ಬೀದರ್​: ಧಾರ್ಮಿಕ ಸಾಮರಸ್ಯ ಸಾರುವ ಅಷ್ಟೂರು ಜಾತ್ರೆ! ಇಲ್ಲಿನ ವಿಶೇಷತೆ ಏನ್​ ಗೊತ್ತಾ?

ಹಿಂದೂ-ಮುಸ್ಲಿಂರ ಧಾರ್ಮಿಕ ಸಾಮರಸ್ಯದ ಸಂಕೇತವಾದ ಬೀದರ್​ನ ಅಷ್ಟೂರು ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಹಿಂದೂ, ಮುಸ್ಲಿಂ ಭೇದಭಾವ ಮರೆತು ಶತಮಾನಗಳಿಂದ ವಿಜೃಂಭಣೆಯಿಂದ ಹಿಂದೂಗಳು ಅಲ್ಲಮಪ್ರಭು ಎಂದು, ಹಾಗೂ ಮುಸ್ಲಿಂರು ಅಹಮದ್ ಶಾ ವಲಿ ಎಂದು ಪೂಜಿಸುತ್ತಾರೆ.

ಬೀದರ್​: ಧಾರ್ಮಿಕ ಸಾಮರಸ್ಯ ಸಾರುವ ಅಷ್ಟೂರು ಜಾತ್ರೆ! ಇಲ್ಲಿನ ವಿಶೇಷತೆ ಏನ್​ ಗೊತ್ತಾ?
ಅಷ್ಟೂರು ಜಾತ್ರೆ
Follow us
ಸುರೇಶ ನಾಯಕ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 05, 2024 | 7:10 AM

ಬೀದರ್​, ಏ.05: ಒಂದೇ ದೇವರು ಎರಡು ಹೆಸರು, ಹಿಂದೂಳಿಗೆ ಅಲ್ಲಮಪ್ರಭುವಾದರೇ, ಮುಸ್ಲಾಂನರಿಗೆ ಅಹೆಮದ್ ಶಾ ವಲಿ. ಹೌದು, ದೇವನೂಬ್ಬ ನಾಮ ಹಲವು ಎಂಬಂತೆ ಬೀದರ್(Bidar) ನಗರಕ್ಕೆ ಸಮೀಪದ ಅಷ್ಟೂರ ಗ್ರಾಮದ ಅಹ್ಮದ ಶಾ ವಲಿ ಬಹಮನಿ ದರ್ಗಾದ ಗುಂಬಜ್‌ಗಳು ಹಿಂದೂ ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕಗಳಾಗಿವೆ. ಈ ದರ್ಗಾದಲ್ಲಿ ಮುಸ್ಲಿಂಮರಿಗೆ ಅಹ್ಮದ ಶಾ ಅಲಿ ವಲಿ ಆರಾಧ್ಯ ದೈವವಾದರೆ, ಹಿಂದುಗಳಿಗೆ ಅಲ್ಲಮಪ್ರಭುವಾಗಿ ಪೂಜೆ ಪಡೆಯುವುದು ವಿಶೇಷ. ಹಿಂದೂ- ಮುಸ್ಲಿಂ ಭಾವೈಕ್ಯದಲ್ಲಿ ನಂಬಿಕೆಯಿಟ್ಟಿದ್ದ ಅಹ್ಮದ್ ಶಾ ಅಲಿ ಬಹಮನಿ ಅವರ ಜನ್ಮದಿನ ನಿಮಿತ್ತ ಗೋರಿಯ ಗುಂಬಜ್‌ಗೆ ತೆರಳುವ ಸಾವಿರಾರು ಜನರು ಭಕ್ತಿ ಸಮರ್ಪಣೆ ಮಾಡುವುದು ಹಲವು ಶತಮಾನಗಳಿಂದ ನಡೆದು ಬಂದಿದೆ.

ಇನ್ನು ಅಷ್ಟೂರಿನ ಅಲ್ಲಮಪ್ರಭು ದೇವರು ಜಗತ್ತಿಗೆ ಸಹೋದರತೆ, ಸಮಾನತೆಯೊಂದಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹದಂತಹ ಮಹಾನ್ ತತ್ವಗಳನ್ನು ಸಾರಿರುವ ಶರಣ. ಅವರಸ್ಮರಣೆಯಲ್ಲೇ ಪ್ರತಿವರ್ಷ ಜಾತ್ರೆ ನೆರವೇರುತ್ತದೆ. ರಾಜ್ಯ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಸಾವಿರಾರು ಯಾತ್ರಾರ್ಥಿಗಳು, ಪ್ರವಾಸಿಗರು ನಿತ್ಯ ಇಲ್ಲಿಗೆ ಆಗಮಿಸಿ ದರ್ಗಾಕ್ಕೆ ಹೂವಿನ ಚಾದರ್ ಸಮರ್ಪಿಸುತ್ತಾರೆ. ಅಗರಬತ್ತಿ ಹಚ್ಚಿ ಪೂಜಿಸಿ, ಪ್ರಾರ್ಥಿಸಿ ಅಹ್ಮದ್ ಶಾಹ್‌ಗೆ ನಮಿಸುತ್ತಾರೆ. ಇಲ್ಲಿ ಹಿಂದುಗಳು ಅಲ್ಲಮಪ್ರಭು ಗುಡಿ ಎಂದರೆ, ಮುಸ್ಲಿಮರು ವಲಿ ದರ್ಗಾ ಎಂದು ಪರಿಗಣಿಸುವ ಅಹ್ಮದ್ ಶಾಹ್‌ನ ಸಮಾಧಿಯು ಅಪರೂಪದ ಭಾವೈಕ್ಯತೆಯ ತಾಣಗಳಲ್ಲೊಂದು ಎನ್ನುತ್ತಾರೆ ಇಲ್ಲಿನ ಭಕ್ತರು.

ಇದನ್ನೂ ಓದಿ:‘ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್’ ಪಠಿಸುವಂತೆ ಮುಸ್ಲಿಮರಿಗೆ ಆರ್​​ಎಸ್​ಎಸ್​​ ನಾಯಕ ಮನವಿ

ಅಷ್ಟಕ್ಕೂ ಈ ದರ್ಗಾ ಜಾತ್ರೆಗೆ ಚಾಲನೆ ನೀಡುವವರು ಪಕ್ಕದ ಗುಲ್ಬರ್ಗ ಜಿಲ್ಲೆಯ ಮಾಡಿಹಾಳ್ ಮತ್ತು ಆಳಂದನ ಅಲ್ಲಮಪ್ರಭು ಮಹಾರಾಜರೆಂದೇ ಗುರುತಿಸಿಕೊಳ್ಳುವ ಗುರುಗಳು. ಪ್ರತಿ ವರ್ಷ ಹೋಳಿ ಹಬ್ಬದ ನಂತರ ನಡೆಯುವ ಜಾತ್ರೆಯ ಸಂದರ್ಭ ಕಾಲ್ನಡಿಗೆಯಲ್ಲಿಯೇ ಆಗಮಿಸುವ ಗುರುಗಳು, ದರ್ಗಾ ಮುಂದೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡುತ್ತಾರೆ. ಐದು ದಿನಗಳವರೆಗೆ ನಡೆಯುವ ಈ ಜಾತ್ರೆಯ ಸಂದರ್ಭ ಪಟಾಕಿ ಸಿಡಿಸುವುದು ಮತ್ತು ಅಂತರ್​ರಾಜ್ಯ ಕುಸ್ತಿ ಸ್ಪರ್ಧೆ ಏರ್ಪಡಿಸುವುದು ತಲ-ತಲಾಂತರಗಳಿಂದ ನಡೆದು ಬಂದ ಸಂಸ್ಕೃತಿ. ದರ್ಗಾ ಮುಂದೆ ಭಕ್ತರು ಎಣ್ಣೆ ದೀಪ ಹಚ್ಚಿ ಭಕ್ತಿ ಸಮರ್ಪಿಸುತ್ತಾರೆ.

ಬೀದರ್‌ನಿಂದ 3 ಕಿಮೀ ದೂರದ ಅಷ್ಟೂರು ಗ್ರಾಮ ಪ್ರವೇಶಿಸುವ ಮುನ್ನವೇ ಬಹಮನಿ ಅರಸರ ಗೋರಿಗಳ ಸಾಲು ನೋಡಲು ಸಿಗುತ್ತದೆ. ಇಲ್ಲಿ ಅಲ್ಲಾವುದ್ದಿನ್ ಗೋರಿ, ಸಿಡಿಲ ಹೊಡೆತಕ್ಕೆ ಸಿಲುಕಿ ಅರ್ಧ ಕುಸಿದಿರುವ ಹುಮಾಯೂನ್ ಸಮಾಧಿ, ಅದರ ಪಕ್ಕದಲ್ಲಿಯೇ ಇರುವ ಮಕ್ದುಮ್ ಏ ಜಹಾನ್, ನರ್ಗಿಸ್ ಬೇಗಂ, ನಿಜಾಮ್ ಶಾಹ, ಮಹಮೂದ ಶಾಹ ಬಹಮನಿ, ಮೊಹಮ್ಮದ ಶಾ ಬಹಮನಿ, ಅಹಮದ್ ಶಾ ಬಹಮನಿ, ಅಲ್ಲಾಮುದ್ದೀನ್ ಶಾಹ ಬಹಮನಿ, ವಲಿವುಲ್ಲಾ ಶಾಹ ಬಹಮನಿ, ಖಲೀಮಲ್ಲಾ ಶಾಹ ಬಹಮನಿ ಗೋರಿಗಳಿವೆ. ಅಹಮದ್ ಶಾಹ್‌ನ ಈ ಗೋರಿ ಮೇಲ್ಭಾಗದಲ್ಲಿ ಅಂದರೆ ಗುಂಬಜಿನ ಒಳಭಾಗದಲ್ಲಿ ಚಿನ್ನದ ಲೇಪನ ಹಾಗೂ ವೈವಿಧ್ಯಮಯ ಬಣ್ಣ ಬಳಸಿದ್ದು ಆಕರ್ಷಕವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ.

ಇದು ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ವ್ಯಾಪ್ತಿಗೆ ಈ ಗುಂಬಜ್‌ಗಳು ಬರುತ್ತಿದ್ದು, ಪ್ರವಾಸಿ ತಾಣಗಳನ್ನಾಗಿಸುವುದಷ್ಟೇ, ಇಲ್ಲಿ ಪುರಾತನ ಸ್ಮಾರಕ ಸ್ಥಳಗಳನ್ನು ಸಂರಕ್ಷಿಸಲು ವಿಶೇಷ ಆಸಕ್ತಿ ವಹಿಸಲಾಗುತ್ತಿದೆ. ಹೀಗಾಗಿ ಇಲ್ಲಿನ ಜಾತ್ರೆ ಹಿಂದೂ- ಮುಸ್ಲಿಮರು ಒಂದಾಗಿ ಆಚರಣೆ ಮಾಡುವುದರಿಂದ ಈ ಜಾತ್ರೆಗೆ ವಿಶೇಷವಾದ ಸ್ಥಾನ ಬಂದಿದೆ. ಪ್ರತಿವರ್ಷ ಹೂಳಿಹುಣ್ಣಿಮೆಯ ನಂತರ ನಡೆಯುವ ಈ ಜಾತ್ರೆ, ಹಲವಾರು ವಿಶೇಷತೆಯನ್ನೊಳಗೊಂಡಿದೆ. ಹಿಂದೂ ಮುಸ್ಲಿಂರು ಕೂಡಿಕೊಂಡು ಈ ಜಾತ್ರೆಯನ್ನ ಅದ್ಧೂರಿಯಾಗಿ ಆಚರಿಸುತ್ತಾರೆ. ಏನೇ ಇರಲಿ ಹಿಂದೂ-ಮುಸ್ಲಿಂ ಭೇದ ಭಾವ ಮರೆತು ಎಲ್ಲರೂ ಒಂದಾಗಿ ದೇವನೊಬ್ಬ, ನಾಮ ಹಲವೂ ಎನ್ನುವಂತೆ ವಿವಿಧ ಹೆಸರಿನಿಂದ ಕರೆಯುವ ಒಂದೇ ದೇವರನ್ನ ಹಿಂದೂಗಳು ಹಾಗೂ ಮುಸ್ಲಿಂಮರು ಸೇರಿಕೊಂಡು ಜಾತ್ರೆ ಮಾಡಿ ಖಷಿ ಪಡುವುದು ಒಳ್ಳೇಯ ವಿಚಾರವೇ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?