ಬೀದರ್: ಜಿಲ್ಲೆಯ ಕೋಟೆ ಆವರಣದಲ್ಲಿ ಜನೆವರಿ 7,8, ಮತ್ತು 9 ರಂದು ಮೂರು ದಿನಗಳ ಕಾಲ ಅದ್ದೂರಿಯಾಗಿ ಒಂದು ದಶಕದ ಬಳಿಕ ಬೀದರ್ ಉತ್ಸವ(Bidar Utsava) ನಡೆಸಲು ಜಿಲ್ಲಾಡಳಿತ ಭರದ ಸಿದ್ಧತೆಯನ್ನ ನಡೆಸಿದೆ. ಬೀದರ್ ನಗರದಲ್ಲಿ ಹದೆಗೆಟ್ಟಿದ್ದ ಎಲ್ಲಾ ರಸ್ತೆಯನ್ನ ಇದೀಗ ರೀಪೇರಿ ಮಾಡಲಾಗುತ್ತಿದೆ. ನಗರದ ರಸ್ತೆ ಬದಿಯಲ್ಲಿರುವ ಗೋಡೆಗಳ ಮೇಲೆ ವರ್ಲಿ ಚಿತ್ರಕಲೆಗಳನ್ನ ಜೊತೆಗೆ ಶಾಲೆಗಳ ಗೋಡೆಗಳ ಮೇಲೆ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನ ಬಿಡಿಸಲಾಗುತ್ತಿದ್ದು ಇದರ ಮೂಲಕ ಜಿಲ್ಲೆಯ ಮಕ್ಕಳಿಗೆ ಇಲ್ಲಿನ ಇತಿಹಾಸದ ಬಗ್ಗೆ ತಿಳಿಸುವ ಪ್ರಯತ್ನವನ್ನ ಇಲ್ಲಿ ಮಾಡಲಾಗುತ್ತಿದೆ.
ಉತ್ಸವದಲ್ಲಿ ಯಾವ ಯಾವ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ
ಮೂರು ದಿನಗಳ ಕಾಲ ನಡೆಯುವ ಬೀದರ್ ಉತ್ಸವದಲ್ಲಿ ಸಂಜಿತ್ ಹೆಗಡೆ, ಮಂಗಲಿ, ಅನುರಾಧ ಭಟ್, ವೀರ್ ಸಮರ್ಥ ತಂಡ, ವಿಜಯ ಪ್ರಕಾಶ ತಂಡ, ಹೀಗೆ ಕನ್ನಡ ಹಾಗೂ ಹಿಂದಿಯ ವಿವಿಧ ಕಲಾವಿದರು ಭಾಗವಹಿಸಿ ಜನರನ್ನ ರಂಜಿಸಲಿದ್ದಾರೆ. ಇದರ ಜೊತೆಗೆ ಮೂರು ದಿನಗಳ ಕಾಲ ವಿವಿಧ ಸ್ಫರ್ಧೆಗಳು ಕೂಡ ನಡೆಯಲಿದ್ದು ಪ್ರಮುಖವಾಗಿ ಮ್ಯಾರಾಥಾನ್ ಉತ್ಸವ, ಕ್ರೀಡಾ ಉತ್ಸವ, ಕುಸ್ತಿ, ಚಿತ್ರ ಕಲಾ ಉತ್ಸವ, ಗಾಳಿ ಪಟ ಉತ್ಸವ, ಏರ್ ಶೋ, ಪಶು ಮೇಳ, ರೈತ ಉತ್ಸವ, ಸಿಡಿ ಮದ್ದು ಉತ್ಸವ, ಉದ್ಯೋಗ ಮೇಳ, ಮಕ್ಕಳ ಆಟದ ಉತ್ಸವ. ಜಲೋತ್ಸವ, ವನ್ಯ ಜೀವಿ ಉತ್ಸವ, ಗಡಿನಾಡು ಕನ್ನಡಿಗರ ಉತ್ಸವಗಳು ನಡೆಯಲಿದ್ದು ಒಂದು ದಶಕದ ಬಳಿಕ ನಡೆಯುತ್ತಿರುವ ಬೀದರ್ ಉತ್ಸವವನ್ನ ಅಚ್ಚು ಕಟ್ಟಾಗಿ ಮಾಡಲು ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಯನ್ನ ಮಾಡಿಕೊಂಡಿದೆ.
ಬೀದರ್ ಉತ್ಸವದಿಂದ ಜಿಲ್ಲೆಗೆ ಲಾಭ
ಬೀದರ್ ಉತ್ಸವ ನಡೆಸುವುದರಿಂದ ಹತ್ತು ಹಲವಾರು ಪ್ರಯೋಜನೆಗಳು ಜಿಲ್ಲೆಗೆ ಆಗಲಿವೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಪ್ರವಾಸೋಧ್ಯಮಕ್ಕೆ ವಿಪುಲು ಅವಕಾಶಗಳಿದ್ದು ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿಯೂ ಕೋಟೆಗಳು, ವಾಡೆಗಳು, ಚಾಲುಕ್ಯರ ಕಾಲದ ದೇವಾಲಯಗಳಿವೆ. ಇನ್ನು ಉತ್ಸವ ಆಚರಣೆ ಮಾಡುವುದರಿಂದ ರಾಜ್ಯ ಹಾಗೂ ದೇಶದ ವಿವಿಧ ಭಾಗದಿಂದ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿನ ಪ್ರವಾಸಿ ಸ್ಥಳಗಳನ್ನ ನೋಡಿ ಇಲ್ಲಿನ ಮಹತ್ವದ ಬಗ್ಗೆ ಮತ್ತಷ್ಟು ಪ್ರವಾಸಿಗರಿಗೆ ಮಾಹಿತಿ ಕೊಡುತ್ತಾರೆ. ಹೀಗಾಗಿ ಉತ್ಸವ ನಡೆಯುವುದರಿಂದ ಜಿಲ್ಲೆಯ ಪ್ರವಾಸೋಧ್ಯಮ ದೃಷ್ಠಿಯಿಂದ ಒಳ್ಳೆಯದು ಎನ್ನುತ್ತಾರೆ ಸ್ಥಳೀಯರು.
ಮೂರು ದಿನಗಳ ಕಾಲ ವಿವಿಧ ಕ್ರೀಡೆಗಳು ನಡೆಯುತ್ತವೆ ಹೀಗಾಗಿ ನಮ್ಮ ದೇಶಿಯ ಸಂಸ್ಕೃತಿಯನ್ನ, ನಮ್ಮ ದೇಶಿಯ ಕ್ರೀಡೆ, ಕಲೆಗಳನ್ನ ಉಳಿಸಿ ಬೆಳೆಸುವುದು ಕೂಡಾ ಇದರಿಂದ ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲಾ ವಿಚಾರವನ್ನ ಮುಂದಿಟ್ಟುಕೊಂಡು ಬೀದರ್ ಉತ್ಸವವನ್ನ ಆಚರಣೆ ಮಾಡಲು, ಜಿಲ್ಲಾಡಳಿತ, ರಾಜಕಾರಣಿಗಳು, ಸಂಘ-ಸಂಸ್ಥೆಗಳು ಎಲ್ಲರೂ ಒಂದಾಗಿ ಬೀದರ್ ಉತ್ಸವ ಮಾಡಲು ನಿರ್ಧರಿಸಿದ್ದು ಒಳ್ಳೆಯ ವಿಚಾರವಾಗಿದೆ ಎಂದು ಜಿಲ್ಲೆಯ ಜನರು ಹೇಳುತ್ತಿದ್ದಾರೆ.
ಇದನ್ನೂ ಓದಿ:Hampi Utsav 2023: ಜನವರಿ 27ರಿಂದ 3 ದಿನಗಳ ಕಾಲ ಹಂಪಿ ಉತ್ಸವ: ಜಿಲ್ಲಾಡಳಿತ ತೀರ್ಮಾನ
ಪ್ರವಾಸೋಧ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳ
ಇನ್ನು ಜಿಲ್ಲೆಯು ಪ್ರವಾಸೋದ್ಯಮಕ್ಕೆ, ಪ್ರವಾಸಿಗರನ್ನ ಸೆಳೆಯಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಬೀದರ್ ಕೋಟೆ, ಮಹಮಹ್ಮದ್ ಗವಾನ್ ಪುರಾತನ ವಿಶ್ವವಿದ್ಯಾಲಯ, ಚೌಬಾದ್ ಹಾಗೂ ಅಷ್ಟೂರಿನಲ್ಲಿರುವ ಬಹುಮನಿ ಸುಲ್ತಾನರ ಸ್ಮಾರಕ, ನರಸಿಂಹ ಝರಣಾ, ಗುರುನಾನಕ ಝೀರಾ, ಬಸವಕಲ್ಯಾಕ ಕೋಟೆ, ಜಲಸಂಗ್ವಿ ಹಾಗೂ ನಾರಾಯಣಪುರದ ಐತಿಹಾಸಿಕ ಶಿವನ ದೇವಾಲಯಗಳಿವೆ. ಆದರೆ ಇಲ್ಲಿನ ಈ ಸ್ಥಳಗಳನ್ನ ನೋಡಲು ಬರುವ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ ಅದಕ್ಕೆ ಕಾರಣವೆಂದರೆ ಪ್ರಚಾರದ ಕೊರತೆ ಇದೆ ಹೀಗಾಗಿ ಬಿದರ್ ಉತ್ಸವ ಮಾಡುವುದರ ಮೂಲಕ ಪ್ರವಾಸಿಗರನ್ನ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದೆಂಬ ನಂಬಿಕೆ ಜಿಲ್ಲಾಡಳಿತದ್ದು.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ