AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ವರ್ಷಗಳ ಬಳಿಕ ಬೀದರ್ ಉತ್ಸವ ನಡೆಸಲು ಜಿಲ್ಲಾಡಳಿತ ಸಿದ್ಧತೆ; ಮೊದಲು ರಸ್ತೆ ರಿಪೇರಿ ಮಾಡಿ ಸ್ವಾಮಿ ಎನ್ನುತ್ತಿರುವ ಜನ

ಉತ್ಸವ ನಡೆಸಲು ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದೆ. ಆದರೆ ಕೊಟ್ಯಾಂತರ ರೂಪಾಯಿ ವೆಚ್ಚಮಾಡಿ ಉತ್ಸವ ಮಾಡುವುದರ ಬದಲು ನಗರದ ರಸ್ತೆ ರಿಪೇರಿ ಮಾಡಿ, ಜನರಿಗೆ ಶುದ್ಧ ಕುಡಿಯುವ ನೀರು ಕೊಡಿ ಎಂದು ಜನ ಹೇಳುತ್ತಿದ್ದಾರೆ.

10 ವರ್ಷಗಳ ಬಳಿಕ ಬೀದರ್ ಉತ್ಸವ ನಡೆಸಲು ಜಿಲ್ಲಾಡಳಿತ ಸಿದ್ಧತೆ; ಮೊದಲು ರಸ್ತೆ ರಿಪೇರಿ ಮಾಡಿ ಸ್ವಾಮಿ ಎನ್ನುತ್ತಿರುವ ಜನ
ಬೀದರ್​
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Nov 22, 2022 | 3:01 PM

Share

ಬೀದರ್: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಒಂದು ದಶಕದ ಬಳಿಕ ಬೀದರ್ (Bidar) ಉತ್ಸವ ನಡೆಸಲು ಜಿಲ್ಲಾಡಳಿತವು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ 2023ರ ಜನವರಿ 7, 8, 9 ರಂದು ಉತ್ಸವ ನಡೆಸಲು ದಿನಾಂಕವನ್ನೂ ಘೋಷಿಸಲಾಗಿದೆ. ಉತ್ಸವ ನಡೆಸಲು ದಿನಾಂಕ ಘೋಷಣೆ ಮಾಡುವ ಮೊದಲು ಜಿಲ್ಲೆಯ ಹಲವು ಸಂಘ ಸಂಸ್ಥೆಗಳು, ಸಾರ್ವಜನಿಕರು, ಸಾಹಿತಿಗಳ ಜೊತೆಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸಭೆ ಮಾಡಿದ್ದರು. ಸಭೆಯಲ್ಲಿ ಬೀದರ್ ಉತ್ಸವ ನಡೆಸಲು ಪರ ಹಾಗೂ ವಿರೋಧಗಳು ಕೇಳಿ ಬಂದಿದ್ದವು.  ಸಭೆಯ ಹೊರತಾಗಿ ಜಿಲ್ಲೆಯ ಬಹುತೇಕ ಜನರು ಉತ್ಸವ ನಡೆಸಲು ಎಲ್ಲರೂ ಒಪ್ಪಿದ್ದಾರೆ. ಆದರೆ ಕೊಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡಿ ಉತ್ಸವ ಮಾಡುವ ಮೊದಲು ನಗರದಲ್ಲಿನ ರಸ್ತೆಗಳನ್ನು ಸರಿ ಪಡಿಸಿ, ನಂತರ ಉತ್ಸವ ಮಾಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದಾರೆ.

ಬೀದರ್ ನಗರದ ಬಹುತೇಕ ರಸ್ತೆಗಳು ಹಾಳಾಗಿವೆ. ನಗರದ ರಸ್ತೆಯಲ್ಲಿ ಓಡಾಡಲು ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ತುಂಬೆಲ್ಲ ದೂಳು ತುಂಬಿಕೊಂಡಿದ್ದು, ದೂಳಿನಲ್ಲಿಯೇ ವಾಹನ ಸವಾರರು ಸ್ನಾನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇಂತಹ ಹದೆಗೆಟ್ಟ ವಾತಾವರಣದಲ್ಲಿ ಕೊಟ್ಯಾಂತರ ರೂಪಾಯಿ ವೆಚ್ಚ ಮಾಡಿ ಉತ್ಸವ ಮಾಡುವ ಮೂಲಕ ನಮ್ಮ ಜಿಲ್ಲೆಯ ಮಾನ ಅಂತರಾಜ್ಯ ಮಟ್ಟದಲ್ಲಿ ಹೆಸರು ಕೆಡುವುದು ಬೇಡ. ಹೀಗಾಗಿ ರಸ್ತೆಯನ್ನು ಮೊದಲು ಮಾಡಿ ನಂತರ ಉತ್ಸವ ಮಾಡಿ ಎಂದು ಜನರು ಮನವಿ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲು ಅವಕಾಶಗಳಿದ್ದು, ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿಯೂ ಕೋಟೆಗಳು, ವಾಡೆಗಳು, ಚಾಲುಕ್ಯರ ಕಾಲದ ದೇವಾಲಯಗಳಿವೆ. ನಗರಗಳಲ್ಲಿ ಆರು ಶತಮಾನದಷ್ಟೂ ಹಳೆಯದಾದ ಬಹುಮನಿ ಸುಲ್ತಾನರ ಕಾಲದ ರಾಜಮಹಾರಾಜರ ಕಾಲದ ಗೋಡೆಗಳಿವೆ. ಇಲ್ಲಿನ ಇತಿಹಾಸ ಪ್ರಸಿದ್ಧ ಸ್ಮಾರಕಗಳನ್ನು ನೋಡಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಇಲ್ಲಿನ ಸ್ಮಾರಕಗಳ ವಿಕ್ಷಣೆ ಮಾಡಲು ಬರುವವರಿಗೆ ಇಲ್ಲಿನ ಇತಿಹಾಸವನ್ನ ಪರಿಚಯಿಸಲು ಗೈಡ್​ಗಳು ಇಲ್ಲ. ಪುರಾತತ್ವ ಮೌಲ್ಯ ಇರುವ ಹಲವು ಸಮಾಧಿ, ಕೋಟೆಗಳು ಹಾಳಾಗುತ್ತಿವೆ. ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿಲ್ಲ. ಆದರೆ ಕೊಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡಿ ಬೀದರ್ ಉತ್ಸವ ಮಾಡಿದರೆ ಬೀದರ್ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಆಗುತ್ತದೆಯೇ ಎಂದು ಜಿಲ್ಲೆಯ ಜನರು ಜಿಲ್ಲಾಡಳಿತಕ್ಕೆ ಹಾಗೂ ಸ್ಥಳಿಯ ರಾಜಕಾರಣಿಗಳಿಗೆ ಪ್ರಶ್ನೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ ಉತ್ಸವ ಮಾಡಿ ಪ್ರವಾಸಿಗರನ್ನ ಹೆಚ್ಚಿಸುತ್ತೇವೆಂದು ಹೊರಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇದನ್ನೂ ಓದಿ: ನಿಗದಿಯಾಗದ ಸೂಕ್ತ ಬೆಲೆ: ಪಕ್ಕದ ರಾಜ್ಯಗಳಿಗೆ ಕಬ್ಬು ಮಾರುತ್ತಿರುವ ಬೀದರ್ ಜಿಲ್ಲೆಯ ರೈತರು

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ