AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾವಿಯಲ್ಲಿ ಅಪರಿಚಿತ ಹೆಣ ಪತ್ತೆ, ಗ್ರಾಮದಲ್ಲಿ ಹೆಚ್ಚಾಗಿದೆ ಆತಂಕ

ಗದಗ: ಬಾವಿಯಲ್ಲಿ ಅಪರಿಚಿತ ಹೆಣವೊಂದು ತೇಲುತ್ತಿದ್ದಂತಹ ಭಯಾನಕ ದೃಶ್ಯ ಗದಗ ತಾಲೂಕು ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ಜಮೀನಿನ ಬಳಿ ಕಂಡುಬಂದಿದೆ. ಇಲ್ಲಿ ಇದ್ದಕ್ಕಿದ್ದಂತೆ ಅಪರಿಚಿತ ಹೆಣವನ್ನ ಕಂಡ ಜನ ಬೆಚ್ಚಬಿದ್ದಿದ್ದಾರೆ. ಸಾಕಷ್ಟು ಅನುಮಾನ ಮೂಡಿಸಿದೆ ಅಪರಿಚಿತ ವ್ಯಕ್ತಿ ಶವ: ದತ್ತಾತ್ರೇಯ ಜೋಶಿ ಅನ್ನೋರಿಗೆ ಸೇರಿದ ಜಮೀನಿನಲ್ಲಿ ಬಾವಿಯೊಂದಿದೆ. ಬಾವಿಯಲ್ಲಿ ಇದ್ದಕ್ಕಿದ್ದಂತೆ ಶವ ಪತ್ತೆಯಾಗಿದೆ. ಸುಮಾರು 35 ವರ್ಷ ಆಸುಪಾಸಿನ ವ್ಯಕ್ತಿಯ ದೇಹ ಇದಾಗಿದ್ದು, ಯಾರೂ ಅನ್ನೋದು ಗೊತ್ತಾಗುತ್ತಿಲ್ಲ. ಇನ್ನು ವ್ಯಕ್ತಿ ಇಲ್ಲಿ ಸ್ನಾನ ಮಾಡಲು ಬಂದು ಜಾರಿದ್ದಾನೆ […]

ಬಾವಿಯಲ್ಲಿ ಅಪರಿಚಿತ ಹೆಣ ಪತ್ತೆ, ಗ್ರಾಮದಲ್ಲಿ ಹೆಚ್ಚಾಗಿದೆ ಆತಂಕ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 20, 2019 | 11:49 AM

Share

ಗದಗ: ಬಾವಿಯಲ್ಲಿ ಅಪರಿಚಿತ ಹೆಣವೊಂದು ತೇಲುತ್ತಿದ್ದಂತಹ ಭಯಾನಕ ದೃಶ್ಯ ಗದಗ ತಾಲೂಕು ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ಜಮೀನಿನ ಬಳಿ ಕಂಡುಬಂದಿದೆ. ಇಲ್ಲಿ ಇದ್ದಕ್ಕಿದ್ದಂತೆ ಅಪರಿಚಿತ ಹೆಣವನ್ನ ಕಂಡ ಜನ ಬೆಚ್ಚಬಿದ್ದಿದ್ದಾರೆ.

ಸಾಕಷ್ಟು ಅನುಮಾನ ಮೂಡಿಸಿದೆ ಅಪರಿಚಿತ ವ್ಯಕ್ತಿ ಶವ: ದತ್ತಾತ್ರೇಯ ಜೋಶಿ ಅನ್ನೋರಿಗೆ ಸೇರಿದ ಜಮೀನಿನಲ್ಲಿ ಬಾವಿಯೊಂದಿದೆ. ಬಾವಿಯಲ್ಲಿ ಇದ್ದಕ್ಕಿದ್ದಂತೆ ಶವ ಪತ್ತೆಯಾಗಿದೆ. ಸುಮಾರು 35 ವರ್ಷ ಆಸುಪಾಸಿನ ವ್ಯಕ್ತಿಯ ದೇಹ ಇದಾಗಿದ್ದು, ಯಾರೂ ಅನ್ನೋದು ಗೊತ್ತಾಗುತ್ತಿಲ್ಲ. ಇನ್ನು ವ್ಯಕ್ತಿ ಇಲ್ಲಿ ಸ್ನಾನ ಮಾಡಲು ಬಂದು ಜಾರಿದ್ದಾನೆ ಅನ್ನಲು ಯಾವುದೇ ಕುರುಹು ಸಿಗ್ತಿಲ್ಲ.

ಎಲ್ಲಕ್ಕಿಂತಲೂ ಮುಖ್ಯವಾಗಿ ಮೈಮೇಲೆ ಬಟ್ಟೆಯೇ ಇಲ್ಲ, ಆಕಸ್ಮಾತ್ ಬಟ್ಟೆ ತೆಗೆದು ಇಟ್ಟಿದ್ದರೆ ಬಾವಿ ಅಕ್ಕಪಕ್ಕ ಕಾಣಿಸಬೇಕಿತ್ತು. ಆದ್ರೆ ಬಟ್ಟೆಗಳು ಎಲ್ಲಿಯೂ ಕಾಣ್ತಿಲ್ಲ. ಹೀಗಾಗಿ ಇದು ಕೊಲೆ ಅನ್ನೋ ಅನುಮಾನ ಮೂಡಿದ್ದು, ಲಕ್ಕುಂಡಿ ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ.

ಬೇರೆಲ್ಲೋ ಹತ್ಯೆ ಮಾಡಿ ಇಲ್ಲಿ ಎಸೆದರಾ ಪಾಪಿಗಳು..? ಅಂದಹಾಗೆ ಸ್ಥಳದಲ್ಲಿದ್ದ ಪರಿಸ್ಥಿತಿ ಸ್ಥಳೀಯರಲ್ಲಿ ಇಂತಹ ಅನುಮಾನ ಮೂಡುವಂತೆ ಮಾಡಿದೆ. ಯಾಕಂದ್ರೆ ಬಾಡಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೆನ್ನಿನ ಭಾಗದಲ್ಲಿ ಗಾಯವಾಗಿರೋದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಗದಗ ಎಸ್​ಪಿ ತನಿಖೆ ಮಾಡ್ತಿದ್ದೀವಿ ಆದಷ್ಟು ಬೇಗ ಆರೋಪಿಯನ್ನ ಪತ್ತೆ ಹಚ್ಚುವುದಾಗಿ ಹೇಳಿದ್ದಾರೆ.

ಅಸಹಜ ಸಾವು..? ಬಾವಿಯಲ್ಲಿ ಶವ ಸಿಕ್ಕಿರುವ ಮಾಹಿತಿ ಬಂದ ತಕ್ಷಣ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ವ್ಯಕ್ತಿ ಯಾರು ಎಂಬ ವಿಚಾರ ಸ್ಪಷ್ಟವಾಗಿಲ್ಲ. ವ್ಯಕ್ತಿ ಸಾವಿಗೆ ಕಾರಣ ಗೊತ್ತಾಗುತ್ತಿಲ್ಲ. ಅಸಹಜ ಸಾವು ಎಂದು ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Published On - 8:31 am, Wed, 20 November 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ