AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲೂ ಬೀದರ್​ ಜಿಲ್ಲೆಯ 56 ಕೆರೆಗಳಲ್ಲಿ ನೀರೇ ಇಲ್ಲ, ಚಿಂತಾಕ್ರಾಂತರಾದ ರೈತರು

ರಾಜ್ಯದ ಕೆಲವು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ನಿರಂತರ ಮಳೆಯಿಂದಾಗಿ ಕೆರೆಗಳು ನದಿಗಳು, ಜಲಾಶಯಗಳು ತುಂಬಿ ತುಳುಕುತ್ತಿವೆ. ಆದರೆ ಗಡಿ ಜಿಲ್ಲೆ ಬೀದರ್​ನಲ್ಲಿ ಮಾತ್ರ ಮಳೆರಾಯನ ಅವಕೃಪೆಯಿಂದಾಗಿ ಕೆರೆಯಲ್ಲಿ ನೀರಿಲ್ಲದೆ ಭಣಗುಡುತ್ತಿವೆ. ಇದು ಸಹಜವಾಗಿಯೆ ರೈತರ ಆತಂಕವನ್ನು ಹೆಚ್ಚಿಸಿದೆ.

ಮಳೆಗಾಲದಲ್ಲೂ ಬೀದರ್​ ಜಿಲ್ಲೆಯ 56 ಕೆರೆಗಳಲ್ಲಿ ನೀರೇ ಇಲ್ಲ, ಚಿಂತಾಕ್ರಾಂತರಾದ ರೈತರು
ಖಾಲಿಯಾಗಿರುವ ಕೆರೆ
Follow us
ಸುರೇಶ ನಾಯಕ
| Updated By: ವಿವೇಕ ಬಿರಾದಾರ

Updated on: Jul 29, 2024 | 1:12 PM

ಬೀದರ್, ಜುಲೈ 29: ರಾಜ್ಯದ ಕೆಲವು ಜಿಲ್ಲೆಯಲ್ಲಿ ಮಳೆರಾಯನ (Rain) ಅಬ್ಬರ ಜೋರಾಗಿದ್ದರೆ, ಬೀದರ್ (Bidar) ಜಿಲ್ಲೆಯಲ್ಲಿ ಮಾತ್ರ ಮಳೆಯ ಅಭಾವದಿಂದಾಗಿ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿಯಾಗಿವೆ. ರೈತರು (Farmers) ಬಿತ್ತನೆ ಮಾಡಿದ ಬೆಳೆಗೆ ಬೇಕಾದಷ್ಟು ಮಾತ್ರ ಮಳೆಯಾಗಿದೆ. ಆದರೆ ಕೆರೆಗಳು (Lake) ತುಂಬುವಷ್ಟು ಮಳೆ ಬಂದಿಲ್ಲ. ಹೀಗಾಗಿ ಕೆರೆಯಲ್ಲಿ ನೀರು ಸಂಗ್ರಹವಾಗಿಲ್ಲ. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 125 ಕೆರೆಗಳಿವೆ.

ಔರಾದ್ ತಾಲೂಕಿನಲ್ಲಿ 17 ಕರೆಗಳಿದ್ದು ಈ ಪೈಕಿ 6 ಕೆರೆಗಳು ಸಂಪೂರ್ಣ ಖಾಲಿಯಾಗಿದ್ದು, 11 ಕರೆಯಲ್ಲಿ ಅರ್ದಕ್ಕಿಂತಲೂ ಕಡಿಮೆ ನೀರಿದೆ. ಕಮಲನಗರ ತಾಲೂಕಿನಲ್ಲಿ 19 ಕೆರೆಗಳಿದ್ದು 4 ಕೆರೆಗಳು ಸಂಪೂರ್ಣವಾಗಿ ಖಾಲಿಯಾಗಿದ್ದು 15 ಕೆರೆಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ನೀರಿದೆ. ಬೀದರ್​ನಲ್ಲಿ 34 ಕೆರೆಗಳಿದ್ದು 8 ಕೆರೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇನ್ನುಳಿದ 26 ಕೆರೆಯಲ್ಲಿ ನೀರು ಅರ್ಧಕ್ಕಿಂತಲೂ ಕಡಿಮೆಯಿದೆ.

ಹುಮ್ನಾಬಾದ್​ನಲ್ಲಿ 7 ಕೆರೆಗಳಿದ್ದು 5 ಕೆರೆಗಳು ಸಂಪೂರ್ಣವಾಗಿ ಬತ್ತಿದ್ದು, 3 ಕೆರೆಯಲ್ಲಿ ಅರ್ಧಕ್ಕಿಂತಲೂ ಕಡಿಮೆ ನೀರಿದೆ. ಚಿಟಗುಪ್ಪಾ ತಾಲೂಕಿನಲ್ಲಿ 8 ಕೆರೆಗಳಿದ್ದು 6 ಕೆರೆಗಳು ಒಣಗಿ ಹೋಗಿದ್ದು ಇನ್ನುಳಿದ 2 ಕೆರೆಯಲ್ಲಿ ಶೇ5 ರಷ್ಟು ಮಾತ್ರ ನೀರಿದೆ.

ಬಸವಕಲ್ಯಾಣ ತಾಲೂಕಿನಲ್ಲಿ 21 ಕೆರೆಗಳಿದ್ದು ಅದರಲ್ಲಿ 14 ಕೆರೆಗಳು ಒಣಗಿದ್ದು, ಇನ್ನುಳಿದ 7 ಕೆರೆಯಲ್ಲಿ ಶೇ10 ರಷ್ಟು ಮಾತ್ರ ನೀರಿದೆ. ಹುಲಸೂರು ಹಾಗೂ ಭಾಲ್ಕಿ ತಾಲೂಕಿನಲ್ಲಿ 19 ಕೆರೆಗಳಿದ್ದು 17 ಕರೆಗಳು ಸಂಪೂರ್ಣವಾಗಿ ಬತ್ತಿಹೋಗಿದ್ದು, 2 ಕೆರೆಯಲ್ಲಿ ಅರ್ಧಕ್ಕಿಂತಲೂ ಕಡಿಮೆ ನೀರಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೀದರ್ ತಹಸೀಲ್ದಾರ್ ಕಚೇರಿಯಲ್ಲೇ ಶಿರಸ್ತೇದಾರ್​​ಗೆ ಚಾಕು ಇರಿತ

ಜಿಲ್ಲೆಯ 125 ಕೆರೆಯ ಪೈಕಿ 56 ಕೆರೆಗಳು ಸಂಪೂರ್ಣವಾಗಿ ಖಾಲಿಯಾಗಿದ್ದರೆ ಇನ್ನುಳಿದ ಕೆರೆಯಲ್ಲಿ ಅರ್ಧಕ್ಕಿಂತಲೂ ಕಡಿಮೆ ನೀರಿದೆ. ಬೀದರ್ ಜಿಲ್ಲೆಯ ಜೀವ ನಾಡಿ ಕಾರಂಜಾ ಸಂಗ್ರಹ ಸಾಮರ್ಥ್ಯ 7.691 ಟಿಎಂಸಿ ಇದೆ. ಈಗ ಡ್ಯಾಂನಲ್ಲಿ ನೀರು ಅರ್ಧ ದಷ್ಟು ಮಾತ್ರ ನೀರಿದೆ. ಡ್ಯಾಂ ಅರ್ಧಕ್ಕೆ ಅರ್ಧದಷ್ಟು ನೀರು ಖಾಲಿಯಿದ್ದು ಡ್ಯಾಂ ಪೂರ್ಣ ಪ್ರಮಾಣದಲ್ಲಿ ತುಂಬಬೇಕಾದರೆ ದೊಡ್ಡ ಪ್ರಮಾಣದಲ್ಲಿ ಮಳೆಯಾದರೆ ಮಾತ್ರ ಡ್ಯಾಂ ತುಂಬುತ್ತದೆ. ಇಲ್ಲವಾದರೆ ಡ್ಯಾಂ ತುಂಬುವುದಿಲ್ಲ ಡ್ಯಾಂ ತುಂಬದಿದ್ದರೆ ಮುಂಬರುವ ದಿನಗಳಲ್ಲಿ ಬೀದರ್ ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತೆ ಮಳೆಯಾಗದಿದ್ದರೆ ಮುಂಬರುವ ಬೆಸಿಗೆಯಲ್ಲಿ ಪ್ರಾಣಿ, ಪಕ್ಷೀಗಳು, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಇದರ ಜೊತೆಗೆ ಕೆರೆಯಲ್ಲಿ ನೀರು ಖಾಲಿಯಾದರೆ ಬೇಸಿಗೆಯಲ್ಲಿ ಅಂತರ್ಜಲ ಕುಸಿತದಿಂದಾಗಿ ಬೋರ್​ವೆಲ್​ನಲ್ಲಿಯೂ ನೀರು ಖಾಲಿಯಾಗಬಹುದು. ಇನ್ನೂ ಸೆಪ್ಟೆಂಬರ್​ವರೆಗೆ ಮಳೆಗಾಲ ಇದೆ. ಅಲ್ಲಿಯವರೆಗೆ ಉತ್ತಮ ಮಳೆಯಾಗುವ ನಿರೀಕ್ಷೆ ರೈತರಲ್ಲಿದೆ.

ಮಳೆಯ ಕೊರತೆಯಿಂದಾಗಿ ಡ್ಯಾಂಗೆ ಕೆರೆಗೆ ಒಂದಿಷ್ಟು ಕೂಡ ನೀರು ಹರಿದು ಬಂದಿಲ್ಲ ಹೀಗಾಗಿ ಬೆಸಿಗೆಯಲ್ಲಿ ಕೆರೆಗಳು ಹೇಗೆ ಖಾಲಿಯಿದ್ದವು, ಅದೆ ರೀತಿ ಮೆಳೆಗಾಲದಲ್ಲಿಯೂ ಖಾಲಿಯಿದ್ದು ದೊಡ್ಡ ಮಳೆಯಾದೆ ಹೋದರೆ ಕೆರೆಗಳು ಬರ್ತಿಯಾಗುವುದಿಲ್ಲ ಮುಂದೆ ಬೆಸಿಗೆಯಲ್ಲಿ ಪ್ರಾಣಿ ಪಕ್ಷೀಗಳಿಗೆ ನೀರಿನ ಸಮಸ್ಯೆ ಉಂಟಾಗುತ್ತದೆಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಮಳೆಯಾಗಿಲ್ಲ. ಇದರ ಪರಿಣಾಮ ಕೆರೆಗಳು ಬತ್ತಿದ್ದು ರೈತರಿಗೆ ತೋಂದರೆಯಾಗಿದ್ದಂತೂ ಸುಳ್ಳಲ್ಲ. ಆದಷ್ಟೂ ಬೇಗ ಮಳೆಯಾಗಿ ಕೆರೆಗಳು ತುಂಬಲಿ ಅಂತಾ ರೈತರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ