ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿ, ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ: ಇಂದಿನ ಅಡಕೆ ಧಾರಣೆ ವಿವರ ಇಂತಿದೆ

ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರಲ್ಲ, ಅದರಲ್ಲಿ ಔಷಧ ಗುಣ ಇದೆ ಎಂದು ಎಂ.ಎಸ್‌.ರಾಮಯ್ಯ ತಾಂತ್ರಿಕ ವಿವಿ ಸಂಶೋಧನಾ ವರದಿ ಹೇಳಿರುವುದಾಗಿ ವಿಧಾನಪರಿಷತ್‌ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿ, ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ: ಇಂದಿನ ಅಡಕೆ ಧಾರಣೆ ವಿವರ ಇಂತಿದೆ
ಆರಗ ಜ್ಞಾನೇಂದ್ರ (ಬಲ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Feb 14, 2023 | 7:16 PM

ವಿಧಾನ ಪರಿಷತ್: ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರಲ್ಲ, ಅದರಲ್ಲಿ ಔಷಧ ಗುಣ ಇದೆ ಎಂದು ಎಂ.ಎಸ್‌.ರಾಮಯ್ಯ ತಾಂತ್ರಿಕ ವಿವಿ (M.S. Ramaiah Technical University) ಸಂಶೋಧನಾ ವರದಿ ಹೇಳಿರುವುದಾಗಿ ವಿಧಾನಪರಿಷತ್‌ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿಕೆ ನೀಡಿದ್ದಾರೆ. 1 ವರ್ಷದ ಹಿಂದೆ ಅಡಕೆಯಲ್ಲಿ (Arecanut) ಕ್ಯಾನ್ಸರ್ ಕಾರಕ ಅಂಶಗಳು ಇವೆಯೇ ಇಲ್ಲವೇ ಎಂಬುದನ್ನು ಸಂಶೋಧನೆ ನಡೆಸಲು ಹೇಳಿದ್ದೆವು ಎಂ.ಎಸ್‌.ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದೆವು. ಅದರಂತೆ ನಡೆದ ಸಂಶೋಧನೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರಲ್ಲ, ಔಷಧ ಗುಣ ಇರುತ್ತದೆ ಎಂದು ವರದಿ ಸಲ್ಲಿಕೆಯಾಗಿದೆ ಎಂದರು.

ಹಿಂದಿನ ಸರ್ಕಾರ ಅಡಕೆಯಲ್ಲಿ ಕ್ಯಾನ್ಸರ್‌ ಗುಣ ಇರುತ್ತೆಂದು ಹೇಳಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾವು ಸುಪ್ರೀಂಕೋರ್ಟ್‌ಗೆ ಹೋಗುತ್ತಿದ್ದೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಪ್ರತಾಪ್ ಸಿಂಹ ನಾಯಕ್ ಅವರು ನಿಯಮ 330ರಡಿ ಅಡಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಆರಗ ಜ್ಞಾನೇಂದ್ರ, ರಾಜ್ಯದಲ್ಲಿ ಅಡಕೆ ಬೆಳೆಗೆ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡಿದೆ. ನಿಯಂತ್ರಣ ಮಾಡುವ ಪ್ರಯತ್ನ ನಡೆದಿದೆ ಎಂದರು.

ಇದನ್ನೂ ಓದಿ: Marburg Disease: ಮಾರ್ಬರ್ಗ್ ರೋಗ ಅದರ ಲಕ್ಷಣ, ಚಿಕಿತ್ಸೆಯ ಕುರಿತು ಮಾಹಿತಿ ಇಲ್ಲಿದೆ

ಅಡಕೆ ರೋಗದ ಬಗ್ಗೆ ಕೇಂದ್ರಕ್ಕೆ ರಾಜ್ಯ ನಿಯೋಗ ಭೇಟಿ ಕೊಟ್ಟಿತ್ತು. ಕೇಂದ್ರದಿಂದ‌ ವೈಜ್ಞಾನಿಕ ತಂಡ ರಾಜ್ಯಕ್ಕೆ ಆಗಮಿಸಿದೆ. ಎಲೆಚುಕ್ಕಿ ರೋಗ ನಿಯಂತ್ರಣದ ಬಗ್ಗೆ ರೈತರಿಗೆ ತರಬೇತಿ ನೀಡಲಾಗಿದೆ. ಔಷಧ ಖರೀದಿಸಲು ಪ್ರತಿ ಹೆಕ್ಟೇರ್‌ಗೆ 4000 ರೂ. ನೀಡಲಾಗುತ್ತಿದೆ. ಎಲೆಚುಕ್ಕಿ ರೋಗಕ್ಕೆ ಔಷಧ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದೆ. ಹೇಗೆ ಕೊವಿಡ್‌ಗೆ ಔಷಧ ಕಂಡುಹಿಡಿಯಲಾಗಿದೆಯೋ ಅದೇ ರೀತಿ ಎಲೆಚುಕ್ಕಿ ರೋಗಕ್ಕೂ ಔಷಧ ಕಂಡುಹಿಡಿಯಲಾಗುತ್ತದೆ ಎಂದರು.

ಗುಟ್ಕಾ ನಿಷೇಧಿಸಿದ್ರೆ ಅಡಕೆ ಬೆಲೆ ವ್ಯಾಪಕವಾಗಿ ಕುಸಿಯುತ್ತದೆ. ಈಗ ಸದ್ಯ ಅಡಿಕೆ ಬೆಲೆ ಇದೆ. ಇಳುವರಿಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಣೆ ನಡೆಯುತ್ತಿದೆ. ಅಡಿಕೆ ಉತ್ಪನ್ನ ಆರೋಗ್ಯಕ್ಕೆ ಪೂರಕ‌ ಎಂದು ಸಾಬೀತು ಪಡಿಸಲು ಕೆಲವು ಸಂಶೋಧನೆಗಳು ನಡೆಯುತ್ತಿವೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಅಡಕೆ ಕೃಷಿಯನ್ನು 50 ಲಕ್ಷ ಜನ ಅವಲಂಬಿತರಾಗಿದ್ದಾರೆ. ಹೀಗಾಗಿ ಸರ್ಕಾರ ಕ್ರಮವಹಿಸಿದೆ, ಮತ್ತಷ್ಟು ವಹಿಸಬೇಕು ಎಂದು ಪ್ರತಾಪ್ ಸಿಂಹ ನಾಯಕ್ ಒತ್ತಾಯಿಸಿದರು.

ಶಿವಮೊಗ್ಗ, ಭದ್ರಾವತಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ

ಶಿವಮೊಗ್ಗ ಮಾರುಕಟ್ಟೆ

  • ಗೊರಬಲು 17000, 33489
  • ಬೆಟ್ಟೆ 46569, 52400
  • ರಾಶಿ 36009, 45699
  • ಸರಕು 46569, 81510

ಭದ್ರಾವತಿ ಮಾರುಕಟ್ಟೆ

  • ರಾಶಿ 40199 45299

ಚನ್ನಗಿರಿ ಮಾರುಕಟ್ಟೆ

  • ರಾಶಿ 44219 46379

ಶಿರಸಿ ಮಾರುಕಟ್ಟೆ

  • ಕೆಂಪುಗೋಟು 26009 36501
  • ಚಾಲಿ 30999 41039
  • ಬೆಟ್ಟೆ 20699 42781
  • ಬಿಳೆ ಗೋಟು 21799 35199
  • ರಾಶಿ 39249 46189

ಸಿದ್ಧಾಪುರ ಮಾರುಕಟ್ಟೆ

  • ಕೆಂಪುಗೋಟು 30819 33399
  • ಕೋಕ 26299 31899
  • ಚಾಲಿ 36839 38809
  • ತಟ್ಟಿಬೆಟ್ಟೆ 36609 40059
  • ಬಿಳೆ ಗೋಟು 27699 33299
  • ರಾಶಿ 42319 45599
  • ಹೊಸ ಚಾಲಿ 32119 35559

ಬಂಟ್ವಾಳ ಮಾರುಕಟ್ಟೆ

  • ಕೋಕ 12500 25000
  • ನ್ಯೂ ವೆರೈಟಿ 22500 40000
  • ವೋಲ್ಡ್ ವೆರೈಟಿ 48000 54500

ಪುತ್ತೂರು ಮಾರುಕಟ್ಟೆ

  • ನ್ಯೂ ವೆರೈಟಿ 32000 37500

ಚಿತ್ರದುರ್ಗ ಮಾರುಕಟ್ಟೆ

  • ಅಪಿ 44629 45079
  • ಕೆಂಪುಗೋಟು 29909 30310
  • ಬೆಟ್ಟೆ 35019 35449
  • ರಾಶಿ 44139 44569

ಕುಂದಾಪುರ ಮಾರುಕಟ್ಟೆ

  • ಹಳೆ ಚಾಲಿ 40000 49500
  • ಹೊಸ ಚಾಲಿ 35000 40000

ಕಾರ್ಕಳ ಮಾರುಕಟ್ಟೆ

  • ನ್ಯೂ ವೆರೈಟಿ 30000 40000
  • ವೋಲ್ಡ್ ವೆರೈಟಿ 40000 54500

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ