AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲುಷಿತ ನೀರು ಸೇವಿಸಿ 14 ಜನರು ಅಸ್ವಸ್ಥ: ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿಸುವುದಾಗಿ ಈಶ್ವರ ಖಂಡ್ರೆ ಭರವಸೆ

ಬೀದರ್ ಜಿಲ್ಲೆಯ ಬೀದರ್​ ತಾಲೂಕಿನ ಬರೀದಾಬಾದ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ 14 ಜನರ ಆರೋಗ್ಯವನ್ನು ಸಚಿವ ಈಶ್ವರ್​​​ ಖಂಡ್ರೆ ವಿಚಾರಿಸಿದರು.

ಕಲುಷಿತ ನೀರು ಸೇವಿಸಿ 14 ಜನರು ಅಸ್ವಸ್ಥ: ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿಸುವುದಾಗಿ ಈಶ್ವರ ಖಂಡ್ರೆ ಭರವಸೆ
ಸಚಿವ ಈಶ್ವರ ಖಂಡ್ರೆ
ಸುರೇಶ ನಾಯಕ
| Updated By: ವಿವೇಕ ಬಿರಾದಾರ|

Updated on:Jul 30, 2023 | 2:54 PM

Share

ಬೀದರ್ ಜು.30: ಜಿಲ್ಲೆಯ ಬೀದರ್ (Bidar)​ ತಾಲೂಕಿನ ಬರೀದಾಬಾದ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ 14 ಜನರ ಆರೋಗ್ಯವನ್ನು ಸಚಿವ ಈಶ್ವರ್​​​ ಖಂಡ್ರೆ ವಿಚಾರಿಸಿದರು. ಈ ವೇಳೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಮಾಡುವುದಾಗಿ ಅಸ್ವಸ್ಥರಿಗೆ ಭರವಸೆ ನೀಡಿದರು. ಈಶ್ವರ್​​​​ ಖಂಡ್ರೆ (Eshwar Khnadre) ಅವರಿಗೆ ಸಚಿವ ರಹೀಂ ಖಾನ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಸಾಥ್ ನೀಡಿದರು.​

ಘಟನೆ ಹಿನ್ನೆಲೆ

ಇಂದು (ಜು.30) ಬೀದರ್​ ತಾಲೂಕಿನ ಬರೀದಾಬಾದ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 14 ಜನರು ಅಸ್ವಸ್ಥಗೊಂಡಿದ್ದರು. ಅಲ್ಲದೇ ಶನಿವಾರ ಆರು ಜನ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದರು. ಅಸ್ವಸ್ಥರಲ್ಲಿ 8 ಜನರನ್ನು ಖಾಸಗಿ ಆಸ್ಪತ್ರೆಗೆ 6 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಬರೀದಾಬಾದ್ ಗ್ರಾಮದಲ್ಲಿ ವೈದ್ಯರ ತಂಡ ಬೀಡು ಬಿಟ್ಟಿದ್ದಾರೆ.

ಒಂದು ವಾರದಿಂದ ವಾಂತಿ ಭೇದಿಯಿಂದ ಬಳಲುತ್ತಿರುವ ಗ್ರಾಮಸ್ಥರು

ಕೊಪ್ಪಳ: ಜಿಲ್ಲೆಯಲ್ಲಿ ಮತ್ತೆ ವಾಂತಿ ಭೇದಿ ಪ್ರಕರಣ ಉಲ್ಬಣವಾಗಿದೆ. ಹೌದು ಕೊಪ್ಪಳ ತಾಲೂಕಿನ ಚಿಲವಾಡಿಗಿ ಗ್ರಾಮದ ಸುಮಾರು 20 ಕ್ಕೂ ಹೆಚ್ಚು ಜನರು ಕಳೆದ ಒಂದು ವಾರದಿಂದ ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ. ಕಲುಷಿತ ನೀರು ಕುಡಿದಿದ್ದರಿಂದ ವಾಂತಿ ಭೇದಿ, ಕಣ್ಣು ಉರಿ, ಮೈಕೈನೋವು ಕಾಣಿಸಿಕೊಳ್ಳುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕಲಬುರಗಿ, ಬೀದರ್ ನಗರಗಳನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಪಣ: ಈಶ್ವರ ಖಂಡ್ರೆ ಘೋಷಣೆ

ಕಳೆದ ಒಂದುವಾರದಿಂದ ಜಿಟಿ ಜಿಟಿ ಮಳೆಯಿಂದ ಕಲುಷಿತ ನೀರು ಕುಡಿದು ಅನೇಕರು ಅಸ್ವಸ್ತರಾಗಿದ್ದಾರೆ. ಇವರನ್ನು ಕೊಪ್ಪಳ, ಹೊಸಪೇಟೆ ವಿವಿಧ ಖಾಸಗಿ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ‌ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Sun, 30 July 23