರು ಜಾಸ್ತಿ ಬಂದೂ ಸೇತುವೆ ಮುಳಗಡೆಯಾಗುತ್ತಿತ್ತು.

ಹೀಗಾಗಿ, ಈ ಗ್ರಾಮದ ಜನರ ಮನವಿ ಮೇರೆಗೆ ಸರ್ಕಾರ ಈ ಗ್ರಾಮಕ್ಕೆ ದೊಡ್ಡದಾದ ಒಂದು ಸೇತುವೆ ನಿರ್ಮಾಣ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಅದರಂತೆ ಕೆಲಸವೂ ಆರಂಭವಾಯಿತು. ಆದ್ರೆ, ಇದ್ದ ಸೇತುವೆಯನ್ನ ನೆಲಸಮ ಮಾಡಲು ಒಂದು ಕೋಟಿ ರೂ ಅನುದಾನ ಮೀಸಲಿಟ್ಟು, ಸೇತುವೆ ನೆಲಸಮ ಮಾಡುವ ಕಾರ್ಯ ಆರಂಭವಾಯ್ತು.

ಆದ್ರೆ, ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ಕೊಡಲಿಲ್ಲ . ಬ್ರಿಟಿಷರ ಕಾಲದ ಹಳೇ ಸೇತುವೆ ನೆಲ ಸಮಮಾಡುವ ಖರ್ಚಿನಲ್ಲೇ ಇದರ ಪಕ್ಕದಲ್ಲೇ ಹೊಸ ಸೇತುವೆ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ರು. ಇದ್ರಿಂದ ಇಲ್ಲಿ ಗೇಟ್ ಅಳವಡಿಸಲಾಗಿದ್ದು, ಬ್ಯಾರೇಜ್‌ನಲ್ಲಿ ಭರಪೂರ ನೀರು ನಿಲ್ಲವಂತಾಗಿದೆ.

ಗ್ರಾಮಸ್ಥರ ಈ ಐಡಿಯಾ ತಕ್ಷಣ ಒಪ್ಪಿಕೊಂಡು ಇಲ್ಲಿನ ಅಧಿಕಾರಿಗಳು ಹಳೇ ಸೇತುವೆಗೆ 25 ಗೇಟ್ ಗಳನ್ನ ಅಳವಡಿಸಿದ್ದಾರೆ. ಹೀಗಾಗಿ, ಬ್ಯಾರೇಜ್ ನಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ಗಟ್ಟಲೇ ನೀರು ನಿಂತಿದ್ದು, ಗ್ರಾಮಸ್ಥರಿಗೆ ರೈತರಿಗೆ ಪ್ರಾಣಿ ಪಕ್ಷಿಗಳಿ ನೀರಿನ ಸಮಸ್ಯೆ ಇಲ್ಲದಂತಾಗಿದೆ.

Published On - 7:29 am, Wed, 20 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us