ನಿಗದಿಯಾಗದ ಸೂಕ್ತ ಬೆಲೆ: ಪಕ್ಕದ ರಾಜ್ಯಗಳಿಗೆ ಕಬ್ಬು ಮಾರುತ್ತಿರುವ ಬೀದರ್ ಜಿಲ್ಲೆಯ ರೈತರು
ಮಾರುಕಟ್ಟೆಗೆ ಹೋಗಿ ಯಾವುದೆ ವಸ್ತು ಕರೀದಿಸಬೇಕೆಂದರೆ ಅದಕ್ಕೆ ಸೂಕ್ತ ಬೆಲೆ ನಿಗದಿಯಾಗಿರುತ್ತದೆ. ಆದರೆ ರೈತರಿಂದ ಕಬ್ಬು ಕರೀದಿಸುವ ಸಕ್ಕರೆ ಕಾರ್ಖಾನೆ ಮಾಲೀಕರು ಮಾತ್ರ ಕಬ್ಬಿಗೆ ಸೂಕ್ತ ದರ ಮಾತ್ರ ನಿಗದಿ ಮಾಡಿಲ್ಲ. ಇದು ಸಹಜವಾಗಿ ಕಬ್ಬು ಬೆಳೆಗಾರರನ್ನು ಕುಗ್ಗುವಂತೆ ಮಾಡಿದೆ.
ಬೀದರ್: ಕಬ್ಬು ಬೆಳೆದ ರೈತರು ಕಬ್ಬು ಮಾರಾಟಕ್ಕೆ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಕ್ಕೆ ಹೋಗಿ ಮಾರಾಟ ಮಾಡಿ ಬರುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಕಬ್ಬಿಗೆ ಸೂಕ್ತ ಬೆಲೆ (Sugarcane Price) ಸಿಗದ್ದ ಹಿನ್ನೆಲೆ ಈ ಸ್ಥಿತಿ ನಿರ್ಮಾಣವಾಗಿದೆ. ಕಬ್ಬು ಕ್ರಷಿಂಗ್ ಆರಂಭಿಸಿ ತಿಂಗಳು ಕಳೆದರು ಸೂಕ್ತ ಬೆಲೆ ಮಾತ್ರ ಘೋಷಿಸಿಲ್ಲ. ಯಾವುದೇ ಒಂದು ವಸ್ತುವನ್ನ ನಾವು ಮಾರುಕಟ್ಟೆಗೆ ಹೋಗಿ ಅದನ್ನ ಖರೀದಿ ಮಾಡಬೇಕಾದರೆ ಅದಕ್ಕೆ ಸೂಕ್ತ ದರ ನಿಗದಿ ಮಾಡಿ ಅದನ್ನ ಖರೀದಿ ಮಾಡುವುದು ರೂಢಿಯಲ್ಲಿದೆ. ಆದರೇ ಬೀದರ್ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ (Sugar Factory) ಮಾಲೀಕರು ಕಬ್ಬಿಗೆ ಸೂಕ್ತ ದರ ನಿಗದಿ ಮಾಡದೆ ಮನಸ್ಸಿಗೆ ಬಂದಂತೆ ದರ ನಿಗದಿ ಮಾಡಿ ರೈತರಿಂದ ಕಬ್ಬನ್ನ ಖರೀದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗೆ, ಅವರ ಸಂಕಷ್ಟಕ್ಕೆ ಸ್ಪಂಧಿಸುವವರು ಯಾರು ಇಲ್ಲ ಎಂಬಂತಾಗಿದೆ. ಇದು ಸಹಜವಾಗಿ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಸೂಕ್ತ ದರ ನಿಗದಿ ಮಾಡದಿದ್ದರೂ ಬೇರೆ ವಿಧಿಯಿಲ್ಲದೆ ಒಂದಷ್ಟು ರೈತರು ಅನಿವಾರ್ಯವಾಗಿ ಬೆಳೆದ ಕಬ್ಬನ್ನ ಕಾರ್ಖಾನೆಗೆ ಕಳುಹಿಸಿಕೊಡುತ್ತಿದ್ದಾರೆ. ಇನ್ನೂ ಒಂದೊಂದು ಸಕ್ಕರೆ ಕಾರ್ಖಾನೆಯವರು ಒಂದೊಂದು ದರ ಕೊಡುತ್ತೇವೆಂದು ಹೇಳಿ ಕಬ್ಬು ಖರೀದಿಸುತ್ತಿದ್ದಾರೆ. ಆದರೆ ಇಷ್ಟೇ ಹಣವನ್ನ ನಾವು ನಿಮ್ಮ ಖಾತೆಗೆ ಹಣ ಹಾಕುತ್ತೇವೆಂದು ಹೇಳದೆ ಖರೀದಿಸುತ್ತಿದ್ದಾರೆ. ಹೀಗಾಗಿ ಬಹುತೇಕ ರೈತರು ಜಿಲ್ಲೆಯ ಕಾರ್ಖಾನೆಗೆ ಕಬ್ಬು ಹಾಕುವುದನ್ನ ಬಿಟ್ಟು ಪಕ್ಕದ ತೆಲಂಗಾಣ, ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೀದರ್: ಶ್ರೀಗಂಧ ಬೆಳೆದು ಗೆದ್ದ ಬೀದರ್ ರೈತರು
“ನಾವು ಬೆಳೆದ ಕಬ್ಬಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ರೈತರಿಗೆ ನಷ್ಟವಾಗುತ್ತಿದೆ. ದಯವಿಟ್ಟು ಎಲ್ಲಾ ಕಾರ್ಖಾನೆ ಮಾಲೀಕರು ಸೂಕ್ತ ಬೆಲೆ ನಿಗದಿ ಮಾಡಿ ಘೋಷಣೆ ಮಾಡಬೇಕು. ಮಾತ್ರಲ್ಲದೆ ಕಬ್ಬು ಹಾಕಿದ 15 ದಿವಸದ ಒಳಗಾಗಿ ಅದರ ಹಣವನ್ನು ರೈತರಿಗೆ ಪಾವತಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ” -ಪುಂಡಲಿಕ್, ಸಿರ್ಸಿ ಗ್ರಾಮದ ರೈತ
ಕಾರ್ಖಾನೆಗಳು ಕ್ರಷಿಂಗ್ ಆರಂಭಕ್ಕೂ ಮುನ್ನವೇ ಕಬ್ಬಿನ ದರವನ್ನು ಘೋಷಿಸಬೇಕು. ಆದರೆ ದರ ನಿಗದಿ ಮಾಡದೆ ಹಂಗಾಮು ಆರಂಭಿಸುವ ಪರಂಪರೆಯನ್ನು ಸಹಕಾರ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳು ಮುಂದುವರೆಸಿಕೊಂಡು ಬರುತ್ತಿವೆ. ಹೀಗಾಗಿ ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಟನ್ ಕಬ್ಬಿಗೆ ಎಷ್ಟು ಬೆಲೆ ಸಿಗುತ್ತದೆಯೋ ಎಂಬ ಗೊಂದಲದಲ್ಲೇ ಕಾರ್ಖಾನೆಗೆ ಕಬ್ಬನ್ನು ಸಾಗಿಸುವ ಸ್ಥಿತಿ ಬಂದಿದೆ.
ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ), ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ (ಎಂಜಿಎಸ್ಎಸಸ್ಕೆ), ಬೀದರ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ)ಗಳು ಮತ್ತು ಖಾಸಗಿ ಕಾರ್ಖಾನೆಗಳಾದ ಭಾಲ್ಕೇಶ್ವರ, ಬೀದರ ಕಿಸಾನ್, ಭವಾನಿ ಶುಗರ್ ಇದ್ದು, ಎಲ್ಲ ಕಾರ್ಖಾನೆಗಳು ಪ್ರಸಕ್ತ ಸಾಲಿಗೆ ಕ್ರಷಿಂಗ್ ಆರಂಭಿಸಿ ತಿಂಗಳು ಸಮೀಪಿಸಿವೆ. ಆದರೆ ಈವರೆಗೆ ಯಾವೊಂದು ಕಾರ್ಖಾನೆ ಸಹ ಕಬ್ಬಿನ ದರ ನಿಗದಿಪಡಿಸಿಲ್ಲ.
ಕಬ್ಬು ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರದ ಹಿಡಿತ ಇಲ್ಲವಾಗಿದೆ. ಕಬ್ಬಿಗೆ ಒಂದು ಸೂಕ್ತ ದರ ನಿಗದಿ ಮಾಡಿ ಕಬ್ಬು ಖರೀದಿ ಮಾಡಿ ಎಂದು ಹಲವುಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ಸಕ್ಕರೆ ಕಾರ್ಖಾನೆಯ ಮಾಲೀಕರು ಹಳೆಯ ಚಾಳಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಯಾವೊಂದು ಕಾರ್ಖಾನೆ ರೈತರಿಗೆ ಇತಿಂಷ್ಟೂ ಹಣ ಎಂದು ನಿಗದಿ ಮಾಡಿಲ್ಲ. ಬದಲಾಗಿ ರೈತರಿಗೆ ಬಾಯಿ ಮಾತಿನಲ್ಲಿ ಕ್ಷಿಂಟಾಲ್ಗೆ 2,200 ರೂ. ಕೊಡುವುದಾಗಿ ಹೇಳಿ ಕಬ್ಬನ್ನ ರೈತರಿಂದ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೇ ಹಣ ಕೊಡುವಾಗ ಎಷ್ಟು ಕೊಡುತ್ತಾರೆ ಅನ್ನೋದು ಮಾತ್ರ ರೈತರನ್ನ ಕಾಡುತ್ತಿದೆ. ಇಂತಹ ಸಮಸ್ಯೆ ಇದ್ದರೂ ಇದನ್ನು ಪ್ರಶ್ನಿಸುವ ತಾಕತ್ತು ಯಾವಬ್ಬ ಜನನಾಯಕನಲ್ಲಿ ಇಲ್ಲ ಎಂದು ರೈತ ಮುಂಖಡರು ಆಕ್ರೋಶ ಹೊರಹಾಕುತ್ತಿದ್ದಾರೆ.
“ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಂದ ಕಬ್ಬು ಖರೀದಿಸಿಕೊಂಡು ಹೋಗುತ್ತಾರೆ ವಿನಃ ಈವರೆಗೆ ಸೂಕ್ತ ಬೆಲೆ ನಿಗದಿ ಮಾಡಿಲ್ಲ. ಕಬ್ಬಿನ ಹಣವನ್ನೂ 15 ದಿವಸದ ಒಳಗಾಗಿ ಕೊಡುತ್ತಿಲ್ಲ. 15 ದಿನವಸದ ನಂತರ ಹಣ ನೀಡಿದರೆ ಅದಕ್ಕೆ ಬಡ್ಡಿ ನೀಡಬೇಕು ಎಂಬ ಆದೇಶ ಇದೆ. ಆದರೆ ತಡವಾಗಿ ಹಣ ಪಾವತಿಸಿದರೂ ಮಾಲೀಕರು ಬಡ್ಡಿಯನ್ನು ನೀಡುತ್ತಿಲ್ಲ. ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತುಕೊಂಡಿದೆ. ರೈತರ ಬಗ್ಗೆ ಕಾಳಜಿಯೇ ವಹಿಸುತ್ತಿಲ್ಲ. ಆಗುತ್ತಿರುವ ಅನ್ಯಾಯದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದರೂ ಜಿಲ್ಲಾಡಳಿತ ಮತ್ತು ಸರ್ಕಾರ ಕ್ಯಾರೇ ಎನ್ನುತ್ತಿಲ್ಲ” -ದಯಾನಂದ್ ಸ್ವಾಮಿ, ರೈತ ಮುಂಖಡ
ಕಳೆದ ಹಂಗಾಮಿನಲ್ಲಿ ಸಹಕಾರ ಸೇರಿ ಬಹುತೇಕ ಕಾರ್ಖಾನೆಗಳು ಟನ್ ಕೇವಲ 1,950 ರೂಪಾಯಿ ಪಾವತಿಸಿದ್ದು, 2,450 ರೂಪಾಯಿ ನೀಡಬೇಕೆಂಬ ಬೇಡಿಕೆಗೆ ಸ್ಫಂದನೆ ಸಿಕ್ಕಿಲ್ಲ. ಸರಕಾರದ ಆದೇಶಗಳು ಕಾಗದದ ಮೇಲಷ್ಟೆ ಇದ್ದು, ಕಬ್ಬು ಬೆಳೆದ ರೈತರಿಗೆ ಮಾತ್ರ ಇದರ ಲಾಭವಾಗುತ್ತಿಲ್ಲ. ಪಕ್ಕದ ಮಹಾರಾಷ್ಟ್ರ, ತೆಲಂಗಾಣ ಕಾರ್ಖಾನೆಗಳು ಕಳೆದ ವರ್ಷ ಟನ್ ಕಬ್ಬಿಗೆ 2,500 ರಿಂದ 2,700 ವರೆಗೆ ದರ ಕೊಟ್ಟಿದ್ದು, ಗಡೀ ಜಿಲ್ಲೆಯಲ್ಲಿ ಮಾತ್ರ 2,200 ಗಡೀ ದಾಟುತ್ತಲೇ ಇಲ್ಲ. ಇದು ಸಹಜವಾಗಿಯೇ ರೈತರ ಅಸಮಾದಾನಕ್ಕೆ ಕಾರಣವಾಗಿದೆ.
ವರದಿ: ಸುರೇಶ್ ನಾಯಕ್, ಟಿವಿ9 ಬೀದರ್
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:25 pm, Mon, 21 November 22