ಬೀದರ್ ನಾಗರಿಕ ವಿಮಾನ ಸೇವೆ ಮತ್ತೆ ಬಂದ್; ಒಂದು ವಾರದಿಂದ ನಷ್ಟದ ನೆಪವೊಡ್ಡಿ ಹಾರಾಟ ನಿಲ್ಲಿಸಿದ ಸ್ಟಾರ್ ಏರ್ ಜೆಟ್

ಬೀದರ್​ನಿಂದ ರಾಜ್ಯದ ರಾಜ್ಯಧಾನಿ ಬೆಂಗಳೂರಿಗೆ ವಿಮಾನ ಹಾರಾಡಬೇಕೆಂಬ ಕನಸನ್ನು ಅಲ್ಲಿನ ಜನ ಕಂಡಿದ್ದರು. ಅದರಂತೆ ನಾಗರಿಕರ ಕನಸಿನಂತೆ ಗಡಿ ಜಿಲ್ಲೆ ಬೀದರ್​ನಿಂದ ಬೆಂಗಳೂರಿಗೆ ವಿಮಾನ ಹಾರಾಟ ಕುಡಾ ನಡೆಸಿತು. ಆದರೆ, ಕಳೆದೊಂದು ವಾರದಿಂದ ವಿಮಾನ ಹಾರಾಟ ನಿಲ್ಲಿಸಿದ್ದು, ಬೀದರ್ ವಿಮಾನ ನಿಲ್ದಾಣ ಮುಚ್ಚುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಬೀದರ್ ನಾಗರಿಕ ವಿಮಾನ ಸೇವೆ ಮತ್ತೆ ಬಂದ್; ಒಂದು ವಾರದಿಂದ ನಷ್ಟದ ನೆಪವೊಡ್ಡಿ ಹಾರಾಟ ನಿಲ್ಲಿಸಿದ ಸ್ಟಾರ್ ಏರ್ ಜೆಟ್
ಬೀದರ್​ ವಿಮಾನ ನಿಲ್ದಾಣ
Follow us
ಸುರೇಶ ನಾಯಕ
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 29, 2023 | 4:30 PM

ಬೀದರ್, ಡಿ.29: ಗಡಿ ಜಿಲ್ಲೆ ಬೀದರ್(Bidar)​​ನಿಂದ ರಾಜ್ಯದ ರಾಜ್ಯಧಾನಿ ಬೆಂಗಳೂರು, ದೆಹಲಿ, ಹೈದ್ರಾಬಾದ್ ಹಾಗೂ ಪುಣೆಗೆ ಇಲ್ಲಿಂದ ವಿಮಾನ ಹಾರಾಟ ಮಾಡಬೇಕು ಬೀದರ್​ನಲ್ಲೊಂದು ವಿಮಾನ ನಿಲ್ದಾಣ(Airport)ವಾಗಬೇಕು ಎಂದು ಜಿಲ್ಲೆಯ ಜನರು ಕನಸನ್ನ ಕಂಡಿದ್ದರೂ. ಇದಕ್ಕಾಗಿ ಹತ್ತಾರು ಹೋರಾಟಗಳನ್ನ ಸಹ ಮಾಡಿದ್ದರು. ಜನರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ 2020 ಪೆಬ್ರುವರಿ 7 ರಂದು ಬೀದರ್​ನಿಂದ ಬೆಂಗಳೂರಿಗೆ 72 ಸೀಟ್​ನ ಟ್ರೋಜೆಟ್ ವಿಮಾನದ ಹಾರಾಟ ಆರಂಭಿಸಿತು. ಆದರೆ, ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದಾಗಿ ಟ್ರೂಜೇಟ್ ವಿಮಾನ ಕೆಲವು ತಿಂಗಳಲ್ಲಿಯೇ ತನ್ನ ಹಾರಾಟವನ್ನ ನಿಲ್ಲಿಸಿತು.

ಇದಾದ ಬಳಿಕ ಒಂದು ವರ್ಷಗಳ ಕಾಲ ವಿಮಾನ ಹಾರಾಡಲೇ ಇಲ್ಲ. ಪ್ರಯಾಣಿಕರು ಹೈದ್ರಾಬಾದ್​ಗೆ ಹೋಗಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರು ಸೇರಿ ಇತರೆ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡಿದರು. ಇದು ಪ್ರಯಾಣಿಕರಿಗೆ ಕಷ್ಟವಾಗ ತೊಡಗಿದಾಗ ಪ್ರಯಾಣಿಕರ ಒತ್ತಾಯದ ಮೇರೆಗೆ 2022 ಜೂನ್ 15 ರಂದು ಸ್ಟಾರ್ ಏರ್ ವಿಮಾನವು ತನ್ನ ಹಾರಾಟವನ್ನ ಆರಂಭಿಸಿತು. ಆದರೆ ಒಂದೂವರೆ ವರ್ಷದಲ್ಲಿಯೇ ಇದು ಕೂಡ ಆರ್ಥಿಕ ನಷ್ಟದಿಂದಾಗಿ ತನ್ನ ಸೇವೆಯನ್ನ ನಿಲ್ಲಿಸಿದೆ. ಹೀಗಾಗಿ ಇಲ್ಲಿ ಸುಸ್ಸಜ್ಜಿತ ಏರ್ ಪೋರ್ಟ್ ಇದ್ದರು ಕೂಡ ಜಿಲ್ಲೆಯ ಜನರಿಗೆ ವಿಮಾನ ಸೌಲಭ್ಯ ಸಿಗದಂತಾಗಿದೆ.

ಇದನ್ನೂ ಓದಿ:2023ರ ವಿಶ್ವದ ಅತ್ಯುತ್ತಮ ಮತ್ತು ಕಳಪೆ ಸೇವೆ ನೀಡಿದ ವಿಮಾನ ನಿಲ್ದಾಣಗಳು: ಭಾರತಕ್ಕೆ ಯಾವ ಸ್ಥಾನ?

ಕೋವಿಡ್ ಸಮಯದಲ್ಲಿಯೇ ಬೀದರ್ ವಿಮಾನ ನಿಲ್ದಾಣ ಆರಂಭವಾಗಿದ್ದರು ಕೂಡ ಅವತ್ತಿನಿಂದ ಇವತ್ತಿನವರೆಗೂ ಕೂಡ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿಯೇ ಓಡಾಡಿದ್ದಾರೆ. ಆದರೂ ಕೂಡ ಟ್ರೂಜೆಟ್ ಹಾಗೂ ಸ್ಟಾರ್ ಏರ್​ನವರು ನಷ್ಟವಾಗುತ್ತಿದೆಯೆಂದು ಹೇಳಿ ತಮ್ಮ ಸೇವೆಯನ್ನು ನಿಲ್ಲಿಸಿದ್ದು, ಇದು ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡಿದೆ. ಬೀದರ್​ನಲ್ಲಿ ವಿಮಾನ ಹಾರಾಟ ಸ್ಥಗಿತವಾಗಿದ್ದರಿಂದ ಜಿಲ್ಲೆಯ ಜನರು ಅನಿವಾರ್ಯವಾಗಿ ಕಲಬುರಗಿ ಅಥವಾ ಹೈದ್ರಾಬಾದ್​ಗೆ ಹೋಗಿ ವಿಮಾನದ ಮೂಲಕ ಬೆಂಗಳೂರಿಗೆ ಹೋಗವಂತಹ ಸ್ಥಿತಿ ಉಂಟಾಗಿದೆ.

ಪಕ್ಕದ ಕಲಬುರ್ಗಿಯಿಂದ ದಿನಕ್ಕೆ ಐದಾರು ವಿಮಾನಗಳು ಹಾರಾಟ ಮಾಡುತ್ತಿವೆ. ಜೊತೆಗೆ ಅನ್ಯ ರಾಜ್ಯಕ್ಕೂ ಕೂಡ ಇಲ್ಲಿಂದ ವಿಮಾನ ಹಾರಾಟ ಮಾಡುತ್ತಿದೆ. ಆದರೆ, ಬೀದರ್​ನಲ್ಲಿ ಮಾತ್ರ ಇದ್ದ ಒಂದೇ ಒಂದು ವಿಮಾನವೂ ಕೂಡ ಹಾರಾಟ ನಡೆಸದೇ ಇರುವುದು ಜಿಲ್ಲೆಯ ಜನರ ಅಸಮಾಧಾನ ಹೆಚ್ಚುವಂತೆ ಮಾಡಿದೆ. ಬಡವರು ಸಹ ವಿಮಾನ ಪ್ರಯಾಣ ಮಾಡಲಿ ಎನ್ನುವ ಉದ್ದೇಶದಿಂದ‌ ಕೇಂದ್ರ ಸರ್ಕಾರ ಉಡಾನ್ ಯೋಜನೆ ಜಾರಿಗೆ ತಂದಿದೆ. ಹಲವಾರು ಅಡೆ- ತಡೆಗಳ ನಡುವೆಯೋ ಗಡಿನಾಡಿನಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಮೂರು ವರ್ಷ ಕಳೆದಿದೆ. ಅಷ್ಟರಲ್ಲಿಯೇ ವಿಮಾನ ಹಾರಾಟ ನಿಲ್ಲಿಸಿದೆ.

ಇನ್ನು ಈ ವಿಚಾರ ಬಗ್ಗೆ ಬೀದರ್ ಜಿಲ್ಲಾಧಿಕಾರಿಯವರನ್ನ ಕೇಳಿದರೆ  ‘ಪ್ರಯಾಣಿಕರ ಕೊರತೆಯಿಂದ ವಿಮಾನ ಹಾರಾಟ ನಿಲ್ಲಿಸಿದೆ. ಶೀಘ್ರದಲ್ಲಿಯೇ ಮತ್ತೊಂದು ವಿಮಾನ ಕಂಪನಿಯ ಜೊತೆಗೆ ಮಾತುಕತೆ ನಡೆಸಿ, ಮತ್ತೆ ವಿಮಾನ ಹಾರಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ. ಬೀದರ್​ನಿಂದ ವಿಮಾನ ಹಾರಾಟ ಆರಂಭವಾಗಿ ಮೂರು ವರ್ಷದಲ್ಲಿಯೇ ಎರಡು ಕಂಪನಿಯವರು ವಿಮಾನ ಹಾರಾಟ ನಿಲ್ಲಿಸಿವೆ. ಇನ್ನು ಮುಂದೆ ಬೀದರ್​ನಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸುವುದು ಅನುಮಾನವಾಗಿದ್ದು, ಬೀದರ್ ವಿಮಾನ ನಿಲ್ದಾಣ ಮುಚ್ಚುವ ಎಲ್ಲಾ ಲಕ್ಷಣಗಳು ಇಲ್ಲಿ ಗೋಚರಿಸುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Fri, 29 December 23