ಬೀದರ್​: ಬರದ ಜಿಲ್ಲೆಯಲ್ಲಿ ಕರ್ಬೂಜ ಹಣ್ಣು ಬೆಳೆದು ಸೈ ಎನಿಸಿಕೊಂಡ ಯುವ ರೈತ; ಹೇಗೆ ಅಂತೀರಾ ಈ ಸ್ಟೋರಿ ನೋಡಿ

ಕೋವಿಡ್​ನಲ್ಲಿ ಕೆಲಸ ಕಳೆದುಕೊಂಡು ಬಂದ ಯುವಕ ಕೃಷಿಯಲ್ಲಿ ಕ್ರಾಂತಿ ಮಾಡುತ್ತಿದ್ದಾನೆ. ತನ್ನ ಒಂದು ಎಕರೆಯಲ್ಲಿ ಕರ್ಬೂಜ ಹಣ್ಣು ಬೆಳೆಯುವುದರ ಮೂಲಕ ಲಕ್ಷಾಂತರ ಆದಾಯ‌ ಗಳಿಸುತ್ತಿದ್ದು, ನೆಮ್ಮದಿಯ ಜೀವನ ಸಾಗಿಸುತ್ತಿದ್ದಾನೆ.

ಬೀದರ್​: ಬರದ ಜಿಲ್ಲೆಯಲ್ಲಿ ಕರ್ಬೂಜ ಹಣ್ಣು ಬೆಳೆದು ಸೈ ಎನಿಸಿಕೊಂಡ ಯುವ ರೈತ; ಹೇಗೆ ಅಂತೀರಾ ಈ ಸ್ಟೋರಿ ನೋಡಿ
ಬರದ ನಾಡಿನಲ್ಲಿ ಕರ್ಬೂಜ ಹಣ್ಣು ಬೆಳೆದು ಸೈ ಎನಿಸಿಕೊಂಡ ರೈತ
Follow us
| Updated By: Digi Tech Desk

Updated on:Feb 17, 2023 | 2:50 PM

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಿಪ್ಪರರ್ಗಾ ಗ್ರಾಮದ ಪ್ರಗತಿಪರ ರೈತ ಪರಮೇಶ, ತನ್ನ ಒಂದು ಎಕರೆ ಜಮೀನಿನಲ್ಲಿ ಕರ್ಬೂಜ್ ಹಣ್ಣು(Muskmelon Fruit) ಬೆಳೆದು, ಅದರಿಂದ ಬಂದ ಹಣದಿಂದ ಸುಂದರ ಜೀವನ ಸಾಗಿಸುತ್ತಿದ್ದಾನೆ. ಸುಮಾರು ಸುಮಾರು 60 ರಿಂದ 75 ದಿನಗಳೊಳಗಾಗಿ ಬರುವ ಈ ಕರ್ಬೂಜ್ ಬೆಳೆಯಿಂದ ಅಧಿಕ ಲಾಭ ಗಳಿಸಿದ್ದಾನೆ. ಈತ ತಮ್ಮ ಹೊಲದಲ್ಲಿ ವೈಜ್ಞಾನಿಕ ರೀತಿಯಿಂದ ಕರ್ಬೂಜ್ ಬೆಳೆಸಿದ್ದಾನೆ. ಇನ್ನು ಇವರು ಮಲ್ಚಿಂಗ್ ಹಾಕಿ ನಂತರ ಕವರ್ ಕ್ರಾಪ್ ಪದ್ದತಿ ಮೂಲಕ ಬೆಳೆಸಿದ್ದಾರೆ. ಇದಿರಿಂದಾಗಿ ಕೀಟಗಳ ಬಾದೆ ತಪ್ಪಿದೆ, ಬೆಳೆಗೆ ತಂಪಾದ ವಾತಾವರಣ ಸಿಕ್ಕಿದೆ. ಹೀಗೆ 20 ದಿನಗಳ ವರೆಗೆ ಕವರ್ ಕ್ರಾಪ್ ಪದ್ದತಿ ಮೂಲಕ ಕರ್ಬೂಜ್ ಬೆಳೆಸಿದ್ದಾರೆ. ಇದರಿಂದಾಗಿ ಬೆಳೆಯೂ ಕೂಡಾ ಚೆನ್ನಾಗಿ ಬಂದಿದ್ದು, ಇನ್ನೂ ಒಂದು ಎಕರೆಯಲ್ಲಿ 6500 ಸಸಿಗಳು ನಾಟಿ ಮಾಡಿದ್ದಾರೆ. ಅದರಲ್ಲೂ ಹಣ್ಣು ಚೆನ್ನಾಗಿ ಬಂದಿದೆ. ಮಾರುಕಟ್ಟೆಯಲ್ಲಿ ಇವರು ಬೆಳೆಸಿರುವ ಕರ್ಬೂಜ ಹಣ್ಣಿಗೆ ಭಾರಿ ಬೇಡಿಕೆಯಿದ್ದು 2 ರಿಂದ ಮೂರು ಲಕ್ಷ ರೂಪಾಯಿ ಆದಾಯ ಬರುವ ನೀರಿಕ್ಷೆಯನ್ನ ಈ ರೈತ ಇಟ್ಟುಕೊಂಡಿದ್ದಾನೆ.

ಇನ್ನು ಈ ಯುವ ರೈತ ಪರಮೇಶ ಖಾಸಗಿ ಕಂಪನಿಯಲ್ಲಿ ಹೈದ್ರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡು ಮನೆಗೆ ಬಂದಿದ್ದಾನೆ. ಪರಮೇಶ್ವರ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಅಂದುಕೊಂಡು ಕಳೆದು ಮೂರು ವರ್ಷದಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದು, ಒಂದೇ ಬೆಳೆ ಬೆಳೆಯದೆ ಬೇರೆ ಬೇರೆ ಬೆಳೆಯನ್ನ ಬೆಳೆಯುವುದರ ಮೂಲಕ ಲಾಭ ಗಳಿಸುತ್ತಿದ್ದಾನೆ. ಎರಡು ವರ್ಷದಿಂದ ಬೇಸಿಗೆಯಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದ. ಅದರಲ್ಲಿ ಹೆಚ್ಚಿಗೆ ಲಾಭವಾಗದ ಕಾರಣ ಈ ವರ್ಷ ಬೆಳೆಯನ್ನ ಬದಲಾವಣೆ ಮಾಡಿ ಕರ್ಬೂಜ್ ಬೆಳೆಸಿದ್ದಾನೆ. ಇವರು ಬೆಳೆಸಿರುವ ಕರ್ಬೂಜ್ ಬಣ್ಣದಲ್ಲಿ ರುಚಿಯಲ್ಲಿ ಗಾತ್ರದಲ್ಲಿಯೂ ಕೂಡಾ ವಿಭಿನ್ನವಾಗಿದ್ದು, ಹೈದ್ರಾಬಾದ್ ಮಾರುಕಟ್ಟೆಯಲ್ಲಿ ಇವರು ಬೆಳೆಸಿರುವ ಕರ್ಬೂಜ್​ಗೆ ಬಾರೀ ಬೇಡಿಕೆಯಿದೆ. 20 ರೂಪಾಯಿಗೆ ಇವರ ಹೊಲಕ್ಕೆ ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ಕಡಿಮೆ ನೀರಿರುವ ಕಾರಣ ಮಲ್ಚಿಂಗ್ ಹಾಗೂ ಕ್ರಾಪ್ ಕವರ್ ಪದ್ದತಿಯಲ್ಲಿ ಹಣ್ಣು ಬೆಳೆಸಿದ್ದರ ಪರಿಣಾಮವಾಗಿ ನೀರು ಜಾಸ್ತಿ ಬೇಕಾಗಿಲ್ಲ. ಕಡಿಮೆ ನೀರನ್ನ ಬಳಸಿಕೊಂಡು ಕರ್ಬೂಜ್ ಬೆಳೆಸಿ ಹೆಚ್ಚಿನ ಆದಾಯವನ್ನ ಇವರು ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿ, ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ: ಇಂದಿನ ಅಡಕೆ ಧಾರಣೆ ವಿವರ ಇಂತಿದೆ

ಕರ್ಬೂಜ ಹಣ್ಣನ್ನ ಬೆಳೆಯುವುದು ಸುಲಭ

ಕರ್ಬೂಜ್ ಬೆಳೆ ಬೆಳೆಯಲು ಖರ್ಚು ಕಡಿಮೆ, ನಿರ್ವಹಣೆಯೂ ಸುಲಭವಾಗಿದೆ ಎಂಥಹ ಭೂಮಿಯಲ್ಲಿಯೂ ಕೂಡಾ ಇದು ಬೆಳೆಯಬಲ್ಲದ್ದಾಗಿದ್ದು ಕಡಿಮೆ ನೀರಿದ್ದರು ಸಾಕು ಚಿಂತೆಯಿಲ್ಲದೆ ಹಣ್ಣು ಬೆಳೆಸಬಹುದಾಗಿದೆ. ಮಳೆಗಾಲದಲ್ಲಿ ನೀರು ಹೆಚ್ಚಾದರೆ ಕೊಳೆ ರೋಗ ಬರುವ ಸಾಧ್ಯತೆ ಇರುತ್ತದೆ ಮಾರುಕಟ್ಟೆಯಲ್ಲಿಯೂ ಕೂಡಾ ಮಳೆಗಾಲದಲ್ಲಿ ಈ ಹಣ್ಣಿಗೆ ಬೇಡಿಕೆ ಇರೋದಿಲ್ಲ. ಹೀಗಾಗಿ ಈ ಹಣ್ಣನ್ನ ಬೇಸಿಗೆಯಲ್ಲಿ ಬೆಳೆಸಿದರೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇರುತ್ತದೆ ಲಾಭವು ಆಗುತ್ತದೆಂದು ರೈತರು ಹೇಳುತ್ತಿದ್ದಾರೆ. ಇನ್ನೂ ಈ ಕರ್ಬೂಜ್ ಕೃಷಿಗೆ ತೋಟಗಾರಿಕೆ ಇಲಾಖೆಯಿಂದ ಏನೇನು ಸೌಲಭ್ಯಗಳು ಬೇಕು ಅವೆಲ್ಲವನ್ನ ಕೊಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಒಟ್ಟಾರೆ ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದಾರೆ. ಅಷ್ಟೆ ಅಲ್ಲದೆ ಕೆವಲ 1 ಎಕರೆ ಜಮೀನಿನಲ್ಲಿ ಬಂಗಾರದ ಬೆಳೆ ಬೆಳೆದು ಇಡೀ ಮನೆಯನ್ನ ಸಾಕಿ ಸಲುಹುತ್ತಿದ್ದಾನೆ. ಜೊತೆಗೆ ಮನೆಯಲ್ಲಿ ಇಡಿ ಕುಟುಂಬದ ಸದಸ್ಯರು ಕೆಲಸ ಮಾಡುತ್ತಿರುವುದರಿಂದ ಇವರ ಲಾಭ ಇಮ್ಮಡಿಯಾಗಿಸಿದೆ. ಕೆಲಸಕ್ಕೆ ಬರೋ ಕೂಲಿ ಆಳುಗಳು ಕೂಡಾ ಇವರ ಕುಟುಂಬದ ಸದಸ್ಯರ ಜೊತೆ ಕೆಲಸ ಮಾಡುವುದರಿಂದ ಹೆಚ್ಚಿನ ಕೆಲಸವಾಗುತ್ತಿದೆ. ಕೆಲಸ ಯಾವುದಾದರೇನು ಶ್ರದ್ದೆಯಿಂದ ಮಾಡಿದರೆ ಇನ್ನೋಬ್ಬರಿಗೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Fri, 17 February 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ