ಬೀದರ್; ಖಾಸಗಿ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದ ಕಣ್ಣು ಕಳೆದುಕೊಂಡ ಮಹಿಳೆ
ಆಗಾಗ ವೈದ್ಯರ ಎಡವಟ್ಟಿಗೆ ಪ್ರಾಣ ಕಳೆದುಕೊಳ್ಳುವವರ ಕುರಿತು ವರದಿಯಾಗುತ್ತಲೇ ಇರುತ್ತದೆ. ಆದರೂ ಎಚ್ಚೆತ್ತುಕೊಳ್ಳದ ವೈದ್ಯರಿಂದ ಇದೀಗ ಬೀದರ್(Bidar)ನ ಗುಂಪ್ಪಾದಲ್ಲಿರುವ ವಿಜಯ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಯಡವಟ್ಟಿನಿಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರಾಂಪುರ ಗ್ರಾಮದ ಮಹಿಳೆಯೊಬ್ಬರು ತಮ್ಮ ಕಣ್ಣುಗಳನ್ನು ಕಳೆದುಕೊಂಡಿರುವ ಆರೋಪ ಕೇಳಿಬಂದಿದೆ.
ಬೀದರ್, ಫೆ.29: ಬೀದರ್(Bidar)ನ ಗುಂಪ್ಪಾದಲ್ಲಿರುವ ವಿಜಯ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರಾಂಪುರ ಗ್ರಾಮದ ವಂದನಾ, ಕಣ್ಣು ಕಳೆದುಕೊಂಡ ಮಹಿಳೆ. ಇವರು ಟೆಸ್ಟ್ ಟ್ಯೂಬ್ ಬೇಬಿಗಾಗಿ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಹೈಡೋಸ್ ಇಂಜೆಕ್ಷನ್ ಕೊಟ್ಟಿರುವ ಪರಿಣಾಮವಾಗಿ ಮಹಿಳೆ ಕಣ್ಣು ಕಳೆದುಕೊಂಡ ಆರೋಪ ಕೇಳಿಬಂದಿದೆ.
ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟ ಮಹಿಳೆ
ಇನ್ನು ಘಟನೆ ಕುರಿತು ಮಹಿಳೆ ವಂದನಾ ಅವರು ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ, ಒಂದು ವರ್ಷದಿಂದ ಕೂಡ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ಟೆಸ್ಟ್ ಟ್ಯೂಬ್ ಬೇಬಿ ಆಗಿಲ್ಲ. ಈ ಮಧ್ಯೆ ಹೈಡೋಸ್ ಇಂಜೆಕ್ಷನ್ ಮಾತ್ರೆಗಳಿಂದ ಮಹಿಳೆ ಕಣ್ಣು ಕಳೆದುಕೊಂಡಿದ್ದಾರೆ. ಈ ಹಿನ್ನಲೆ ವಂದನಾ, ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಜಿರಳೆ ಕಾಟ: ಮಕ್ಕಳು, ಬಾಣಂತಿಯರು ಪರದಾಟ
ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಿವೆಡ್ಡಿಂಗ್ ಶೂಟ್ ಮಾಡಿ ವಜಾ ಆಗಿದ್ದ ವೈದ್ಯ
ಚಿತ್ರದುರ್ಗ: ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬರುತ್ತಿದೆ. ಅದರಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಿವೆಡ್ಡಿಂಗ್ ಶೂಟ್ ಮಾಡಿಸಿದ್ದ ಗುತ್ತಿಗೆ ಆಧಾರಿತ ವೈದ್ಯ ಡಾ.ಜಗದೀಶ್ ಎಂಬುವವರನ್ನು ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದರು. ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಿವೆಡ್ಡಿಂಗ್ ಶೂಟ್ ವಿಡಿಯೋ ಮಾಡಲಾಗಿತ್ತು. ನಿಯಮ ಬಾಹಿರ ಕೃತ್ಯ, ಕರ್ತವ್ಯ ಲೋಪ ಹಿನ್ನೆಲೆ ಕೆಲಸದಿಂದ ವಜಾ ಮಾಡಲಾಗಿತ್ತು. ಇದೀಗ ಬೀದರ್ನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯೊಬ್ಬರು ಕಣ್ಣುಗಳನ್ನೇ ಕಳೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Thu, 29 February 24